ad

ಸಚಿವ ಮಧು ಬಂಗಾರಪ್ಪನವರಿಗೆ ಅಭಿನಂದನೆ ತಿಳಿಸಿದ ಕೆ.ಎಸ್.ಈಶ್ವರಪ್ಪ- K.S. Eshwarappa thanked Minister Madhu Bangarappa

 SUDDILIVE || SHIVAMOGGA

ಸಚಿವ ಮಧು ಬಂಗಾರಪ್ಪನವರಿಗೆ ಧನ್ಯವಾದ ತಿಳಿಸಿದ ಕೆ.ಎಸ್.ಈಶ್ವರಪ್ಪ-K.S. Eshwarappa thanked Minister Madhu Bangarappa.

Eshwarappa, Madhu bangarappa

ದೈವಜ್ಞ ಬ್ರಾಹ್ಮಣರನ್ನ ಶೈಕ್ಷಣಿಕವಾಗಿ ಸಾಮಾನ್ಯ ವರ್ಗದಿಂದ ಒಬಿಸಿಯ 2 ಎಗೆ ಸೇರಿಸಲಾಗಿದೆ. ಇದಕ್ಕೆ ಸಚಿವ ಮಧು ಬಂಗಾರಪ್ಪನವರಿಗೆ‌ಮಾಜಿ ಡಿಸಿಎಂ ಈಶ್ವರಪ್ಪ ಅಭಿನಂದನೆ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈದೈವಜ್ಞ ಸಮಾಜ ಹಿಂದಿಳಿದ ಸಮಾಜವಾಗಿದೆ ಸಾಮಾನ್ಯವರ್ಗಕ್ಕೆ ಶಿಫ್ಟ್ ಆಗಿತ್ತು. ಇದರ ಬಗ್ಗೆ ಹೋರಾಟ ನಡೆಸಲಾಗಿದೆ. ಇದು ತೊಂದರೆಯಾಗಿತ್ತು. ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಮನವಿ ಮಾಡಿದ್ದೆ. 2ಎಗೆ ಸೇರಬೇಕಿದ್ದ ದೈವಜ್ಞ ಬ್ರಾಹ್ಮಣ ಸಮುದಾಯ ಸಾಮಾನ್ಯವಾಗಿದೆ ಎಂದಾಗ ಬೆಂಗಳೂರಿಗೆ ಬರಲಿಕ್ಕೆ ಹೇಳಿದ್ದರು. ಸಚಿವರು ತಕ್ಷಣವೇ ಸ್ಪಂಧಿಸಿ 2 ಎಗೆ ಸೇರಿಸಿದ್ದಾರೆ ಅವರಿಗೆ ಅಭಿನಂದನೆ ಸಲ್ಪಿಸುವುದಾಗಿ ಹೇಳಿದರು.

ಸಿಎಂ ಸಿದ್ದರಾಮಯ್ಯರಿಗೆ ನಾಚಿಕೆ ಆಗಬೇಕು

 ಒಬಿಸಿ ನಿರ್ಲಕ್ಷಿಸಿರುವುದಾಗಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಪಶ್ಚಾತಾಪ ಪಟ್ಟಿದ್ದಾರೆ. ಕಾಳಜಿ ವಹಿಸಬೇಕಿತ್ತು ಎಂದು ಈಗ ಒಬಿಸಿ ಬಗ್ಗೆ ಜ್ಞಾನೋದಯವಾಗಿದೆ. ಇದು ನಿರ್ಲಕ್ಷವಿದೆ. ಸಿಎಂ ಸಿದ್ದರಾಮಯ್ಯ ಅದೇ ವೇದಿಕೆಯಲ್ಲಿ ಹೇಳಿದ್ದಾರೆ ಒಬಿಸಿ ಪರ ರಾಹುಲ್ ಇದ್ದಾರೆ ಎಂದಿದ್ದಾರೆ. ಇವರು ರಾಹುಲ್ ಗೆ ಬಕೆಟ್ ಹಿಡಿಯುವ ರೀತಿ ಎಂದು ಆರೋಪಿಸಿದರು. 

ಇನ್ಮುಂದೆಯಾದರೂ ಕಾಂಗ್ರೆಸ್ ಕಾಳಜಿ ವಹಿಸಬೇಕು.‌ ರಾಹುಲ್ ಅವರ ಪ್ರಾಮಾಣಿಕತೆಯನ್ನ  ಒಪ್ಪಿಕೊಳ್ಳುವೆ. ಸಿಎಂ ಸಿದ್ದರಾಮಯ್ಯ ರಾಜ್ಯದ ಜನ ಕ್ಷಮೆಕೇಳಬೇಕು. ಬಜೆಟ್ ನಲ್ಲಿಟ್ಟಿದ್ದ ಎಸ್ ಸಿ ಎಸ್ಟಿಯ 11804 ಕೋಟಿ ಹಣವನ್ನ ಈ ವರ್ಷನೂ 14 ಸಾವಿರ ಕೋಟಿಯನ್ನ ಗ್ಯಾರೆಂಟಿಗೆ ಬಳಸಿಕೊಳ್ಳಲಾಗಿದೆ ಒಟ್ಟು ಮೂರು ವರ್ಷದಲ್ಲಿ 37 ಸಾವಿರ ಕೋಟಿಯನ್ನ ಗ್ಯಾರೆಂಟಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಹಣವನ್ನ ಬಳಸಲಾಗಿದೆ. 

ಆ.05 ರಂದು ವಿಶೇಷ ಸಭೆ ಕರೆಯಲಾಗಿದೆ ಅಲ್ಲಿ ಪ.ಜಾ.ಮತ್ತು ಪ.ಪಂದವರ ಬಗ್ಗೆ ಸಭೆ ಮಾಡಲಾಗುತ್ತದೆ. ಒಬಿಸಿ, ದಲಿತರ ಹಣವನ್ನ ಗ್ಯಾರೆಂಟಿಗೆ ಹಣ ಬಳಸಿದ್ದಾರೆ. ಗ್ಯಾರೆಂಟಿಗೆ ಹಣವಿದೆ ಎನ್ನುವ ಸಿದ್ದರಾಮಯ್ಯ ಈ ಬಗ್ಗೆ ಮೌನವೇಕೆ. ಹಿಂದುಳಿದ ಕೇಂದ್ರ ಸಮಿತಿಗೆ ನೇಮಕರಾಗಿದ್ದ ಸಿದ್ದರಾಮಯ್ಯನವರನ್ನ ಕಾಂಗ್ರೆಸ್ ಮೊದಲು ಕೈಬಿಡಬೇಕು. ಕಾಂತರಾಜರ ವರದಿಯನ್ನ ಜಾರಿಗೆ ತರಲು ಇವರಿಗೆ ಸಾಧ್ಯವಾಗಿಲ್ಲ. ಇಂತಹ ಮೋಸಗಾರನ್ನ ಯಾವುದೇ ಕಾರಣಕ್ಕೂ ಮುಂದಿಟ್ಟುಕೊಳ್ಳಬೇಡಿ ಎಂದು ಆಗ್ರಹಿಸಿದರು. 

ಗ್ಯಾರೆಂಟಿಗೆ ಹಿಂದುಳಿದ ಮತ್ತು ದಲಿತರ ಹಣವನ್ನ ಕಿತ್ತುಕೊಡಬೇಡಿ. ಇದು ಮುಂದುವರೆದರೆ ಒಬಿಸಿ ಮತ್ತು ದಲಿತರು ದಂಗೆ ಏಳಲಿದ್ದಾರೆ. ಸರ್ಕಾರದಲ್ಲಿ ಬಹಳ ಮಜಾ ನಡೆಯುತ್ತಿದೆ. ಮಾಧ್ಯಮದಲ್ಲಿ ಬಂದ ವರದಿಯನ್ನ ಹೇಳ್ತಾಯಿದ್ದೇನೆ. ರಸಗೊಬ್ಬರ ಕೊರತೆಯಿಲ್ಲ ಎಂದು ಸಚಿವ ಚೆಲುವರಾಯ ಸ್ವಾಮಿ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯನವರು ರಸಗೊಬ್ವರಕ್ಕೆ ಕೇಂದ್ರಕ್ಕೆ ಪತ್ರ ಬರೆದಿರುವುದಾಗಿ ಹೇಳಿದ್ದಾರೆ. ಹಾಗಾದರೆ ಕಾಳಸಂತೆಗೆ ರಸಗೊಬ್ಬರ ಹೋಗ್ತಾಯಿದೆಯಾ? ಇದರ ಕಮಿಷನ್ ಸಿಗುತ್ತಾ ಎಙದು ದೂರಿದರು. 

ರಾಜ್ಯ ರೈತರ ಬಗ್ಗೆ ಒಬಿಸಿ ಹಾಗೂ ದಲಿತರು ದಂಗೆ ಏಳುವ ಮುನ್ನ ನಿಮ್ಮ ಸೀಟುಗಳನ್ನ ಸರಿಪಡಿಸಿಕೊಳ್ಳಿ ಎಂದು ಕಿವಿ ಮಾತನ್ನ ಆಡಿದರು. 

ದೈವಜ್ಞ ಬ್ರಾಹ್ಮಣ ಸಮಾಜದ ಗುರುಶೇಠ್ ಮಾತನಾಡಿ, ನಮ್ಮ ಸಮಾಜ ಶೈಕ್ಷಣಿಕ ಸಾಮಾನ್ಯ ಸ್ಥಾನದಲ್ಲಿತ್ತು. ಸಮಾಜದ ಪ್ರಮುಖರು ಈಶ್ವರಪ್ಪನವರ ಬಳಿಗೆ ಹೋದಾಗ ಸ್ಪಂಧಿಸಿದ ಬಿಇಒ ಡಿಡಿಪಿಐ ಜೊತೆ ಮಾತನಾಡಿ ಸರಿ ಪಡಿಸಿದ್ದಾರೆ. ಒಬಿಸಿಗೆ ಸೇರಿಸಲಾಗಿದೆ ಎಂದರು ಗುರಶೇಠ್ ತಿಳಿಸಿದರು. 

K.S. Eshwarappa thanked Minister Madhu Bangarappa.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close