SUDDILIVE || SAGARA
ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ-Criminal prosecution against guilty police officers
![]() |
ವಕೀಲ ರಾಜೇಶ್.ಎಸ್.ಬಿ |
ವಕೀಲರ ಮೇಲೆ ಹಲ್ಲೆ, ತಪ್ಪಿತಸ್ಥ ಪೋಲಿಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ದಿನಾಂಕ 28/2/2019 ರಂದು ರಾತ್ರಿ ಸಾಗರದ ಪ್ರಖ್ಯಾತ ವಕೀಲರಾದ ರಾಜೇಶ್ ಎಸ್. ಬಿ ಯವರ ಮೇಲೆ ಸಾಗರ ಪೇಟೆಯ ಮಾರ್ಕೇಟ್ ರಸ್ತೆಯಲ್ಲಿ ಗಲಾಟೆ ತೆಗೆದು ಹಲ್ಲೆ ಮಾಡಿದ ಪ್ರಕರಣ ನ್ಯಾಯಾಲಯದ ಪಿಸಿಆರ್ ಮೂಲಕ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಅಂದಿನ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಇ.ಓ ಮಂಜುನಾಥ್,ಪೊಲೀಸ್ ಪೇದೆ ಸೈನು ನದಾಫಾ,ಹೊಂ ಗಾರ್ಡ್ ಕೃಷ್ಣಪ್ಪ ಇವರ ಮೇಲೆ ವಕೀಲ ರಾಜೇಶ್ ಎಸ್.ಬಿ ಅವರು PCR 77/2019 ರಂತೆ ಸಾಗರದ ಮಾನ್ಯ PCJ & JMFC ನ್ಯಾಯಾಲದಲ್ಲಿ ಖಾಸಗಿ ದೂರನ್ನು ದಾಖಲಿಸಿದ್ದರು.
ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ FIR ಮಾಡಿ ಅದಕ್ಕೆ ' ಬಿ ವರದಿ'ಯನ್ನು ಸಲ್ಲಿಸಲಾಗಿತ್ತು. ಆದರೆ ವಿಚಾರಣೆ ನಡೆಸಿದ ಮಾನ್ಯ ಪಿ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಮಾದೇಶ್ ಎಂ.ವಿ. ಅವರು ಬಿ ವರದಿಯನ್ನು ತಳ್ಳಿಹಾಕಿ ತಪ್ಪಿತಸ್ಥ ಈ ಪೊಲೀಸ್ ಅಧಿಕಾರಿಗಳ ವಿರುದ್ಧ ಐ.ಪಿ.ಸಿ ಸೆಕ್ಷನ್ 193, 323, 337, 341, 342, 352, 355, 357, 504, 506, 34 ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಆದೇಶಿಸಿದ್ದಾರೆ. ಪಿರ್ಯಾದುದಾರರ ಪರ ಖ್ಯಾತ ವಕೀಲರಾದ ರಮೇಶ್ ಹೆಚ್.ಬಿ. ಶಿರವಾಳ ಇವರು ವಾದಿಸಿದ್ದರು.
Criminal prosecution against guilty police officers