SUDDILIVE ||SHIVAMOGGA
ಬಾಳೆಹೊನ್ನೂರಿನಲ್ಲಿ ಕುಮ್ಕಿ ಆನೆಗಳನ್ನಾಗಿ ಸಕ್ರೆಬೈಲಿನಿಂದ ನಾಲ್ಕು ಆನೆ ರವಾನೆ-Four elephants sent from Sakrebail to be used as Kumki elephants in Balehonnur
ಬಾಳೆಹೊನ್ನೂರಿನಲ್ಲಿ ವ್ಯಕ್ತಿಯೀರ್ವನ ಮೇಲೆ ಆನೆ ದಾಳಿ ನಡೆಸಿ ಸಾಯಿಸಿರುವ ಘಟನೆ ಅಲ್ಲಿನ ಸ್ಥಳೀಯರನ್ನ ರೊಚ್ಚಿಗೆ ಎಬ್ಬಿಸಿದ್ದು, ಆನೆ ಹಿಡಿಯಲು ಸರ್ಕಾರ ವಿಫಲವಾಗಿರುವುದನ್ನ ಖಂಡಿಸಿ ಬಂದ್ ಗೆ ಕರೆ ನೀಡಲಾಗಿದೆ.
ಈ ಬೆನ್ನಲ್ಲೇ ಸಕ್ರ ಬೈಲಿನಿಂದ ಕಾಡಾನೆಯನ್ನ ಸೆರೆ ಹಿಡಿಯಲು ಶಿವಮೊಗ್ಗದ ಸಕ್ರ ಬೈಲಿನಿಂದ 4 ಆನೆಗಳನ್ನ ಕಳುಹಿಸಲಾಗಿದೆ. ಸಾಗರ, ಬಾಲಣ್ಣ, ಬಹದ್ದೂರ್ ಹಾಗೂ ಸೋಮಣ್ಣ ಎಂಬ ನಾಲ್ಕು ಆನೆಗಳನ್ನ ಸಕ್ರಬೈಲಿನಿಂದ ಕಳುಹಿಸಲಾಗಿದೆ.
ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರಿನ ಅಂಡುಮನೆ ಗ್ರಾಮದಲ್ಲಿ ನಿನ್ನೆ ಸುಬ್ರಾಯಗೌಡ ಎಂಬ 65 ವರ್ಷದ ವೃದ್ಧ ಕಾಡಾನೆ ದಾಳಿಗೆ ಬಲಿಯಾಗಿದ್ದರು. ಕವಿತಾ ಎಂಬ ಮಹಿಳೆ ಗುರುವಾರವಷ್ಟೆ ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದು ಒಂದೇ ವಾರದಲ್ಲಿ ಎರಡು ಬಲಿಗಳಾದ ಬೆನ್ನಲ್ಲೇ ಬಾಳೆಹೊನ್ನೂರಿನಲ್ಲಿ ಆನೆ ಹಿಡಿಯುವಂತೆ ಆಗ್ರಹಿಸಿ ಬಂದ್ ಗೆ ಕರೆ ನೀಡಲಾಗಿತ್ತು. ಈ ಬೆನ್ನಲ್ಲೇ ನಾಲ್ಕು ಆನೆಗಳನ್ನ ಸಕ್ರೆಬೈಲಿನಿಂದ ಕಳುಹಿಸಲಾಗಿದೆ.
Four elephants sent from Sakrebail