SUDDILIVE || SHIVAMOGGA
ಪ್ರಿಯಾಂಕ್ ಖರ್ಗೆಯ ಸಚಿವ ಸ್ಥಾನ ಬದಲಿಸಿ- ದತ್ತಾತ್ರಿ-Priyank Kharge's ministerial position should be changed -
ಗ್ರಾಮೀಣಾಭಿವೃದ್ಧಿ ಮತ್ತು ಐಟಿಬಿಟಿ ದೊಡ್ಡ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಖಾತೆಯನ್ನ ಬೇರೆಯವರಿಗೆ ನೀಡುವಂತೆ ಕಾಂಗ್ರೆಸ್ ನ ಉಸ್ತುವಾರಿ ರಣದೀಪ್ ಸುರ್ಜೇವಾಲರಿಗೆ ಬಿಜೆಪಿ ರಾಜ್ಯ ಪ್ರಕೋಷ್ಠಗಳ ಅಧ್ಯಕ್ಷ ಎಸ್ ದತ್ತಾತ್ರಿ ಆಗ್ರಹಿಸಿದರು.
ಸುದ್ದಿಗೋಷ್ಠಿ ನಡೆಸಿದ ಅವರು, ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಶಿಫಾರಸ್ಸಿಗೆ ಒಳಗಾಗಿ ಎರಡೂ ಇಲಾಖೆಯನ್ನ ಅಸಮರ್ಥ ಸಚಿವ ಪ್ರಿಯಾಂಕ್ ಖರ್ಗೆಗೆ ನೀಡಿದ್ದಾರೆ ಎಂದು ಆರೋಪಿಸಿದರು.
ಅಬ್ದುಲ್ ನಜೀರ್ ಸಾಬ್ ಅವರನ್ನ ನೀರ್ ಸಾಬ್ ಎಂದು ಕರೆಯಲಾಗುತ್ತಿತ್ತು. ಅಬ್ದುಲ್ ನಜೀರರು ತಮ್ಮ ಸಚಿವ ಸ್ಥಾನಕ್ಕೆ ನ್ಯಾಯ ಒದಗಿಸಿಕೊಟ್ಟವರು. ಘೋರ್ಪಡೆ ಈ ಸಚಿವಾಲಯವನ್ನ ನಿರ್ವಾಹಿಸಿದರು. ಪ್ರಿಯಾಂಕ್ ಖರ್ಗೆ ಒಂದು ಗ್ರಾಮಕ್ಕೆ ಭೇಟಿ ನೀಡಿಲ್ಲ. ರಿಪಬ್ಲಿಕ್ ಆಫ್ ಕಲ್ಬುರ್ಗಿಯಲ್ಲೇ ಇರುವುದು ಬಿಟ್ಟರೆ ಬೇರೆಡೆ ಹೊದಂತೆ ಕಾಣಲಿಲ್ಲ. ಒಂದು ದಿನ ಇಲಾಖೆ ಸಾಧ್ಯನೆ ಮಾಡಲಿಲ್ಲ ಎಂದು ದೂರಿರು.
ಕೇಂದ್ರ ಮತ್ತು ಬಿಜೆಪಿಗೆ ಬೈಯ್ಯುವುದನ್ನೇ ಪ್ರಿಯಾಂಕ್ ಖರ್ಗೆ, ಸಚಿವ ಲಾಡ್ ತೊಡಗಿದ್ದಾರೆ. ಎಂ ವೈ ಘೋರ್ಪಡೆ ನಜೀರ್ ಸಾಬ್ ರಂತೆ ಕೆಲಸ ಮಾಡುವುದನ್ನ ಬಿಟ್ಟು ಬಿಜೆಪಿಯರನ್ನ ಬೈಯ್ದುಕೊಂಡು ಓಡಾಡಿದ್ದಾರೆ. ನಿನ್ನೆ ಪಾರ್ಟಿಯ ಪ್ರವಾಸವೆಂದು ಕಲ್ಬುರ್ಗಿಗೆ ಹೋಗಿದ್ದೆ. ಅನೇಕ ನೂನತೆ ಕಂಡುಬಂದಿದೆ. ಡ್ರಗ್ಸ್ ಸಾಗಾಣಿಕೆಯಲ್ಲಿ ಸಚಿವ ಖರ್ಗೆ ಅವರ ಆಪ್ತನ ಬಂಧನವಾಗಿದೆ. ರಾಜ್ಯದಲ್ಲಿ ಡ್ರಗ್ಸ್ ಮಾಫೀಯಾ ಜೋರಾಗಿದೆ.ಇದನ್ನ ತಡೆಯಬೇಕಿದ್ದ ಪೊಲೀಸರು ವಿಶ್ರಾಂತಿ ಪಡೆಯುತ್ತಿದ್ದಾರೆ.
ಇದಕ್ಕೆ ಜಿಲ್ಲೆಯಲ್ಲಿ ಪೊಲೀಸರು ಹೊರತುಪಡಿಸಿಲ್ಲ. ಮಲ್ಲಿಕಾರ್ಜುನ್ ಸೂಂಕ್ ಡ್ರಗ್ ದಂಧೆಯಲ್ಲಿದ್ದಾರೆ. ಈತನೂ ಪ್ರಿಯಾಂಕ್ ಅವರ ಸ್ನೇಹಿತನಾಗಿದ್ದಾನೆ. ಇದಕ್ಕೆ ಖರ್ಗೆ ಸಹಾಯವಿದೆ ಎನಿಸುತ್ತಿದೆ. 17 ಕೋಟಿ ರು. ನೆರೇಗಾದಲ್ಲಿ ಹಗರಣ ನಡೆಸಲಾಗಿದೆ. 25 ಜನರಿದ್ದರೆ 50 ಜನರ ಹೆಸರು ತೋರಿಸಿ ಹಣ ಲೂಟಿ ಮಾಡಲಾಗಿದೆ.
ಕಲ್ಬುರ್ಗಿ ಜಿಲ್ಲೆಯ ರಸ್ತೆವೊಂದರ ಹೆಸರಿನಲ್ಲಿ ಕಾಮಗಾರಿಯಾಗದೆ ಹಣ ಡ್ರಾ ಆಗಿದೆ. ಅದು ಮತ್ತೆ ನರೇಗಾ ಹೆಸರಿನಲ್ಲೂ ಹಣಡ್ರಾ ಆಗಿದೆ. ಎರಡು ಇಲಾಖೆಯಿಂದ ಹಣ ಪಡೆಯಲಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಸಾವಿರಾರು ಜನರ ಸಮಸ್ಯೆ ನಿವಾರಣೆಯಾಗಬೇಕಿತ್ತು. ಜಲಜೀವನ್ ಮಿಷನ್ ಬಗ್ಗೆ ಖರ್ಗೆ ಗಮನಹರಿಸುತ್ತಿಲ್ಲ. ಕೇಂದ್ರದ ಯೋಜನೆ ಜಾರಿಗೆ ತಂದರೆ ಮೋದಿಗೆ ಕ್ರೆಡಿಟ್ ಹೋಗಲಿದೆ ಎಂಬ ಕಾರಣ ಜಲಜೀವನ್ ಮಿಷನ್ ಬಗ್ಗೆ ಗಮನಹರಿಸುತ್ತಿಲ್ಲ ಎಂದು ದೂರಿದರು.
ಕಲ್ಬುರ್ಗಿಯ ಚಿತ್ತಾಪುರದಲ್ಲಿ ಅಕ್ರಮ ಮರಳುಗಾರಿಕೆ ನಡೆದಿದೆ. ಇದರಿಂದ 2500 ಕೋಟಿ ಹಣ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ. ಈ ಹಣ ಸಚಿವರಿಗೆ ಹೋಗುತ್ತಿದೆ. ಐಟಿ ಬಿಟಿಯಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ಕೊಡುವ ಇಲಾಖೆಯಾದರೂ ಎರಡು ವರ್ಷದಿಂದ ಇವರಿಗೆ ಉದ್ಯೋಗ ಕೊಡಿಸಲಾಗಲಿಲ್ಲ. ಆಪಲ್ ಕಂಪನಿ ತಮಿಳುನಾಡಿಗೆ ಇನ್ಫೋಸಿಸ್ ಸಂಸ್ಥೆ ಆಂದ್ರಕ್ಕೆ ಹೋಗಿದೆ ಹೀಗೆ ಅನೇಕ ಕಂಪನಿ ಬೇರೆಡೆಹೋಗಿದೆ. ಅಮೇರಿಕಾ ರಾಜ್ಯ ತಾಂತ್ರಿಕ ಶಿಷ್ಠಾಚಾರವನ್ನ ಹಿಂಬಾಲಿಸಿ ಪ್ರಯಾಣ ಬೆಳೆಸಬೇಕಿದ್ದ ಖರ್ಗೆ. ಅಮೇರಿಕಾ ಬೇಡ ಎಂದಿದ್ದಕ್ಕೆ ಮೊದಿಯ ಮೇಲೆ ಆರೋಪಿಸಿದ್ದರು. ಇದು ಅವರ ಕಾರ್ಯಕ್ಷಂತೆ ಎಂದು ದೂರಿದರು.
ಹಿರಿಯ ಸಚಿವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಐಟಿಬಿಟಿ ಸಚಿವ ಸ್ಥಾನವನ್ನ ಕೊಡದಂತೆ ಕಾಂಗ್ರೆಸ್ ನ ಸುರ್ಜೇವಾಲರಿಗೆ ಮನವಿ ಮಾಡಿದರು. ನೀವೊಬ್ಬ ಡೈಲಾಗ್ ಮಿನಿಸ್ಟರ್ ಎನಿಸಿಕೊಳ್ಳದೆ ಜನರಿಗೆ ಅನುಕೂಲವಾಗುವಂತೆ ಕೆಲಸ ಮಾಡಿ ಎಂದು ಸಲಹೆ ನೀಡಿದರು.
Priyank Kharge's ministerial position should be changed - Dattatri