SUDDILIVE || SHIVAMOGGA
ಯೂಟರ್ನ್ ಹೊಡೆದ್ರಾ ಪ್ರಣವಾನಂದ ಶ್ರೀಗಳು?Did pranavanada sri's make a U-turn?
ಸುದ್ದಿಗೋಷ್ಟಿ ನಡೆಸಲು ಬಂದಿದ್ದ ಈಡಿಗ ಸಮುದಾಯದ ಪ್ರಣವಾನಂದ ಶ್ರೀಗಳು ಸುದ್ದಿಗೋಷ್ಠಿ ನಡೆಸದೆ ಶಾಸಕ ಗೋಪಾಲಕೃಷ್ಣರಿಗೆ ಸಮಸ್ಯೆ ಹೇಳಿಕೊಂಡು ಹಾಗೆ ಎದ್ದುಹೋಗಿದ್ದ ಕುರಿತು ಮತ್ತೊಂದು ವಿಡಿಯೋ ಹರಿಬಿಟ್ಟಿದ್ದಾರೆ. ವಿಡಿಯೋದಲ್ಲಿ ಸ್ವಾಮೀಜಿಗಳು ಯೂಟರ್ನ್ ಹೊಡೆದಿರುವ ಭಾವನೆ ವ್ಯಕ್ತವಾಗಿದೆ.
ಸುದ್ದಿಲೈವ್ ಸೇರಿದಂತೆ ಕೆಲ ಮಾಧ್ಯಮಗಳು ಶಾಸಕರ ಬಳಿ ದೂರು ಹೇಳಿಕೊಂಡು ಸುದ್ದಿಗೋಷ್ಠಿ ನಡೆಸಲು ಬಂದಿದ್ದೆ ಎಂಬ ಕುರಿತು ಸುದ್ದಿ ಮಾಡಲಾಗಿತ್ತು. ಆ ಕುರಿತು ಸ್ವಾಮೀಜಿ ಯೂಟರ್ನ್ ಹೋಡೆದು ಕೆಲ ಸ್ಪಷ್ಟೀಕರಣವನ್ನೂ ವಿಡಿಯೋ ಮೂಲಕ ಮಾಧ್ಯಮಗಳಿಗೆ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಿಗಂದೂರು ಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಈಡಿಗ ಸಂಸ್ಥಾನದ ಪ್ರಣವಾನಂದ ಸ್ವಾಮೀಜಿ ಅವರಿಗೆ ಬಿಜೆಪಿ ನಾಯಕರು ಅಪಮಾನ ಮಾಡಿದ್ದಾರೆ ಎಂಬ ದೂರನ್ನ ಹೊತ್ತು ತಂದಿದ್ದ ಸ್ವಾಮೀಜಿಗಳು ಊಟದ ವ್ಯವಸ್ಥೆ ಮತ್ತು ಸ್ಥಳೀಯ ನಾಯಕರ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರದ ಸಿಗಂದೂರು ಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಈಡಿಗ ಸಂಸ್ಥಾನದ ಪ್ರಣವಾನಂದ ಸ್ವಾಮೀಜಿ ಅವರಿಗೆ ಬಿಜೆಪಿ ನಾಯಕರು ಅಪಮಾನ ಮಾಡಿದ್ದಾರೆ ಎಂಬ ಆರೋಪ ಮಾಡಿದ್ದರು. ಸಿಗಂದೂರಿನಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮಕ್ಕೆ ಹಾಜರಾದ ಸ್ವಾಮೀಜಿ, ಸ್ಥಳೀಯ ಬಿಜೆಪಿ ನಾಯಕರು ತನ್ನನ್ನು ಅವಮಾನಿಸಿದರೆಂದು ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣರಿಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಅಂಕೋಲದ ಬಳಿಯ ಶಿರೂರು ಗುಡ್ಡ ಕುಸಿತ ಸಂತ್ರಸ್ತರನ್ನು ಕರೆದುಕೊಂಡು ಹೋಗಿ, ಅವರಿಗೆ ಪರಿಹಾರ ನೀಡುವಂತೆ ಕೇಳಲು ಹೋಗಿದ್ದೆ. ನನ್ನ ಮಠಕ್ಕೆ ಹಣ ಕೇಳಲು ಹೋಗಿರಲಿಲ್ಲ. ಸಮಾಜದ ಕೆಲಸಕ್ಕಾಗಿ ಮಾತ್ರ ಆಗಮಿಸಿದ್ದೆ ಎಂದು ಸ್ವಾಮೀಜಿ ಹೇಳಿದ್ದರು.
ಮೂರು ದಿನಗಳ ಹಿಂದೆ ರಾಘವೇಂದ್ರ ನನ್ನನ್ನು ಕಾರ್ಯಕ್ರಮಕ್ಕೆ ಬರಲು ಹೇಳಿದರು. ಆದರೆ ನಮ್ಮನ್ನು ನಾಯಿ ಕೂಲಿಗೆ ಕೂರುವಂತೆ ಕುಳ್ಳಿರಿಸಿದ್ರು. ಅದನ್ನು ಬೇಳೂರುಗೋಪಾಲಕೃಷ್ಣ ಅವರಿಗೆ ಮೊಬೈಲ್‌ನಲ್ಲಿ ದೃಶ್ಯ ತೋರಿಸಿದರು.
ಈಗ ಈ ವಿಷಯಕ್ಕೆ ಸಭಂಧಿಸಿದಂತೆ ಪ್ರಣವಾನಂದ ಶ್ರೀಗಳು ಯೂಟರ್ನ್ ಹೊಡೆದಿದ್ದಾರೆ. ಸ್ಥಳೀಯ ಬಿಜೆಪಿ ನಾಯಕರಿಂದ ಅನ್ಯಾಯವಾಗಿಲ್ಲ. ಕೆಲ ಮಾಧ್ಯಮಗಳು ಹಾಗೆ ಬಿಂಬಿಸಿದ್ದಾರೆ. 15 ದಿನಗಳಲ್ಲಿ ಘಟನೆ ನಡೆದಿರುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
Did pranavanada sri's make a U-turn?