ad

ದೇವಸ್ಥಾನದ ಹುಂಡಿಯ ಹಣ ದೋಚಿದ ದುಷ್ಕರ್ಮಿಗಳು-Miscreants looted money from temple treasury

 SUDDILIVE || SHIVAMOGGA

ದೇವಸ್ಥಾನದ ಹುಂಡಿಯ ಹಣ ದೋಚಿದ ದುಷ್ಕರ್ಮಿಗಳು-Miscreants looted money from temple treasury

Looted, miscreants

ದೇವಸ್ಥಾನದ  ಬಾಗಿಲಿನ ಬೀಗ ಮುರಿದು ಹುಂಡಿ ಒಡೆದು ಕಾಣಿಕೆ ಹಣ ಕಳ್ಳತನ ಮಾಡಲಾಗಿದೆ. ಹುಂಡಿ ಒಡೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ತಾಲೂಕು ಕೋಟೆಗಂಗೂರಿನ ಅಜ್ಜಪ್ಪಸ್ವಾಮಿ ದೇವಸ್ಥಾನದಲ್ಲಿ ಜುಲೈ 12ರ ರಾತ್ರಿ ಕಳ್ಳತನವಾಗಿದೆ. ದೇವಸ್ಥಾನದ ಒಳಗೆ ನುಗ್ಗಿದ ಕಳ್ಳರು ಹುಂಡಿ ಒಡೆದು ಸುಮಾರು ₹60,000 ಕಾಣಿಕೆ ಹಣ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ದೂರಿನಲ್ಲಿ ಏನಿದೆ?

ಜು.12ರ ರಾತ್ರಿ 7 ಗಂಟೆಗೆ ಅರ್ಚಕ ಬಸವರಾಜಪ್ಪ ಪೂಜೆ ಮುಗಿಸಿ ದೇವಸ್ಥಾನದ ಬೀಗ ಹಾಕಿಕೊಂಡು ಹೋಗಿದ್ದರು. ಜು.13ರಂದು ಬೆಳಗ್ಗೆ ದೇವಸ್ಥಾನದ ಸ್ವಚ್ಛತಾ ಕಾರ್ಯಕ್ಕೆ ಜಯಣ್ಣ ಎಂಬುವವರು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸಿಸಿಟಿವಿಯಲ್ಲಿ ಕೃತ್ಯ ಸೆರೆ

ದೇವಸ್ಥಾನದಲ್ಲಿ ಹುಂಡಿ ಒಡೆದು ಕಳ್ಳತನ ಮಾಡಿದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರೇನ್ ಕೋಟ್ ಧರಿಸಿ ದೇವಸ್ಥಾನದ ಒಳಗೆ ನುಗ್ಗಿದ ಮೂವರು ಕಳ್ಳರು ಹುಂಡಿಯನ್ನು ಒಡೆದಿದ್ದಾರೆ. ಟವಲ್‌ನಲ್ಲಿ ಕಾಣಿಕೆ ಹಣನ್ನು ಸೇರಿಸಿ ಕೊಂಡೊಯ್ದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close