SUDDILIVE || SHIVAMOGG
ಸರ್ಕಾರಿ ಶಾಲಾ ವಿದ್ಯರ್ಥಿಗಳಿಗೆ ಪುಸ್ತಕ ವಿತರಣೆ-Distribution of books to government school students.
ಶಿವಮೊಗ್ಗ ನಗರದ ಹೊರವಲಯದ ಮಲವಗೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು. ಶಿವಮೊಗ್ಗದ ಪ್ರತಿಷ್ಠಿತ ಸಂಸ್ಥೆಯಾದ ಮ್ಯಾಂಗೋ ಲೀಫ್ ಹಾಲಿಡೇಸ್ ಸಂಸ್ಥೆ ವತಿಯಿಂದ ಇಂದು ಮಕ್ಕಳಿಗೆ ನೋಟ್ ಬುಕ್ಸ್ ನೀಡಲಾಯಿತು.
ಒಟ್ಟು 130 ವಿದ್ಯಾರ್ಥಿಗಳಿಗೆ ನೋಟ್ ಬುಕ್ ಗಳನ್ನು ಸಂಸ್ಥೆಯ ಮುಖ್ಯಸ್ಥ ಮಂಜುನಾಥ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆ ಉಳಿಸಬೇಕು ಬೆಳೆಸಬೇಕು ಎಂಬುದು ಸಂಸ್ಥೆಯ ಉದ್ದೇಶ. ಶಾಲೆ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಆಗಲೆಂದು ಸಂಸ್ಥೆಯ ವತಿಯಿಂದ ನೀಡಿದ್ದೇವೆ.
ಹಾಗೆ ಇನ್ನಿತರ ಉದ್ಯಮಿಗಳು ದಾನಿಗಳು ಸರ್ಕಾರಿ ಶಾಲೆಗಳಿಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಮ್ಯಾಂಗೋ ಲೀಫ್ ಹಾಲಿಡೇ ಸಂಸ್ಥೆಯ ಸಿಬ್ಬಂದಿಗಳು ರಾಜೇಶ್ವರಿ. ಅನ್ನಪೂರ್ಣ, ಸುಮಯ್ಯ, ರೋಹಿತ್,ತೇಜಸ್ ಸೇರಿದಂತೆ ಗ್ರಾಮಸ್ಥರಾದ ಶಶಿಕುಮಾರ್, ಗಿರೀಶ್, ಸಂತೋಷ್, ಗೋವಿಂದ್ ರಾಜ್ ಗಾಗೂ ವೆಂಕಟೇಶ್ ಉಪಸ್ಥಿತರಿದ್ದರು.
Distribution of books to government school students.