SUDDILIVE || SHIVAMOGGA
ಡಾ.ಅಶ್ವಿನ್ ಹೆಬ್ಬಾರ್ ಅಮಾನತು-Dr. Ashwin Hebbar suspend
ಸಿಮ್ಸ್ ನ ಎಂಎಸ್ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳದ ಆರೋಪದ ಅಡಿ ಬಂಧನಕ್ಕೊಳಗಾಗಿರುವ ಜನರಲ್ ಸರ್ಜರಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅಶ್ವಿನ್ ಹೆಬ್ಬಾರ್ ಅವರನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಜೂ.14ರಂದು ಹೋಟೆಲ್ ನಲ್ಲಿ ಪಾರ್ಟಿಗೆಂದು ತೆರಳಿದ್ದ ವೈದ್ಯರಿಂದ 2ನೇ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯ ಮೇಲೆ ಡಾ. ಅಶ್ವಿನ್ ಹೆಬ್ಬಾರ್ ಲೈಂಗಿಕ ಕಿರುಕುಳ ನೀಡಿದ್ದರೆಂಬ ಆರೋಪ ಕೇಳಿಬಂದಿತ್ತು. ಬಳಿಕ ಸಿಮ್ಸ್‌ನ ಆಂತರಿಕ ದೂರು ಸಮಿತಿಗೆ ದೂರು ನೀಡಲಾಗಿತ್ತು. ಅದರ ಆಧಾರದ ಮೇಲೆ ಮಹಿಳಾ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಎಫ್‌ಐಆರ್ ದಾಖಲಾಗುತ್ತಿದ್ದಂತೆ ವೈದ್ಯರು ತಲೆಮರೆಸಿಕೊಂಡಿದ್ದರು.
ಡಾ. ಅಶ್ವಿನ್ ಹೆಬ್ಬಾರ್ ಬಂಧನಕ್ಕೆ ಸಿಮ್ಸ್ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಪೀಪಲ್ಸ್ ಲಾಯರ್ಸ್ ಗಿಲ್ಡ್ ಅಸೋಸಿಯೇಷನ್‌ನ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಅಮಾನತುಗೊಳಿಸುವುದಲ್ಲದೆ, ಬಂಧನಕ್ಕೆ ಆಗ್ರಹಿಸಿದ್ದರು. ಜೂ.26ರಂದು ಡಾ. ಅಶ್ವಿನ್ ಹೆಬ್ಬಾರ್ ಅವರನ್ನು ಮಹಿಳಾ ಠಾಣೆ ಪೊಲೀಸರು ಬೆಂಗಳೂರಿನಲ್ಲಿ ವಶಕ್ಕೆ ಪಡೆದು ಜು.4ವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶವಾಗಿತ್ತು. ಬಂಧನವಾದ ಎರಡ್ಮೂರು ದಿನದಲ್ಲಿ ಜಾಮೀನಿನ ಮೇಲೆ ಅವರು ಬಿಡುಗಡೆಗೊಂಡಿದ್ದರು. ಇದೀಗ ಇಲಾಖೆ ವಿಚಾರಣೆ ಬಾಕಿ ಇರಿಸಿ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
Dr. Ashwin Hebbar suspend