ad

ಪ್ರತಿಭಟನೆಗೂ ಮುನ್ನಾ ಐವರು ಆಶಾ ಕಾರ್ಯಕರ್ತೆಯರ ರಾಜೀನಾಮೆ-Five ASHA workers resign ahead of protest

 SUDDILIVE. || HOSANAGARA

ಪ್ರತಿಭಟನೆಗೂ ಮುನ್ನಾ ಐವರು ಆಶಾ ಕಾರ್ಯಕರ್ತೆಯರ ರಾಜೀನಾಮೆ-Five ASHA workers resign ahead of protest

Asha worker, resign


ಶಿವಮೊಗ್ಗದ ರಿಪ್ಪನ್ ಪೇಟೆಯಲ್ಲಿ ಅತಿಯಾದ ಕೆಲಸದ ಒತ್ತಡ ಹಾಗೂ ಕಡಿಮೆ ಸಂಬಳದಿಂದ ಬೇಸತ್ತ ಐದು ಜನ ಆಶಾ ಕಾರ್ಯಕರ್ತೆಯರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ.

ಆಶಾ ಕಾರ್ಯಕರ್ತೆರಾದ ಶರವತಿ ಪದ್ಮಾವತಿ ನಗೀನ ಸುಶೀಲ ಮತ್ತು ಹಸೀನಾ ಗ್ರಾಮ ಪಂಚಾಯತಿ ಅಧ್ಯಕ್ಷ ಧನಲಕ್ಷ್ಮಿ ಗಂಗಾಧರಿಗೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.  16 ವರ್ಷದಿಂದ ತಾವುಗಳು ಆಶಾ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ನಮಗೆ ಮಾಸಿಕ ವೇತನ ಐದು ಸಾವಿರ ರೂಗಳು ಮತ್ತು ಗೌರವ ಧನ 2000ಗಳನ್ನು ನೀಡುತ್ತಿದ್ದು ಇದರಿಂದ ನಮ್ಮ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಕೆಲಸದ ಅತಿಯಾದ ಒತ್ತಡದಿಂದ ನಮ್ಮ ಆರೋಗ್ಯ ಹದಗಿಡುತ್ತಿದೆ ನಮಗೆ ಗರ್ಭಿಣಿ ಮತ್ತು ಬಾಣಂತಿಯರ ಆರೈಕೆ ಮಕ್ಕಳ ಆರೈಕೆ, ಮಕ್ಕಳ ಲಸಿಕೆ ಕಾರ್ಯಕ್ರಮ ಕಪ ಸಂಗ್ರಹಣೆ ಲಾರುವ ಸರ್ವೆ ಮನೆ ಮನೆ ಸಮೀಕ್ಷೆ ಮನೆಮನೆ ಸಮೀಕ್ಷೆ ಮೊಬೈಲ್ ಆಪ್ ಮೂಲಕ ಎನ್ ಸಿ ಡಿ ಕಾರ್ಯಕ್ರಮ ಅಂದತ್ವ ನೀವು ನಿರ್ವಹಣೆ ಕಾರ್ಯಕ್ರಮ ಮತ್ತು ಒಂದೂರಿಂದ 18 ವರ್ಷದೊಳಗಿನ ಆ ಮಕ್ಕಳ ಆಧಾರ್ ಕಾರ್ಡ್ ಸಂಗ್ರಹಣೆ ಇನ್ನಿತರ ಹಲವಾರು ಕೆಲಸಗಳನ್ನು ಮಾಡಬೇಕಾಗಿದೆ.

ಇದರಿಂದ ನಮಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಉಂಟಾಗುತ್ತಿದೆ ಇದರಿಂದ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಉಂಟಾಗಿದೆ ಆದ್ದರಿಂದ ತಾವುಗಳು ಪರಿಶೀಲಿಸಿ ಕೆಲಸದ ಒತ್ತಡ ಹೆಚ್ಚಿದ್ದು ಸಂಬಳ ಕಡಿಮೆ ಇದೆ ಜೀವನ ನಿರ್ವಹಣೆ ಮಾಡಲು ತೊಂದರೆ ಉಂಟಾಗುತ್ತಿದೆ ಈ ಕಾರಣದಿಂದ ನಾವುಗಳು ನೀಡುತ್ತಿರುವುದಾಗಿ ಇವರು ತಿಳಿಸಿದ್ದಾರೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

Five ASHA workers resign ahead of protest

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close