SUDDILIVE || SHIVAMOGGA
ಹಾಡೋನಹಳ್ಳಿಯಲ್ಲಿ ನಾಕೈದು ಕರಡಿಗಳು ಪ್ರತ್ಯಕ್ಷ-Five bears sighted in Hadonahalli
ಶಿವಮೊಗ್ಗ ತಾಲ್ಲೂಕಿನ ಹೊಳಲೂರು ಬಳಿಯ, ತುಂಗಾಭದ್ರೆಯರ ಅಂಗಳದಲ್ಲಿರುವ ಹಾಡೋನಹಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆಯಿಂದ ಏಕಾಏಕಿ ಐದಕ್ಕೂ ಹೆಚ್ಚು ಕರಡಿಗಳು ಓಡಾಡುತ್ತಿದ್ದು, ಇಡೀ ಜನಸ್ತೋಮ ಗಾಬರಿಯಿಂದ ಭಯಗೊಂಡಿದೆ.
ಗ್ರಾಮದ ಎಲ್ಲಾ ಕಡೆಗಳಿಂದ ಕರಡಿಗಳು ಪ್ರತ್ಯಕ್ಷವಾಗುತ್ತಿದ್ದು, ಗ್ರಾಮಕ್ಕೆ ಹೊಂದಿಕೊಂಡ ಬೆಟ್ಟದ ಹಾಗೂ ತೋಟಗಳ ಕಡೆಯಿಂದ ಊರೊಳಗೆ ಹಾಗೂ ಮನೆಯ ಹಿಂಭಾಗದ ಜಾಗದಲ್ಲಿ, ದೇವಸ್ಥಾನದ ಬಳಿ ಈ ಕರಡಿಗಳು ಓಡಾಡುತ್ತಿವೆ.
ಯಾರಿಗೂ ತೊಂದರೆ ನೀಡದಿದ್ದರೂ ಸಹ ಜನ ಗಾಬರಿಗೊಂಡಿದ್ದಾರೆ. ಕೂಡಲೇ ಇವುಗಳನ್ನು ಸೂಕ್ತವಾಗಿ ಹಿಡಿಯುವ ಮೂಲಕ ಕಾಡಿನೊಳಗೆ ಕಳುಹಿಸುವಂತೆ ಸಂಬಂಧಪಟ್ಟ ಅರಣ್ಯ ಇಲಾಖೆಯವರಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನಿನ್ನೆ ಸಂಜೆ ಏಕಾಏಕೀ ಕರಡಿಗಳು ಪ್ರತ್ಯಕ್ಷವಾಗಿದ್ದು, ಜನರು ಗುಂಪುಗೂಡಿ ಸದ್ದಿನ ಮೂಲಕ ಓಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಆದರೆ ಒಂಟಿಯಾಗಿ ಸಿಗುವ ವ್ಯಕ್ತಿಗಳ ಪರಿಸ್ಥಿತಿ ಕಷ್ಟವಾಗುತ್ತದೆ ಅದರಲ್ಲೂ ಹೆಣ್ಣು ಮಕ್ಕಳು ಇವುಗಳ ಎದುರು ಸಿಕ್ಕರೆ ಅತ್ಯಂತ ಕಷ್ಟ ಎಂಬುದು ಸಾರ್ವಜನಿಕ ಮಾತಾಗಿದ್ದು, ಕೂಡಲೇ ಅರಣ್ಯ ಇಲಾಖೆಯವರು ಇವುಗಳ ವರ್ಗಾವಣೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡುವಂತೆ ವಿನಂತಿಸಿದ್ದಾರೆ.
Five bears sighted in Hadonahalli