ad

ಸವಿತಾ ಸಮಾಜದ ಜಿಲ್ಲಾಧ್ಯಕ್ಷರ ಆಯ್ಕೆ ಬೈಲಾ ವಿರುದ್ಧವಾಗಿದೆ-ಎಂ.ಜಿ.ಬಾಲು-The election of Savita Samaj district president is against the bylaws - M.G. Balu

 SUDDILIVE || SHIVAMOGGA

ಸವಿತಾ ಸಮಾಜದ ಜಿಲ್ಲಾಧ್ಯಕ್ಷರ ಆಯ್ಕೆ ಬೈಲಾ ವಿರುದ್ಧವಾಗಿದೆ-ಎಂ.ಜಿ.ಬಾಲು-The election of Savita Samaj district president is against the bylaws - M.G. Balu

Savitha, samaj

ಜಿಲ್ಲಾ ಸವಿತಾ ಸಮಾಜದಲ್ಲಿ ಒಡಕು ಉಂಟಾಗಿದೆ. ಕಳೆದ ವಾರವಷ್ಟೆ ಪರಮೇಶ್ವರ್ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರು ಎಂದು ಪತ್ರಿಕಾ ಪ್ರಕಟಣೆ ನೀಡಿದ ಬೆನ್ನಲ್ಲೇ ಹಾಲಿ ಅಧ್ಯಕ್ಷ ಎಂಜಿ ಬಾಲು ಸುದ್ದಿಗೋಷ್ಠಿ ನಡೆಸಿ ಪರಮೇಶ್ವರ್ ಆಯ್ಕೆಯೇ ಬೈಲಾ ವಿರುದ್ಧವಾಗಿದ್ದು, ಅಧ್ಯಕ್ಷರು ಮತ್ತು ಇತರೆ ನಾಲ್ವರು ಸದಸ್ಯರ ವಿರುದ್ಧ ನೋಟೀಸ್ ನೀಡಿರುವುದಾಗಿ ಗುಡುಗಿದ್ದಾರೆ. 

ಸುದ್ದಿಗೋಷ್ಠಿ ನಡೆಸಿದ ಎಂ.ಜಿ ಬಾಲು 6 ತಿಂಗಳ ಹಿಂದೆ ಜಿಲ್ಲಾ ಸವಿತಾಸಮಾಜವನ್ನ ಬದಲಿಸುವುದಾಗಿ ಹೇಳಿಕೊಂಡು ಬಂದ ಪರಮೇಶ್ವರ್ ಅವರನ್ನ ಸಂಘಟನೆಗಾಗಿ ದುಡಿಯುವಂತೆ ತಿಳಿಸಿ ಉಪಾಧ್ಯಕ್ಷರನ್ನಾಗಿ ನೆಮಿಸಲಾಗಿತ್ತು. ಈಗ ಕಳೆದ ವಾರ ಅವರು ದಿಡೀರ್ ಎಂದು ಜಿಲ್ಲಾಧ್ಯಕ್ಷರನ್ನಾಗಿ ಘೋಷಿಸಲಾಗಿದೆ. 

ಸದಸ್ಯರ ಸಭೆ ನಡೆಸಿದಾಗ ನನಗೆ ಕೋರಂ ಇದೆ. ಜಿಲ್ಲಾಧ್ಯಕ್ಷರಾಗಲು ಕ್ಲೇಮ್ ಮಾಡಿದ್ದರು. ಸಭೆಯಲ್ಲಿ ಕೋರಂ ಸೇರಿದ ನಾಲ್ಕು ಜನರಿಗೆ ನೋಟಿಸ್ ನೀಡಲಾಗಿದ್ದು,  ಬೈಲಾ ವಿರುದ್ಧ ನಡೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ. 

ಅಧ್ಯಕ್ಷರನ್ನಾಗಿ ನೇಮಕಗೊಂಡ ಪರಮೇಶ್ವರ್ ಅವರಿಗೆ ನೋಟೀಸ್ ನೀಡಲಾಗಿದೆ. ಒಂದು ವಾರದಲ್ಲಿ ಅವರು ಉತ್ತರ ನೀಡಬೇಕು. ಅವರ ಉತ್ತರ ಬಂದ ನಂತರ ಮುಂದಿನ ಹೆಜ್ಜೆ ಇಡುವುದಾಗಿ ಎಂಜಿ ಬಾಲು ಸ್ಪಷ್ಟಪಡಿಸಿದ್ದಾರೆ. 

ಜಿಲ್ಲಾ ಮಟ್ಟದ ಯುವ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಶಿಕಾರಿಪುರದ ರಾಘವೇಂದ್ರ ಅವರನ್ನ ನೇಮಿಸಲಾಗಿದೆ‌. ಸಮಾಜದ ಜನ ಬೆಂಬಲಿಸದಂತೆ ಸ್ವಯಂ ಘೋಷಿತ ಅಧ್ಯಕ್ಷರಿಗೆ ಬೆಂಬಲಿಸಬಾರದು. ಜಿಲ್ಲಾ ಮಟ್ಟದ ಸೆನ್ಸ್ ಗೆ ಆಪ್ ಬಿಡುಗಡೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮನೆ ಮನೆಗೆ ಹೋಗಿ ಸದಸ್ಯತ್ಯವ ಅಭಿಯಾನ‌ ನಡೆಸಲಾಗುವುದು. ಜಿಕ್ಲಾ ಮಟ್ಟದ ಯುವ ಘಟಕದಲ್ಲಿ ಕ್ಷೌತಿಕ ವೃತ್ತಿಯನ್ನ ನಡೆಸಲಾಗುವುದು. ಸ್ಪಾಗಳಿಗೆ ಸ್ಪರ್ಧಿಸುವಂತೆ ಸ್ಥಿದ್ಧ ಮಾಡಲಾಗುವುದು ಎಂದರು.

The election of Savita Samaj district president is against the bylaws - M.G. Balu

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close