SUDDILIVE || SHIVAMOGGA
ಯತ್ನಾಳ್ ಹೇಳಿಕೆಗೆ ಮಾಜಿ ಡಿಸಿಎಂ ತಿರುಗೇಟು-Former DCM hits back at Yatnal statement
ಮಾಜಿ ಡಿಸಿಎಂ ಈಶ್ವರಪ್ಪ ಶಾಸಕ ಯತ್ನಾಳ್ ಗೆ ತಿರುಗೇಟು ನೀಡಿದ್ದಾರೆ. ನಾನು ಸುಮಾರು ಜನರಿಗೆ ಅರ್ಥ ಆಗೊಲ್ಲ ಎಂಬುದರ ಮೂಲಕ ಯತ್ನಾಳ್ ಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯಡಿಯೂರಪ್ಪನವರ ಮೊಮ್ಮಗನ ಮದುವೆಗೆ ಈಶ್ವರಪ್ಪ ಹಾಜರಾಗಿ ವಿಜೇಂದ್ರರ ಬಗ್ಗೆ ಹೊಗಳಿದ್ದರು. ಈ ಬಗ್ಗೆ ಯತ್ನಾಳ್ ಈಶ್ವರಪ್ಪನವರು ಅರ್ಥವಾಗದ ನಡೆ ಎಂದು ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಇಂದು ಈಶ್ವರಪ್ಪ ತಿರುಗೇಟು ನೀಡಿ ಅನೇಕರಿಗೆ ನಾನು ಅರ್ಥವೇ ಆಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ರಾಜ್ಯದ ತ್ರಿಮೂರ್ತಿಗಳಾದ ಸಿದ್ದರಾಮಯ್ಯ, ಹರಿಪ್ರಸಾದ್ ವಿರಪ್ಪ ಮೋಯ್ಲಿಯನ್ನ ದೇಶ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಲಹ ಸದಸ್ಯರಾಹಿ ಹೋಗುತ್ತಿದ್ದು ರಾಜ್ಯದಲ್ಲಿರುವ ಕಾಂತರಾಜು ವರದಿಯನ್ನಜಾರಿಗೆ ತರಲು ಆಯ್ಕೆ ಮಾಡಲಾಗಿದೆ. ಇಲ್ಲೇ ಹಿಂದುಳಿದವರಿಗೆ ನ್ಯಾಯಕೊಡಲು ಆಗಲಿಲ್ಲ ಅಲ್ಲಿ ಹೋಗಿ ಏನು ಮಾಡುತ್ತಾರೆ ಎಂದು ದೂರಿದರು.
ಮೋದಿಗೆ ಎದಯರಾಳಿಯಾಗಿ ಯಾರೂ ಬರಲು ಸಾಧ್ಯವಿಲ್ಲ. ಮಹಾಪುರುಷನಾಗಿ ಹೊರಹೊಮ್ಮಿದ್ದಾರೆ. ಮೋದಿಗೆ ಸರಿಸಾಟಿ ಎಂದು ಈ ಮೂವರು ಎಂದು ಬಿಂಬಿಸಲು ಹೊರಟಿದ್ದಾರೆ. ಅದು ಸಾಧ್ಯವಾಗದ ಮಾತು ಎಂದರು.
ಬಿಜೆಪಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ರಾಜೀನಾಮೆ ನೀಡುವ ಸಮಯ ಬಂದಿತ್ತು. ಆಗ ಸಿದ್ದರಾಮಯ್ಯನವರೇ ರಾಜೀನಾಮೆ ನೀಡಿ ರಾಜಕೀಯ ಮಾಡಲು ಆಗುತ್ತಾ ಎಂದಿದ್ದರು. ನನಗೆ ಕರೆ ಬಂದಿದೆ ರಾಜೀನಾಮೆ ನೀಡುವೆ ಎಂದು ಹೇಳಿದ್ದೆ. ಆಗ ಸಿದ್ದರಾಮಯ್ಯನವರಿಗೂ ಸೇರಿದಙತೆ ಅನೇಕರಿಗೆ ನಾನು ಅರ್ಥವಾಗಿಲ್ಲ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಮಸೀದಿಯಲ್ಲಿ ಧ್ವನಿವರ್ಧಕ ಬಳಕೆ ಬಗ್ಗೆ ಸೂಕ್ತ ಸೂಚಬೆ ಆದೇಶವಿದ್ದರೂ ರಾಜ್ಯ ಸರ್ಕಾರ ಗಮನಿಸದೆ ನಿರ್ಲಕ್ಷಿಸಿದೆ ಎಂದು ಮಾಜಿ ಸಚಿವ ಈಶ್ವರಪ್ಪ ಆಕ್ಷೇಪಿಸಿದರು. ಮಸೀದಿಯ ಧ್ವನಿ ವರ್ಧಕವನ್ನ ಹಗಲುಹೊತ್ತು 50 ಡೆಸಿಬಲ್, ರಾತ್ರಿ ಹೊತ್ತು 45 ಡೆಸಿಬಲ್ ಇರಬೇಕು ಎಂದು ಇದೆ. ಈಗ ಮಸೀದಿಗಳಲ್ಲಿ ಆಜಾನ್ ಕೂಗುವಾಗ ಉಪಯೋಗಿಸುವ ಧ್ವನಿ ವರ್ದಕಗಳಿಂದ ಹೆಚ್ಚಿನ ಶಬ್ದ ಮಾಲಿನ್ಯ ಉಂಟಾಗುತ್ತಿದೆ. ಸುತ್ತಮುತ್ತಲಿನ ಜನರಿಗೆ ಅನಾನುಕೂಲವಾಗಿದೆ ಎಂದು ದೂರಿದರು.
ಮಹಾರಾಷ್ಟ್ರದಲ್ಲಿ ಹಲವು ಸಂಘ ಸಂಸ್ಥೆಗಳು ದೊಡ್ಡಹೋರಾಟವನ್ನೇ ಪ್ರತಿಭಟನೆಯ ಫಲವಾಗಿ 1500 ಕ್ಕೂ ಹೆಚ್ಚು ಧ್ವನಿ ವರ್ದಕಗಳನ್ನ ಮಸೀದಿಗಳಿಂದ ತೆರವುಗೊಳಿಸಲು ಸಫಲವಾಗಿದೆ. ಆದರೂ ಮಸೀದಿಗಳು ಹೆಚ್ಚು ಧ್ವನಿ ಹೊರಸೂಸುವ ಲೌಡ್ ಸ್ಪೀಕರ್ ಬಳಸುವುದನ್ನ ನಿಯಂತ್ರಿಸಲು ಸಾಧ್ಯವಾಗಿಲ್ಲ.
ಈಗ ಆಧುನಿಕ ತಂತ್ರಜ್ಞಾನದ ಫಲವಾಗಿ ಮೊಬೈಲ್ ಫೋನ್ ಗಳಲ್ಲೇ ಆಜಾನ್ ಕರೆ ಕೇಳಲು ಮೊಬೈಲ್ ಅಪ್ಲೀಕೇಷನ್ ಬಂದಿದೆ. ರಾಜ್ಯ ಸರ್ಕಾರ ರೋಗಮುಕ್ತ ಮನಸದಥಿತಿಯಿಂದ ಹೊರಬಂದು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಈಶ್ವರಪ್ಪ ನಮ್ಮಸರ್ಕಾರವಿದ್ದಾಗ ಈ ಆದೇಶ ನಮ್ಮ ಗಮನಕ್ಕೆ ಬಾರದ ಹಿನ್ನಲೆಯಲ್ಲಿ ಕ್ರಮ ಜರುಗಿಸಿಲ್ಲ ಎಂದು ಆಕ್ಷೇಪಿಸಿದರು.
ಮೊಬೈಲ್ ಅಪ್ಲೀಕೇಷನ್ ನ್ನ ಅಭಿವೃದ್ಧಿ ಪಡಿಸಿಕೊಂಡು ಮಸೀದಿಗಳು ಈ ಅಪ್ಲಿಕೇಷನ್ ನ್ನ ಡೌನ್ ಲೋಡಗ ಮಾಡಿಕೊಂಡು ಸುತ್ತಮುತ್ತಲಿನ ಮುಸ್ಲೀಮರಿಗೆ ಆಜಾಬ್ ಸಂದೇಶ ನೀಡಲಾಗುತ್ತಿದೆ. ಇದರಿಂದ ಆಜಾನ್ ಕೂಗುವುದರಿಂದ ಆಗುವ ಶಬ್ದ ಮಾಲಿನ್ಯವನ್ನ ತಡೆಯಬಹುದಾಗಿದೆ. ಮಹಾರಾಷ್ಟ್ರದ ಮಹೀಮ್ ಜುಮಾ ಮಸೀದಿಯ ಫಹಾದ್ ಖಲೀಲ್ ಪಠಾಣ್ ಹೇಳುವ ಪ್ರಕಾರ ನಾವು ಆಧುನಿಕ ತಂತ್ರಜ್ಞಾನವನ್ನ ಅಳವಡಿಸಿಕೊಂಡು ನೇರವಾಗಿ ನಮ್ಮ ಜನರಿಗೆ ಆಜಾನ್ ನ್ನ ಪ್ರಸಾರ ಮಾಡುತ್ತಾರೆ.
ಆದ್ಯಾತ್ಮಿಕವಾಗಿ ನಾವು ನಮ್ಮ ಪವಿತ್ರ ಆಚರಣೆಗಳನ್ನ ನಮ್ಮವರಿಗೆ ತಿಳಿಸಲು ಮತ್ತು ಇತರ ಧರ್ಮೀಯರಿಗೆ ಆಜಾನ್ ಕೇಳುವುದರಿಂದ ತೊಂದರೆ ಆಗುವುದನ್ನ ನಮ್ಮವರಿಗೆ ತಿಳಿಸಲು ಮತ್ತು ಧರ್ಮೀಯರಿಗೆ ಆಜಾನ್ ಕೇಳುವುದರಿಂದ ತೊಂದರೆ ಆಗುವುದನ್ನ ತಪ್ಪಿಸಲು ಈ ತಂತ್ರಾಂಶವು ತುಂಬ ಸಹಕಾರಿಯಾಗಿದೆ ಎಂದು ಪಠಾಣ್ ಹೇಳುತ್ತಾರೆ. ಈ ಬಗ್ಗೆ ಸರ್ಕಾರ ಕಾನೂನು ಪರಿಪಾಲಿಸಬೇಕು ಎಂದರು.
Former DCM hits back at Yatnal statement