SUDDILIVE || SHIVAMOGGA
ಮೈದೊಳುವಿನಲ್ಲಿ ಎರಡುದಿನ ಮೊಹರಂ ಆಚರಣೆ-Two-day Muharram celebration in Mydolalu
ಸಮೀಪದ ಮೈದೊಳಲಿನಲ್ಲಿ ಎರಡು ದಿನಗಳ ಕಾಲ ಗ್ರಾಮಸ್ಥರೆಲ್ಲರು ಸೇರಿ ಶ್ರದ್ಧಾಭಕ್ತಿಯಿಂದ ಮೊಹರಂ ಹಬ್ಬವನ್ನು ಆಚರಿಸಿದರು.
ಸುರಿಯುವ ಮಳೆಯನ್ನು ಲೆಕ್ಕಿಸದೆ ಊರ ಹಬ್ಬದಂತೆ ಸಡಗರ ಸಂಭ್ರಮದಿಂದ ಹಿಂದೂ ಮತ್ತು ಮುಸ್ಲೀಂ ಇಬ್ಬರು ಸೇರಿ ಮೊಹರಂ ಹಬ್ಬವನ್ನು ಆಚರಿಸಿದ್ದು ವಿಶೇಷವಾಗಿತ್ತು. ಶನಿವಾರ ಸಂಜೆ ಗ್ರಾಮದ ರಾಜಭಕ್ಷವಾಲಿ ಸುನ್ನಿ ಮಕಾನ್ ದೇವಸ್ಥಾನದ ಮುಂಭಾಗ ತೆಗೆದಿದ ಗುಂಡಿಯಲ್ಲಿ ಕಟ್ಟಿಗೆ ತುಂಡುಗಳನ್ನು ಹಾಕಿದರು.
ಅಲ್ಲಾಹುವಿನಿಗೆ ಸಕ್ಕರೆ, ಚೊಂಗೆ, ಮಲ್ದಿ ಸೇರಿದಂತೆ ವಿವಿಧ ಸಿಹಿ ಖಾಧ್ಯಗಳನ್ನು ನೈವೆದ್ಯವಾಗಿ ಅರ್ಪಿಸಿದ ಗ್ರಾಮಸ್ಥರು ಹರಕೆ ಕಾಣಿಕೆಗಳನ್ನು ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಶನಿವಾರ ತಡ ರಾತ್ರಿ ಕಟ್ಟಿಗೆಗೆ ಬೆಂಕಿ ನೀಡಿದ ಗ್ರಾಮಸ್ಥರು ಬೆಳಗಿನ ವರೆಗೂ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಭಾನುವಾರ ನಸುಕಿನಲ್ಲಿ ಜಾತಿ ಬೇದ ಮರೆತು ಮಕ್ಕಳಾದಿಯಾಗಿ ಕೆಂಡಾಹಾಯ್ದು ಭಕ್ತಿ ಸಮರ್ಪಿಸಿದರು. ಕೆಂಡ ಹಾಯ್ದ ಬಳಿಕ ನಡೆದ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಪಂಜಾ ಹಾಗೂ ಪಲ್ಲಕಿ ಹೊತ್ತು ಸಾಗಿದರು.
ಭಾನುವಾರ ಸಂಜೆ ಗ್ರಾಮದ ಆಂಜನೇಯ ದೇವಸ್ಥಾನದ ಮುಂಭಾಗ ಇರಿಸಲಾಗಿದ ಮೆರವಣಿಗೆಯಲ್ಲಿ ಮಕ್ಕಳು ವಿವಿಧ ವೇಷ ತೊಟ್ಟು ಬಂದು ರಂಜಿಸಿದರು. ಪೋಷಾಕು ತೊಟ್ಟವರಿಗೆ ಪ್ರಸಾದದ ರೂಪವಾಗಿ ಒಣ ಕೊಬ್ಬರಿಯನ್ನು ನೀಡಲಾಯಿತ್ತು. ಹರಕೆ ಹೊತ್ತವರು ಮೆಣಸಿಕಾಳು ಹಾಗೂ ಮಂಡಕ್ಕಿಯನ್ನು ಎರೆಚಿದರು.
ಹರಿಕೆ ಹೇಳಿಕೊಂಡವರು ದೇವರ ಮುಂದೆ ಒಣ ಕೊಬ್ಬರಿ ಸುಟ್ಟು ಶ್ರದ್ದಾ ಭಕ್ತಿಯಿಂದ ಮೊಹರಂ ಹಬ್ಬವನ್ನು ಆಚರಿಸಿದರು. ಭಾನುವಾರ ರಾತ್ರಿ ಗ್ರಾಮದ ಏಳುಹಳ್ಳದ ನಾಲೆಯಲ್ಲಿ ದೇವರನ್ನು ವಿಸರ್ಜಿಸಿ ಹಬ್ಬಕ್ಕೆ ಮುಕ್ತಾಯವಾಯಿತ್ತು. ಮೊಹರಂ ಹಬ್ಬದ ವಿದಿಗಳನ್ನು ಗ್ರಾಮ ಸಮೀತಿ ಹಾಗೂ ಗ್ರಾಮಸ್ಥರು ಮುಂದೆ ನಿಂತು ಅಚ್ಚುಕಟ್ಟಾಗಿ ನೆರವೇರಿಸಿದರು.
Two-day Muharram celebration in Mydolalu