SUDDILIVE || SHIVAMOGGA
ರಾಜ್ಯಕ್ಕೆ ಸುರ್ಜೇವಾಲ ಸುಮ್ನೆ ಬಂದಿಲ್ಲ-ವಿಜೇಂದ್ರ-Surjewala is not coming to Karnataka without any expectation-Vijendra
ರಾಜ್ಯಕ್ಕೆ ಸುರ್ಜೇವಾಲ ಸುಮ್ನೆ, ಸುಮ್ನೆ ಬರಲ್ಲ. ಅವರು ಏನೋ ಅಜೆಂಡಾ ಇಟ್ಟುಕೊಂಡೆ ಬರ್ತಿದ್ದಾರೆ ಎಂದು ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಇದಕ್ಕೆ ತಾಜಾ ಉದಾಹರಣೆ ಹಾಸನದಲ್ಲಿ ಸರಣಿ ಸಾವು ನಡೆಯುತ್ತಿದೆ. ಯುವಕರು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಅಲ್ಲಿನ ಉಸ್ತುವಾರಿ ಸಚಿವರು ಅಲ್ಲಿಗೆ ಕಳೆದ ಮೂರು ತಿಂಗಳಿನಿಂದ ಭೇಟಿ ನೀಡಿಲ್ಲ. ಕಳೆದ ಮೂರು ತಿಂಗಳಿನಿಂದ ಸಚಿವರು ಭೇಟಿ ನೀಡದೇ ಬೇಜವಬ್ದಾರಿತನ ತೋರುತ್ತಿದ್ದಾರೆ ಎಂದರು.
ಸರ್ಕಾರ ಬೇಜವಬ್ದಾರಿತನ ಪ್ರದರ್ಶನ ಮಾಡುತ್ತಿದೆ ಎನ್ನುವುದಕ್ಕೆ ಮತ್ತೊಂದು ಪುರಾವೆಗಳು ಬೇಡ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಸಿಎಂ ಸಿದ್ಧರಾಮಯ್ಯನವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಗ್ಯಾರಂಟಿ ನಿಲ್ಲಿಸುತ್ತೇವೆ ಎನ್ನುತ್ತಿದ್ದಾರೆ. ರಸ್ತೆಗಳು, ಅಭಿವೃದ್ಧಿ ಮಾಡಬೇಕು ಎಂದರೆ ಹಣ ಇಲ್ಲ. ಗ್ಯಾರಂಟಿ ಯೋಜನೆ ನಿಲ್ಲಿಸಬೇಕು ಎನ್ನುತ್ತಿದ್ದಾರೆ.ಅವರು ಸಿಎಂ ನಿರ್ದೇಶನದ ಮೇರೆಗೆ ಹೇಳಿದ್ದಾರೆ ಎಂದರು.
ಬಿಜೆಪಿ ಸಲಹೆ ನೀಡದರೆ ತೆಗೆದುಕೊಳ್ಳುತ್ತಿಲ್ಲ. ಸರ್ಕಾರಿ ನೌಕರರಿಗೂ ಸಂಬಳವಾಗುತ್ತಿಲ್ಲ ಎಂದರೆ ಸರ್ಕಾರದ ಆರ್ಥಿಕ ಪರಿಸ್ಥಿತಿ ತಿಳಿಯುತ್ತಿದೆ. ಇಂತಹ ಆರ್ಥಿಕ ದುಸ್ಥಿತಿಗೆ ತಲುಪಿದೆ. ಇದನ್ನು ಹೇಳಿದರೆ ಸಿಎಂ ಎಲ್ಲವೂ ಸರಿ ಇದೆ ಎನ್ನುತ್ತಿದ್ದಾರೆ. ಆದರೆ ಅವರದೇ ಆರ್ಥಿಕ ಸಲಹೆಗಾರರು ಈ ರೀತಿ ಹೇಳುತ್ತಿದ್ದಾರೆ. ಅಭಿವೃದ್ಧಿಗೆ ಹಣ ಇಲ್ಲ ಎನ್ನುವುದು ಸಾಬೀತಾಗಿದೆ ಎಂದರು.
ಜನ ಬೇಸತ್ತಿದ್ದಾರೆ
ರಾಜ್ಯದಲ್ಲಿ ಸರ್ಕಾರದ ಬಗ್ಗೆ ಜನರು ಬೇಸತ್ತಿದ್ದಾರೆ. ಇಂತಹ ಸರ್ಕಾರ ಅಧಿಕಾರಕ್ಕೆ ತಂದಿದ್ದೆವಲ್ಲ ಎಂದು ಜನರು ಪಶ್ಚಾತ್ತಾಪ ಪಡುತ್ತಿದ್ದಾರೆ. ಇದು ವಾಸ್ತವಿಕ ಸತ್ಯ. ಮುಖ್ಯಮಂತ್ರಿ ಸ್ಥಾನದ ಬಗ್ಗೆಯೂ ಅನಿಶ್ಚಿತತೆ ಕಾಡುತ್ತಿದೆ. ಸುರ್ಜೇವಾಲ ಪದೇ ಪದೇ ಬಂದು ಶಾಸಕರ ಅಭಿಪ್ರಾಯ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಮೂರು ದಿನಗಳವರೆಗೆ ಸುರ್ಜೇವಾಲ ಇರುವ ಹಿನ್ನೆಲೆ ಏನು ಎಂಬುದು ಮುಖ್ಯವಾಗಿದೆ. ಡಿ.ಕೆ. ಶಿವಕುಮಾರ್ ಜೊತೆಗೆ ನೂರು ಜನ ಶಾಸಕರು ಇದ್ದಾರೆ ಎಂಬುದು ಸಹಮುಖ್ಯವಾಗಿದೆ. ಬಿ.ಆರ್. ಪಾಟೀಲ್, ರಾಜು ಕಾಗೆ ಹೇಳಿಕೆ ಗಮನಿಸಿ, ಆಡಳಿತದ ಪಕ್ಷ ಶಾಸಕರು ಮುಖ್ಯಮಂತ್ರಿಗಳ ಬಗ್ಗೆ ಸಂಪೂರ್ಣ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.
ಈ ರೀತಿ ನಾನಾ ಹೇಳಿಕೆಗಳು ಬರುತ್ತಿವೆ. ರಾಜ್ಯದ ಜನರಿಗೂ ಇವರ ಮೇಲೆ ವಿಶ್ವಾಸವಿಲ್ಲ. ಬರುವ ದಿನ ಯಾವ ರೀತಿ ವಿದ್ಯಾಮಾನಗಳ ಬಗ್ಗೆ, ಸ್ಥಾನ ಪಲ್ಲಟಗಳ ಬಗ್ಗೆ ತಿಳಿಯುತ್ತೆ. ಸೆಪ್ಟೆಂಬರ್ ನಲ್ಲಿ ಬದಲಾವಣೆಯಾದರೆ ನಮಗೇನು ವ್ಯತ್ಯಾಸ ಆಗುವುದಿಲ್ಲ. ಅನುಭವಿ ಮುಖ್ಯಮಂತ್ರಿ ಆಡಳಿತ ವ್ಯವಸ್ಥೆ ಹೇಗೆ ಕುಸಿದು ಬಿದ್ದಿದೆ ಎಂಬುದು ತಿಳಿಯುತ್ತದೆ ಎಂದರು.
ಸುರ್ಜೇವಾಲ ಸುಮ್ನೆ ಬರ್ತಿಲ್ಲ
ಸುರ್ಜೇವಾಲ ಸುಮ್ನೆ ಬರ್ತಾ ಇಲ್ಲ. ಅವರು ಅಜೆಂಡಾ ಇಟ್ಟುಕೊಂಡೇ ಬರುತ್ತಿದ್ದಾರೆ. ಅಜೆಂಡಾ ಇಂಪ್ಲಿಮೆಂಟ್ ಗಾಗಿ ಅವರು ರಾಜ್ಯಕ್ಕೆ ಬರುತ್ತಿದ್ದಾರೆ ಎಂದ ಅವರು, ಬಂಗಾರಪ್ಪ ಬಡಾವಣೆಯಲ್ಲಿ ವಿಗ್ರಹ ಕೆಡವಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ವಿಜೇಂದ್ರ, ರಾಜ್ಯದಲ್ಲಿ ಧರ್ಮಗಳ ವಿಚಾರದಲ್ಲಿ ಸಂಘರ್ಷ ನಡೆಯುತ್ತಿರಬೇಕು ಎಂಬುದು ಇವರ ಉದ್ದೇಶವಾಗಿದೆ. ಮೈಸೂರಿನಲ್ಲಿ ಪೊಲೀಸ್ ಠಾಣೆಗೆ ನುಗ್ಗಿ ಬೆದರಿಕೆ ಹಾಕೋ ಕೆಲಸ ಆಯ್ತು. ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆಯ್ತು.ವ್ಯವಸ್ಥಿತ ಷಡ್ಯಂತ್ರದ ವಿರುದ್ಧ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ತಿಲ್ಲ. ಹೀಗಾಗಿ ದೇಶದ್ರೋಹಿಗಳಿಗೆ ಧೈರ್ಯ ಬರುತ್ತಿದೆ ಎಂದರು.
ಏನೇ ಮಾಡಿದ್ರೂ ರಾಜ್ಯ ಸರ್ಕಾರ ಬೆಂಬಲ ಕೊಡುತ್ತೆ ಎನ್ನುವ ಮನೋಭಾವ ಇದೆ. ಬೇಲಿನೆ ಎದ್ದು ಹೊಲ ಮೆಯ್ಯುವ ಸ್ಥಿತಿ ಇದೆ. ರಾಜ್ಯದಲ್ಲಿ ಗೃಹ ಸಚಿವರು ಎಲ್ಲಿದ್ದಾರೋ ಗೊತ್ತಿಲ್ಲ. ಜನ ಪ್ರಶ್ನೆ ಮಾಡ್ತಿದ್ದಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನ ಬದಲಾವಣೆ ವಿಚಾರ.
ಸಿಎಂ ಸ್ಥಾನಕ್ಕಿಂತ ಬಿಜೆಪಿ ರಾಜ್ಯಾಧ್ಯಕ್ಷರ ವಿಚಾರ ಮಾಧ್ಯಮದಲ್ಲಿ ಚರ್ಚೆ ಆಗ್ತಿದೆ. ಪ್ರಧಾನಿ ಮೋದಿ ವಿದೇಶ ಪ್ರವಾಸದಿಂದ ಜು. 9 ಕ್ಕೆ ಬರ್ತಾರೆ. ಆ ನಂತರ ಈ ವಿಚಾರ ಚರ್ಚೆಯಾಗುತ್ತೇ. ಅತೀ ಶೀಘ್ರದಲ್ಲೇ ಎಲ್ಲದಕ್ಕೂ ಉತ್ತರ ಸಿಗುತ್ತೇ ಎಂದು ವಿಜಯೇಂದ್ರ ಹೇಳಿಕೆ ಅಚ್ಚರಿ ಮೂಡಿಸಿದರು.
Surjewala is not coming to Karnataka without any expectation-Vijendra