SUDDILIVE || SHIVAMOGGA
ಅಕ್ರಮ ಕಟ್ಟಡ ತೆರವುಗೊಳಿಸಿ-ಸ್ಥಳದಲ್ಲಿಯೇ ಆಯುಕ್ತರಿಗೆ ಮಾಜಿ ಡಿಸಿಎಂ ಸೂಚನೆ-ಆರೋಪಿಗಳನ್ನ ಗಡಿಪಾರಿಗೆ ಆಗ್ರಹ-Former DCM instructs commissioners to clear illegal buildings on the spot
ರಾಗಿಗುಡ್ಡದ ಬಂಗಾರಪ್ಪನವರ ಕಾಲೋನಿಯಲ್ಲಿ ವಿಗ್ರಹಗಳನ್ನ ಒದ್ದು ಹಾನಿ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ದೇವಸ್ಥಾನ ಕಮಿಟಿ ರಚಿಸಿ ಹೊಸದಾಗಿ ನಿರ್ಮಿಸಲು, ಅದಕ್ಕೆ ಸಹಾಯ ಮಾಡುವೆನೆಂದು ಹಾಗೂ ತಕ್ಷಣವೇ ವಿವಾದಿತ ಸ್ಥಳದ ಎದುರು ಇರುವ ಒತ್ತುವರಿ ಕಟ್ಟಡವನ್ನು ಶೀಘ್ರದಲ್ಲಿ ಮಹಾನಗರ ಪಾಲಿಕೆಯವರು ತೆರವುಗೊಳಿಸಬೇಕೆಂದು ಘಟನೆಗೆ ಕಾರಣರಾದ ಆರೋಪಿಗಳನ್ನು ತಕ್ಷಣವೇ ಬಂಧಿಸಿ ಅವರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಈಶ್ವರಪ್ಪ ನಿವಾಸಿಗಳ ಬಳಿ ಮೊದಲು ಮಾಹಿತಿ ಪಡೆದರು ನಂತರ ತಕ್ಷಣವೇ ದೇವಸ್ಥಾನವನ್ನು ಹೀಗೆ ಉಲ್ಲ ಬಿಡದು ಬೇಡ ಹೊಸದಾಗಿ ನಿರ್ಮಿಸೋಣ ಅದಕ್ಕೆ ನಾನು ಸಹಾಯ ಮಾಡುವೆನೆಂದು ಭರವಸೆ ನೀಡಿದರು ನಂತರ ಸ್ಥಳದಲ್ಲಿಯೇ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡರಿಗೆ ಕರೆ ಮಾಡಿ ದೇವಸ್ಥಾನದ ಎದುರುಗಡೆ ಅಕ್ರಮವಾಗಿ ಕಟ್ಟಡವನ್ನು ಕಟ್ಟುತ್ತಿದ್ದು ತಕ್ಷಣವೇ ತೆರುವುಗೊಳಿಸುವಂತೆ ಸೂಚಿಸಿದರು.
ಸೋಮವಾರ ನಾಳೆ ಸಂಜೆಯೊಳಗೆ ಅಕ್ರಮ ಕಟ್ಟಡಗಳನ್ನು ತಿರುಗುಗೊಳಿಸುವುದಾಗಿ ಮೊಬೈಲ್ ನಲ್ಲಿ ಆಯುಕ್ತರು ಮಾಜಿ ಸಚಿವರಿಗೆ ಭರವಸೆ ನೀಡಿದ ಬೆನ್ನಲ್ಲೇ ಈಶ್ವರಪ್ಪನವರು ಇದಕ್ಕೆ ಸಂಬಂಧಿಸಿದರು ಒಂದು ವೇಳೆ ಕಟ್ಟಡವನ್ನು ತೆರವುಗೊಳಿಸದೆ ಇದ್ದಲ್ಲಿ ಹಿಂದೂ ಸಂಘಟನೆಗಳು ಹಾಗೂ ರಾಷ್ಟ್ರಭಕ್ತರ ಬಳಗ ಮುಂದಿನ ದಾರಿಯನ್ನು ಹುಡುಕಿಕೊಳ್ಳುತ್ತದೆ ಎಂದು ಎಚ್ಚರಿಸಿದರು.
ವಿಗ್ರಹಗಳನ್ನು ದ್ವಂಸಗೊಳಿಸಿದ ದುಷ್ಕರ್ಮಿಗಳನ್ನು ತಡೆದ ಸ್ಥಳೀಯ ನಿವಾಸಿ ಜಯಮ್ಮ ಅವರನ್ನು ವಿಚಾರಿಸಿದ ಮಾಜಿ ಸಚಿವರು ಡಿ ವೈ ಎಸ್ ಪಿ ಸಂಜು ಕುಮಾರ್ ಅವರಿಗೆ ಹೋಮು ನಿಗ್ರಹದಳ ಮೂರು ಜಿಲ್ಲೆಗಳನ್ನು ಸೇರಿಸಿ ಮಾಡಿದರಲ್ಲ ಈಗ ಏನು ಮಾಡುತ್ತಿದ್ದಾರೆ ಅವರು ಕ್ರಮ ಯಾಕೆ ಕೈಗೊಂಡಿಲ್ಲ ಆರೋಪಿಗಳನ್ನು ಯಾಕೆ ಬಂದಿಲ್ಲ ಎಂದು ಕೇಳಿದರು ಸಂಜೆ ಒಳಗೆ ಎಲ್ಲಾ ಕಾರ್ಯಗಳು ಮುಗಿಯುತ್ತದೆ ಸರ್ ಎಂಬ ಭರವಸೆ ನೀಡಿದರು ಒಂದು ವೇಳೆ ಭರವಸೆ ಈಡೇರದಿದ್ದರೆ ರಾಷ್ಟ್ರಭಕ್ತರ ಬಳಗ ಪ್ರತಿಭಟಿಸಲಿದೆ ಎಂದು ತಿಳಿಸಿದರು
ಎಸ್ ಪಿ ವಿರುದ್ಧ ಗರಂ
ವಿಜ್ಞಗೊಂಡ ದೇವಸ್ಥಾನದ ಬಳಿ ಬೇಟು ನೀಡಿದ ಮಾಜಿ ಡಿಸಿಎಂ ಈಶ್ವರಪ್ಪನವರು ಎಸ್ ಪಿ ಅವರು ಸ್ಥಳದಲ್ಲಿ ಇಲ್ಲದಿರುವುದನ್ನು ನೋಡಿ ಡಿ ಎಸ್ ಪಿ ಸಂಜೀವ್ ಕುಮಾರ್ ಅವರಿಗೆ ನಾವು ಬಂದರೆ ಎಸ್ಪಿ ಬರೋದಿಲ್ವಾ? ನಾವು ಬರ್ತೀರಂತ ಗೊತ್ತಿದ್ದರೂ ಬರಲಿಲ್ಲ ಯಾಕೆ ಎಂದು ಗರಂ ಆದರು.
Former DCM instructs commissioners