SUDDILIVE|| SHIVAMOGGA
ಈಶ್ವರಪ್ಪನವರ ಮುಂದೆ ಮಹಿಳೆಯ ಗೋಳಾಟ-A woman's wailing in front of Eshwarappa
ಕೆಎಸ್ ಈಶ್ವರಪ್ಪ ಜೊತೆ ಮಾತನಾಡುತ್ತಾ ದುಷ್ಕರ್ಮಿಗಳು ವಿಗ್ರಹಗಳನ್ನ ಮತ್ತಷ್ಟು ಹಾಳು ಮಾಡಲು ಬಿಡದ ಮಹಿಳೆ ಗೋಳಾಡಿದ್ದಾರೆ. ನಾವು ಪೂಜೆ ಮಾಡುತ್ತಿರುವ ವಿಗ್ರಹಕ್ಕೆ ಕಾಲಿನಿಂದ ಒದ್ದಿದ್ದಾರೆ. ನಮಗೆ ಎಷ್ಟು ನೋವಾಗಿರಬಹುದು ಹೇಳಿ ಎಂದು ಕಣ್ಣೀರು ಇಡುತ್ತಾ ವಿಷಯ ತಿಳಿಸಿದರು.
ಬಹಳ ಕಷ್ಟಪಟ್ಟು ದೇವಸ್ಥಾನ ಮಾಡಿದ್ದೇವೆ ಎಂದು ಕೆಎಸ್ ಈಶ್ವರಪ್ಪ ಜೊತೆ ನೋವು ಹೇಳಿಕೊಂಡು ಮಹಿಳೆ ಜಯಮ್ಮ ಗೋಳಾಡಿದ್ದಾರೆ. ಈ ವೇಳೆ ಮಾಜಿ ಡಿಸಿಎಂ ನಿಮ್ಮ ಜೊತೆ ನಾವಿದ್ದೇವೆ ಯಾರು ಕೂಡ ಹೆದರಬೇಡಿ ಎಂದು ಭರವಸೆ ನೀಡಿದ್ದಾರೆ.
ಈ ರೀತಿ ಕೃತ್ಯ ನಡೆಸಿದವರಿಗೆ ತಕ್ಕ ಪಾಠ ಕಲಿಸೋಣ. ಇದೇ ಜಾಗದಲ್ಲಿ ಮತ್ತೆ ವಿಗ್ರಹ ಪ್ರತಿಷ್ಠಾಪನೆ ಮಾಡೋಣಾ ಎಂದು ಕೆಎಸ್ ಈಶ್ವರಪ್ಪ ಭರವಸೆ ನೀಡಿದರು. ಇವರ ಮಗ ಚಂದ್ರಶೇಖರ್ ಸಹ ಈ ವೇಳೆ ಕಣ್ಣೀರು ಹಾಕಿದ್ದಾರೆ.
woman's wailing in front of Eshwarappa