SUDDILIVE || SHIVAMOGGA
ಸರ್ಕಾರಿ ಶಾಲೆಗಳಲ್ಲಿ ಉಚಿತ ದಂತ ತಪಾಸಣೆ ಹಾಗೂ ದಂತ ಆರೋಗ್ಯ- Free dental check-ups and dental health in government schools
ಭಾರತೀಯ ದಂತ ವೈದ್ಯಕೀಯ ಸಂಘ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಉಚಿತ ದಂತ ತಪಾಸಣೆ ಹಾಗೂ ದಂತ ಆರೋಗ್ಯ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಭಾರತೀಯ ದಂತ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಗೌತಮ ಮಾತನಾಡಿ, ಸಂಘಕ್ಕೆ 25 ವರ್ಷ ಸಂದ ಹಿನ್ನಲೆಯಲ್ಲಿ ರಜತಮಹೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ. 25 ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ದಂತ ತಪಾಸಣೆ ಮತ್ತು ದಂತ ಆರೋಗ್ಯದ ಮಾಹಿತಿ ಶಿಬಿರ ಹಮ್ಮಿಕೊಳ್ಳಲಾಗಿದೆ.
ಒಂದೇ ದಿನ ಮಿಳಘಟ್ಟದಲ್ಲಿ ನಾಲ್ಕು, ವಿನೋಬ ನಗರ, ಗೋಪಾಳ, ಕೆಹೆಚ್ ಬಿ ಕಾಲೋನಿ, ಕಾಶಿಪುರ, ರವೀಂದ್ರನಗರ, ಬಸವನಗುಡಿ, ಗಾಡಿಕೊಪ್ಪದ ಎರಡು ಶಾಲೆ, ಟ್ಯಾಂಕ್ ಮೊಹಲ್ಲದ ಉರ್ದುಶಾಲೆ, ಆಲ್ಕೊಳ, ಶ್ರೀರಾಮಪುರ, ನವುಲೆಯ ಪ್ರಾಥಮಿಕ ಶಾಲೆ, ಕೆಪಿಎಸ್ ಬಿಹೆಚ್ ರಸ್ತೆ ರಸ್ತೆ, ಕೆಆರ್ ಪುರಂ ಪ್ರಾಥಮಿಕ ಶಾಲೆ, ಅಬ್ಬಲಗೆರೆಯ ಪ್ರೌಢಶಾಲೆ, ಗಯತ್ಯಪ್ಪ, ಕಾಲೋನಿ, ಸಿದ್ದೇಶ್ವರ ನಗರ, ಗುರುಪುರದ ಪ್ರಾಥಮಿಕ ಶಾಲೆ, ಬಿಹೆಚ್ ರಸ್ತೆಯ ಸಬಾಪಪೂ ಕಾಲೇಜು, ಸಮಾಹಿಪ್ರಾಶಾಲೆ ಬಿಹೆಚ್ ರಸ್ತೆ ಇಲ್ಲಿ ವೈದ್ಯರುಗಳು ಭೇಟಿ ನೀಡಿ ತಪಾಸಣೆ ಮತ್ತು ಮಾಹಿತಿ ನೀಡಲಿದ್ದಾರೆ ಎಂದರು.
ಆ.1 ರಂದು ಡಿಸಿ ಗುರುದತ್ತ ಹೆಗಡೆ ಕೆಆರ್ ಪುರಂನ ಸರ್ಜಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟಿಸಲಿದ್ದು ಬಿಇಒ ರಮೇಶ್ ಉಪಸ್ಥಿತರಿರುವರು ಎಂದರು.
Free dental check-ups and dental health in government schools