SUDDILIVE || SHIVAMOGGA
ಬಹುಮಹಡಿ ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಮುಹೂರ್ತ ಫಿಕ್ಸ್-Muhurath fix for parking system in multi-storey building
ಕಳೆದ ಎರಡು ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮತ್ತು ಸಾರ್ವಜನಿಕರ ವಲಯದಲ್ಲಿ ಬಹಳ ಚರ್ಚೆಗೆ ಒಳಪಟ್ಟಿದ್ದ ಬಹುಮಹಡಿ ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಮುಹೂರ್ತ ಫಿಕ್ಸ್ ಆಗಿದೆ.
ಶಿವಮೊಗ್ಗದ ಹಳೆ ಹೂವಿನಮಾರುಕಟ್ಟೆಯಲ್ಲಿ ಬಹುಮಹಡಿ ಕಟ್ಟಡ ನೆನೆಗುದಿಗೆ ಬಿದ್ದಿತ್ತು. ಕಳೆದ ಎರಡು ವರೆ ವರ್ಷದಿಂದ ಬಹುಮಹಡಿ ಕಟ್ಟಡ ನಿರ್ಮಾಣಗೊಂಡಿದ್ದರು ಅಲ್ಲಿನಮಳಿಗೆಗಳಾಗಲಿ ಅಥವಾ ಪಾರ್ಕಿಂಗ್ ವ್ಯವಸ್ಥೆ ಆಗಲಿ ಆಗಿರಲಿಲ್ಲ. ಈಗ ಅದಕ್ಕೆ ಕಾಲ ಕೂಡಿ ಬಂದಿದೆ.
ಮಳಿಗೆ ಆರಂಭಕ್ಕೆ ಇನ್ನೂ ಮುಹೂರ್ತ ಫಿಕ್ಸ್ ಆಗಿಲ್ಲ. ಆದರೆ ಬಹುಮಹಡಿ ಕಟ್ಟಡದಲ್ಲಿ ದ್ವಿಚಕ್ರ, ಕಾರು ಮತ್ತು ತ್ರಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಆರಂಭಗೊಂಡಿದೆ. ಆ.1 ರಿಂದ ಬಹುಮಹಡಿ ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆ ಆರಂಭಗೊಳ್ಳಲಿದೆ.
ಕಳೆದ 6 ತಿಂಗಳ ಹಿಂದಷ್ಟೆ ಬಹುಮಹಡಿ ಕಟ್ಟಡ ಸ್ಮಾರ್ಟ್ ಸಿಟಿ ಯಿಂದ ನಗರ ಪಾಲಿಕೆಗೆ ಹಸ್ತಾಂತರಗೊಂಡಿದೆ. ಅದಾದ ನಂತರ ಇ ಟೆಂಡರ್ ನಡೆದಿದ್ದು ಶಿವಮೊಗ್ಗದವರಿಗೆ ಈ ಪಾರ್ಕಿಂಗ್ ಟೆಂಡರ್ ಆಗಿದೆ. ಈಗ ಆಗಸ್ಟ್ 1 ರಿಂದ ಪಾರ್ಕಿಂಗ್ ವ್ಯವಸ್ಥೆ ಶುಭಾರಂಭಗೊಳ್ಳಲಿದೆ.
ದ್ವಿಚಕ್ರ ವಾಹನಗಳಿಗೆ ಮೊದಲ ಎರಡು ಗಂಟೆಗೆ 10 ರೂ. ನಿಗದಿಯಾದರೆ, ಕಾರುಗಳಿಗೆ 20 ರೂ. ನಿಗದಿಯಾಗಿದೆ. ಎರಡು ಗಂಟೆಯ ನಂತರ ಕಾರುಗಳಿಗೆ ಪ್ರತಿ ಒಂದು ಗಂಟೆಗೆ 10 ರೂ. ನಿಗದಿಯಾದರೆ ದ್ವಿಚಕ್ರ ವಾಹನಗಳಿಗೆ 5 ರೂ. ನಿಗದಿ ಪಡಿಸಲಾಗಿದೆ. ಬೇಸ್ ಮೆಂಟ್ ನಲ್ಲಿ 80 ದ್ವಿಚಕ್ರವಾಹನಗಳನ್ನ ಪಾರ್ಕ್ ಮಾಡಬಹುದಾಗಿದೆ. ಕಟ್ಟಡದ ಎರಡು ಫ್ಲೋರ್ ಗಳಲ್ಲಿ 172 ಕಾರುಗಳನ್ನ ಪಾರ್ಕ್ ಮಾಡುವ ವ್ಯವಸ್ಥೆ ಮಾಡಲಾಗಿದೆ.
ಈಗಾಗಲೇ ದ್ವಿಚಕ್ರ ವಾಹನಗಳಿಗೆ ಅಮೀರ್ ಅಹಮದ್ ವೃತ್ತದಿಂದ ಹೂವಿನ ಮಾರುಕಟ್ಟೆಯ ವರೆಗೆ ರಸ್ತೆ ಬದಿಯ ಪಾರ್ಕಿಂಗ್ ಇಲ್ಲ. ಹಾಗಾಗಿ ವಾಹನ ಸವಾರರು ಈ ಬಹುಮಹಡಿಯಲ್ಲಿನ ಪಾರ್ಕಿಂಗ್ ವ್ಯವಸ್ಥೆ ಬಳಸಿಕೊಳ್ಳಬಹುದಾಗಿದೆ.
Muhurath fix for parking system in multi-storey building