ad

ಆ.9 ರಂದು ಮನೆ ಮನೆಯಲ್ಲಿ ಕನ್ನಡ ಬಾವುಟ ಅಭಿಯಾನ-Kannada flag campaign from house to house on August 9th

SUDDILIVE || SHIVAMOGGA

ಆ.9 ರಂದು ಮನೆ ಮನೆಯಲ್ಲಿ ಕನ್ನಡ ಬಾವುಟ ಅಭಿಯಾನ-Kannada flag campaign from house to house on August 9th

ಕನ್ನಡಿಗರಿಗೆ ರಾಜ್ಯದಲ್ಲಿ ನ್ಯಾಯಸಿಕ್ಕಿಲ್ಲ. 60 ದಶಕಗಳು ಕನ್ನಡಕ್ಕಾಗಿ ಹೋರಾಟ ನಡೆದಿದೆ. ನಮ್ಮ ರಾಜ್ಯದಲ್ಲಿ ನಾವೇ ಭಾಷೆಗಾಗಿ ಹೋರಾಡಬೇಕಿದೆ. ಒಕ್ಕೂಟ ದೇಶದಲ್ಲಿ ಕಬ್ನಡಿಗರು ಎರಡನೇ ದರ್ಜೆ ನಾಗರೀಕರಾಗಿದ್ದು ಇದನ್ನ ಹೋಗಲಾಡಿಸಬೇಕಿದೆ ಎಂದು ಅಖಿಲ ಕರ್ನಾಟಕ ಕನ್ನಡ ಚಳುವಳಿ ಸಮಿತಿ ರಾಜ್ಯಾದ್ಯಕ್ಷ ಗುರುದೇವ್ ನಾರಾಯಣ್ ಕುಮಾರ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ ಶಿಕ್ಷಣ ಪಠ್ಯಕ್ರಮದಲ್ಲಿ ದ್ವಿಭಾಷಾ ಪದ್ಧತಿ ಅಳವಡಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ಯೋಗದಲ್ಲಿ  ಕನ್ನಡಿಗರಿಗೆ ಮೀಸಲಿರಿಸಬೇಕು. ಇದಕ್ಕಾಗಿ ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನ ಜಾರಿಗೊಫಿಸಬೇಕು. ಬ್ಯಾಂಕ್ ಮತ್ತು ಖಾಸಗಿ ಸೇವಾ ವಲಯಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ಸೇವೆ ಕೊಡಬೇಕು. ರಾಜ್ಯ ಸರ್ಕಾರ ಇದನ್ನ ಕಡ್ಡಾಯಗೊಳಿಸಬೇಕೆಂದರು. 

ಆಗಸ್ಟ್ 9 ರಂದು ಮೈಸೂರು ದೇಶ ಒಕ್ಕೂಟ ಭಾರತ ದೇಶಕ್ಕೆ ತ್ಯಾಗ ಮಾಡಿದ ದಿನದ ನೆನಪಿಗಾಗಿ ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ ಸಮಿತಿ ನಿರಂತರವಾಗಿ ಕೇಂದ್ರ ಸಮಿತಿ ನಡೆಸಿಕೊಂಡು ಬಂದಿದೆ ಈ ಬಾರಿಯೂ ಆ.9 ರಂದು ಅಭಿಯಾನಕ್ಕೆ ರಾಜದಯಾದ್ಯಂತ ಕರೆ ನಡೆಸಲಾಗಿದೆ ಎಂದರು. 

ಎಲ್ಲೆಡೆ ಹಿಂದಿ ಹೇರಿಕೆಗೆ ಕ್ರಮ ಕೈಗೊಳ್ಳಲಾಗಿದೆ. ತ್ರಿಭಾಷಾ ಸೂತ್ರದ ಅಡಿ ಹಿಂದಿ ಕಲಿಸುವ ಪ್ರಯತ್ನವಾಗಿದೆ. ಶಿಕ್ಷಣದಲ್ಲಿ 1996 ರಲ್ಲಿ 100 ಅಂಕಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕೆಂದು ಕಡ್ಡಾಯ ಮಾಡಲಾಗಿದೆ. ಅನೌಪಚಾರಿಕವಾಗಿ ಬಂದ ಹಿಂದಿ ಭಾಷೆಯನ್ನ‌ ಕಡ್ಡಾಯಗೊಳಿಸಲಾಗಿದೆ. 

ನಾಮಫಲಕದಲ್ಲಿ ಕನ್ನಡ ಕಡ್ಡಾಯಗೊಳಿಸಿ ಸರೋಜಿನಿ ಮಹಿಷಿ ವರದಿಯನ್ನ ಸಂಪೂರ್ಣ ಜಾರಿಗೆಯಲ್ಲಿದ್ದರು. ಕ್ರಮ ಕೈಗೊಳ್ಳುತ್ತಿಲ್ಲ. ಹಿಂದಿ ಭಾಷಿಗರ ದೌರ್ಜನ್ಯ ರಾಜ್ಯದಲ್ಲಿ ಹೆಚ್ಚಾಗಿದೆ. ಮತಕ್ಕಾಗಿ ರಾಜಕಾರಿಣಿ ಮಾರಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಕನ್ನಡಿಗರು ಸಿಕ್ಕಿಕೊಂಡಿದ್ದು ಇದರ ಬಗ್ಗೆ ಜಾಗೃತಿಯಾಗಬೇಕು. ಕನ್ನಡಿಗರ ಮಹಾಪುರುಷರನ್ನ ಭಾರತೀಯ ಇತಿಹಾಸದಲ್ಲಿ ಇಲ್ಲದಿರುವುದು ದುರಂತ. ಸೆಪ್ಟಂಬರ್ ತಿಂಗಳವರೆಗೆ ಸರೋಜಿನಿ ಮಹಿಷಿ ವರದಿ ಜಾರಿಗೆ ಕ್ರಮಕೈಗೊಳ್ಳಬೇಕು.  ಈ ನಿಮಿತ್ತ ಆ. 9 ರಂದು ಮನೆ ಮನೆಗಳ ಮೇಲೆ ಕನ್ನಡ ಬಾವುಟ ಎಂದರು. 

ಹೋರಾಟಗಾರ ವಾಟಾಳ್ ಮಂಜು, ರಚನಾ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

Kannada flag campaign from house to house on August 9th


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close