ad

ಪ್ರಸ್ತುತ SSLC ಮತ್ತು ದ್ವಿತೀಯ PUC ಓದುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್-Good News for SSLC & PUC students

 SUDDILIVE || SHIVAMOGGA

ಪ್ರಸ್ತುತ SSLC ಮತ್ತು ದ್ವಿತೀಯ PUC ಓದುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್-Good News for SSLC & PUC students

SSLC, PUC


ಅನಾವರತ ಸಂಸ್ಥೆಯಿಂದ ಅನೇಕ ಕಾರ್ಯಮಾಡಿದೆ, ಸ್ಮಾರ್ಟ್ ಸಿಟಿ, ಚರ್ಚೆ ವಿತ್ ಚೆನ್ನಿ, ಸೇರಿದಂತೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಇದರ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಶಾಸಕ ಚೆನ್ನಬಸಪ್ಪ ಇದರ ಮುಂದುವರೆದ ಭಾಗವಾಗಿ ವಿವೇಕ ವಿದ್ಯಾನಿಧಿ ಹೆಸರಿನಡಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಯೋಚಿಸಿದೆ. ಗುರು ಪೂರ್ಣಿಮೆಯ ವೇಳೆ ನೀಡಲು ಚಿಂತಿಸಲಾಗಿದೆ ಎಂದರು. 

ಶೇ.50-75 ರಷ್ಟು ಅಂಕಪಡೆದ ಪ್ರಸ್ತುತ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಯೋಚಿಸಲಾಗಿದೆ. ಅರ್ಜಿಯನ್ನ ನಾಳೆಯಿಂದ ಕೊಡಲಾಗುತ್ತಿದೆ. ಆ.15 ರ ಒಳಗೆ ಶಾಸಕರ ಕರ್ತವ್ಯ ಭವನದಲ್ಲಿ ಅರ್ಜಿಯನ್ನ ಪಡೆಯುವುದು ಮತ್ತು ವಾಪಾಸ್ ನೀಡಬಹುದಾಗಿದೆ. ಎಲ್ಲರಿಗೂ 5 ಸಾವಿರ ರೂ. ಹಣ ನೀಡಲಾಗುವುದು ಎಂದರು. 

ಹಣ ಕೊಡುವವರನ್ನ ಗುರುತಿಸಿ ಅವರಿಂದ ಹಣ ಕೊಡಿಸುವ ಕೆಲಸ ಮಾಡಲಾಗುತ್ತಿದೆ. ಬಡವರಲ್ಲಿ 80-90 ಅಂಕ ಪಡೆದವರ ಬಗ್ಗೆಯೂ ಕೊಡಲು ಚಿಂತಿಸಲಾಗುವುದು. 9 ನೇ ತರಗತಿ ಮುಗಿಸಿ ಎಸ್ ಎಸ್ ಎಲ್ ಸಿ ಗೆ ಬಂದವರು ಮತ್ತು ಮೊದಲನೇ ಪಿಯುಸಿಯಿಂದ ಎರಡನೇ ಪಿಯುಸಿಗೆ ಹೋದವರಿಗೂ ಅನುಕೂಲವಾಗಲಿದೆ.

ಒಂದು ಸಾವಿರ ಕೊಡುಗೈ ದಾನಿಗಳನ್ನ ಹುಡುಕಲಾಗುತ್ತಿದೆ. ಸಾವಿರ ಜನರಿಗೆ ಶಕ್ತಿ ತುಂಬಲಾಗುತ್ತದೆ. ಅರ್ಜಿಗೆ 10 ರೂ. ನಿಗದಿ ಮಾಡಲಾಗಿದೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್ ನೀಡಬೇಕಿದೆ. ಪೋಷಕರ ಓರ್ ಐಡಿ ಬೇಕಿದೆ. ನಗರ ವಿಧಾನ ಸಭಾ ಕ್ಷೇತ್ರಕ್ಕೆ ಈ ಯೋಜನೆ ಸೀಮಿತವಾಗಿದ್ದು  SSLC ಯಲ್ಲಿ 7355 ಜನ ವಿದ್ಯಾರ್ಥಿಗಳು, ಪಿಯು ನಲ್ಲಿ 6574 ವಿದ್ಯಾರ್ಥಿಗಳಿದ್ದಾರೆ. ಎರಡೂ ಸೇರಿ ಒಟ್ಟು 13875 ಜನ ವಿದ್ಯಾರ್ಥಿಗಳಿದ್ದಾರೆ ಎಂದರು. 

Good News for SSLC & PUC students

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close