SUDDILIVE || SHIVAMOGGA
ನಡು ರಸ್ತೆಯಲ್ಲಿಯೇ ಹೊತ್ತಿ ಉರಿದ ಕಾರು-car burnt in front of lion safari shimoga
ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿರುವ ಸಿಂಹಧಾಮದ ಬಳಿಯಲ್ಲಿ ಚಲಿಸುತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕಾರಿನಲ್ಲಿದ್ದವರು ಅವಘಡದಿಂದ ಪಾರಾಗಿದ್ದಾರೆ. ಕಾರು ನೋಡು ನೋಡತಿದ್ದಂತಲೇ ಸಂಪೂರ್ಣ ಬೆಂಕಿಗೆ ಅಹುತಿಯಾಗಿದೆ.
ಮಲವಗೊಪ್ಪದ ನಿವಾಸಿ ವೀರೇಶ್ ಎಂಬುವರಿಗೆ ಸೇರಿದ I20 ಕಾರು ಸಿಂಹಧಾಮದ ಬಳಿ ಬರುತ್ತಿದ್ದಂತೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಬ್ಯಾನೆಟ್ ತೆಗೆಯಲು ಸಾಧ್ಯವಾಗದಕಾರಣ ಬೆಂಕಿ ಕಾರನ್ನ ಸಂಪೂರ್ಣ ಆವರಿಸಿಕೊಂಡದೆ.
ನಂತರ 112 ಸಹಾಯದಿಂದ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಬೆಂಕಿ ಆರಿಸಲು ಸಹಾಯವಾಗಿದೆ. ಕಾರು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ತುಂಗ ನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆ ನಿನ್ನೆ ರಾತ್ರಿ ಸುಮಾರು 8 ಗಂಟೆಯ ಸಮಯದಲ್ಲಿ ಸಂಭವಿಸಿದೆ. ವೀರೇಶ್ ಅವರು ತಮ್ಮ ಹರ್ಷ ಫಾರಂಗೆ ಹೋಗುವಾಗ ಈ ಘಟನೆ ನಡೆದಿದೆ.
car burnt in front of lion safari shimoga