ad

ಅವರು ಸಂಸದರಲ್ಲ ಪೋಸ್ಟ್ ಮ್ಯಾನ್-ಸಚಿವ ಮಧು ಬಂಗಾರಪ್ಪ-He is a postman, not an MP

 SUDDILIVE || SHIVAMOGGA

ಅವರು ಸಂಸದರಲ್ಲ ಪೋಸ್ಟ್ ಮ್ಯಾನ್-ಸಚಿವ ಮಧು ಬಂಗಾರಪ್ಪ-He is a postman, not an MP: Minister Madhu Bangarappa

MP, postman


ಅವರು ಸಂಸದರಲ್ಲ ಪೋಸ್ಟ್ ಮ್ಯಾನ್ ಎಂದು ಸಚಿವ ಮಧು ಬಂಗಾರಪ್ಪ ಆರೋಪಿಸಿದರು.

ಇಂದು ಮಾಧ್ಯಮದವರಿಗೆ ಮಾತನಾಡಿ ವಿಮಾನ ನಿಲ್ದಾಣದಲ್ಲಿ 15ಗಳಿಂದ ಅಭಿವೃದ್ಧಿಗೆ ಸಂಬಂಧಪಟ್ಟ ಐಟಮ್ಸ್ ಗಳು ಬಂದು ಬಿದ್ದಿದ್ದು ಅದರ ಬಗ್ಗೆ ಕೆಲಸ ಆಗುತ್ತಿಲ್ಲ ಎಂದು ಈ ಹಿಂದೆ ಸಂಸದರ ಆರೋಪಕ್ಕೆ ಉತ್ತರಿಸಿದರು. ಇನ್ನು ಕೆಲವೊಂದು ಐಟಮ್ಸ್ ಗಳು ಬರಬೇಕಿದೆ ಹಾಗಾಗಿ ಅದು ಡಂಪ್ ಆಗಿದೆ ಈ ವಿಷಯ ಯಾರೂ ಹೇಳಿದ್ದು ಎಂದು ಮಾಧ್ಯಮದವರಿಗೆ ಅವರು ಮರು ಪ್ರಶ್ನೆಸಿದರು.

ಸಂಸದರ ಆರೋಪ ಇದು ಎಂದು ಮಾಧ್ಯಮದವರು ಹೇಳಿದ್ದಕ್ಕೆ ಕೆಂಡಮಂಡಲರ ವಾದ ಸಚಿವರು ಸಿಗಂದೂರು ಸೇತುವೆ ಆ ಭಾಗದ ಜನರಿಗೆ ಅನಿವಾರ್ಯವಾಗಿದೆ ಅನಿವಾರ್ಯವಾಗಿರುವುದರಿಂದ ಇದು ಸರಿ ಇದೆ ಆದರೆ ಅವರ ಆಹ್ವಾನ ಸರಿಯಾಗಿಲ್ಲ ಸಂಸದರೇ ಎಲ್ಲರನ್ನು ಕರೆಯುವ ಪೋಸ್ಟ್ ಮ್ಯಾನ್ ಕೆಲಸ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಏರ್ ಪೋರ್ಟ್ ನ್ನ ಉದ್ಘಾಟಿಸಿ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆಗೆ ಬಂದಾಗ ಇವರು ಬಾಕಿ ಉಳಿದ ಕೆಲಸಗಳನ್ನು ಮಾಡಲಿಲ್ಲ ತರಾತುರಿಯಲ್ಲಿ ವಿಮಾನವನ್ನು ಹಾರಾಡಿಸಿದ್ದು ಏಕೆ? ಅಭಿವೃದ್ಧಿ ಕೆಲಸ ರಾಜ್ಯ ಸರ್ಕಾರದ್ದು ಅವರು ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಕೆಂಡಮಂಡಲರಾದರು.

ಸಿಗಂದೂರು ಸೇತುವೆ ಉದ್ಘಾಟನೆಯ ವೇಳೆಯಲ್ಲಿ ಸಿಎಂ ಅವರು ಕೇಂದ್ರ ಸಚಿವ ಗಡ್ಕರಿ ಉದ್ಘಾಟನೆಗೆ ಬರಲಿದ್ದಾರೆ. ಅವರನ್ನ ರಾಜ್ಯ ಸರ್ಕಾರಕ್ಕೆ ಬರಬೇಕಾದ ಹಣವನ್ನು ಕೇಳೋಣ. ಅವರು ಬರಲಿ ಸರಿ ಇದೆ ಗಡ್ಕರ್ ಅವರೇ ಬಂದು ಉದ್ಘಾಟನೆ ಮಾಡುತ್ತಿರುವುದು ಸಂತೋಷವಾಗಿದೆ ಎಂದು ಸಿಎಂ ಅವರೇ ಖುದ್ದಾಗಿ ನನಗೆ ತಿಳಿಸಿದ್ದರು ಇದನ್ನ ತಡೆಯಲು ತಡವಾಗಿ ಆಹ್ವಾನಿಸಿದ್ದಾರೆ ಎಂದು ಆರೋಪಿಸಿದರು.

ಜನರ ದುಡ್ಡು ತೆರಿಗೆ ಕೇಂದ್ರ ಸರ್ಕಾರಕ್ಕೆ ಹೋಗಿರುವುದು ಸಿಗಂದೂರು ಬ್ರಿಡ್ಜ್ ಒಂದಕ್ಕೆ ಕಟ್ಟಲಿಕ್ಕೆ ಅಲ್ಲ ಈ ಬಿಜೆಪಿಯವರು ಸಿಗಂದೂರು ದೇವಸ್ಥಾನವನ್ನು ಹೇಗೆ ಹಾಳು ಮಾಡಲು ಹೊರಟಿದ್ದರು ಎಂಬುದನ್ನ ಇನ್ನೊಂದು ತಿಂಗಳಲ್ಲಿ ಬಿಚ್ಚಿಡಲಿದ್ದೇನೆ. ಆದರೆ ಆನ್ಲೈನ್ ಪೇಮೆಂಟ್ ನಿಂದ ಗೂಡಂಗಡಿ ವ್ಯಾಪಾರಸ್ಥರಿಗೆ ಹಾಗೂ ಹೋಟೆಲ್ ಉದ್ಯಮಗಳಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ ಪ್ರಶ್ನೆ ಕೇಳಿದ ಮಾಧ್ಯಮದವರಿಗೆ ಸಚಿವರು ಸೂಕ್ತವಾಗಿ ಉತ್ತರ ನೀಡುವಲ್ಲಿ ವಿಫಲರಾಗಿದ್ದಾರೆ.

ಮಾಜಿ ಸಚಿವ ಹಾಲಪ್ಪನವರು ಇತ್ತೀಚಿಗೆ ಬಿಜೆಪಿಯ ಮೂರು ಜಿಲ್ಲೆಯ ಕಾರ್ಯಕರ್ತರ ಸಮಾವೇಶದಲ್ಲಿ ಸಚಿವ ಮಧು ಬಂಗಾರಪ್ಪನವರು ಸೊರಬ ತಾಲೂಕಿನಲ್ಲಿ ನಾಲ್ಕು ಇಸ್ಪೀಟು ಅಡ್ಡಗಳನ್ನು ನಡೆಸುತ್ತಿದ್ದು ಇದರ ಹಣವು ಸಿರಸಿಗೆ ಹೋಗುತ್ತಿದೆ, ಸಿರಿಸಿಯ ನಂತರ ಬೆಂಗಳೂರಿನ ಸದಾಶಿವನಗರಕ್ಕೆ ಹೋಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು ಈ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಸೂಕ್ತ ಸಮಯದಲ್ಲಿ ಸೂಕ್ತ ಉತ್ತರ ನೀಡುವುದಾಗಿ ಸಚಿವರು ಹೇಳಿ ನಿರ್ಗಮಿಸಿದರು.

He is a postman, not an MP

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close