ಮೆಗ್ಗಾನ್ ಆಸ್ಪತ್ರೆಯನ್ನ ಅಪ್ ಗ್ರೇಡ್ ಮಾಡಲಾಗುವುದು-ಸಚಿವ ಮಧು ಬಂಗಾರಪ್ಪ-Megan Hospital will be upgraded - Minister Madhu Bangarappa

 SUDDILIVE || SHIVAMOGGA

ಮೆಗ್ಗಾನ್ ಆಸ್ಪತ್ರೆಯನ್ನ ಅಪ್ ಗ್ರೇಡ್ ಮಾಡಲಾಗುವುದು-ಸಚಿವ ಮಧು ಬಂಗಾರಪ್ಪ-Megan Hospital will be upgraded - Minister Madhu Bangarappa

Madhu, Bagarappa

ಮೆಗ್ಗಾನ್ಸ್ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಏನೇನು ಅವಶ್ಯಕತೆ ಇದೆ ಅವಶ್ಯಕತೆ ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮೆಗನ್ ಆಸ್ಪತ್ರೆಗೆ ದಿಢೀರ್ ಎಂದು ಭೇಟಿ ನೀಡಿ ನಂತರ ಮಾಧ್ಯಮಗಳಿಗೆ ಮಾತನಾಡಿದವರು ಸಮಸ್ಯೆಗಳು ಇವೆ ಹಾಗಂತ ಅಧಿಕಾರಿಗಳು ಕೈಕಟ್ಟಿ ಕುಳಿತುಕೊಂಡಿಲ್ಲ ಎಲ್ಲವನ್ನು ಸರಿಯಾಗಿ ನಿಭಾಯಿಸುತ್ತಿದ್ದಾರೆ. ಸಮಸ್ಯೆ ಎಲ್ಲಾಗುತ್ತಿದೆ ಎಂದರೆ ಸಿರಿಸಿ ಸಿದ್ದಾಪುರ ದಾವಣಗೆರೆ ಚಿಕ್ಕಮಗಳೂರು, ಹಾವೇರಿ, ಚಿತ್ರದುರ್ಗ ಭಾಗದಿಂದ ರೋಗಿಗಳು ಬರುತ್ತಿದ್ದು ಅವರಿಗೆ ಹಾಗೂ ನಮ್ಮ ಜಿಲ್ಲೆಯ ರೋಗಿಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕೆಲವೊಂದು ಸಮಸ್ಯೆಗಳು ಆಗುತ್ತಿದೆ, ಹೊರ ಜಿಲ್ಲೆ ರೋಗಿಗಳು ಬರುವುದರಿಂದ ಕೆಲ ಸಮಸ್ಯೆಗಳಾಗುತ್ತಿವೆ ಎಂದು ಸಚಿವರು ಒಪ್ಪಿಕೊಂಡಿದ್ದಾರೆ.

ನಾನೇ ಹೇಳಿಬಿಟ್ಟು ಭೇಟಿ ನೀಡುವುದು ಬೇಡ ಸರ್ಪ್ರೈಸ್ ವಿಸಿಟ್ ಇರಲಿ ಎಂದು ಇಂದು ಭೇಟಿ ನೀಡಿದ್ದೇನೆ. ಕ್ರೋಮಾ, ವೆಂಟಿಲೇಟರ್ ಸರಿಯಾಗಿದೆ. ಡಯಾಲಿಸಿಸ್ ಕೊಡಲಾಗುತ್ತಿದೆ. ಆದರೆ ರೋಗಿಗಳ ಸಂಖ್ಯೆ ನಿರೀಕ್ಷೆಗೂ ಮೀರಿ ಬರುತ್ತಿರುವುದರಿಂದ ಸೂಕ್ತವಾಗಿ ಸಮರ್ಪಕವಾಗಿ ನೀಡಲು ಸಾಧ್ಯವಾಗುತ್ತಿಲ್ಲ ಈ ಹಿನ್ನೆಲೆಯಲ್ಲಿ ಇವುಗಳನ್ನು ಅಪ್ಗ್ರೇಡ್ ಮಾಡುವ ಅವಶ್ಯಕತೆ ಇದೆ ಈ ಕುರಿತು ಈಗಾಗಲೇ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಅವರೊಂದಿಗೆ ಮಾತನಾಡಿದ್ದೇನೆ. ಜುಲೈ 24 ರಂದು ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಮೆಗನ್ ಆಸ್ಪತ್ರೆಯ ಕುರಿತು ಚರ್ಚಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಈ ಸಭೆಗೆ ಎಲ್ಲಾ ಅಧಿಕಾರಿಗಳು ವಿಸಿಯಲ್ಲಿ ಮಾತನಾಡಲಿದ್ದಾರೆ. ಹೆರಿಗೆ ವಿಭಾಗದಲ್ಲಿಯೂ ಸಹ ನಿರೀಕ್ಷೆಗೂ ಮೀರಿ ಕೆಲಸ ಆಗುತ್ತಿದೆ. ಈ ವಿಚಾರದಲ್ಲಿ ಶಿವಮೊಗ್ಗದ ರೋಗಿಗಳು ಮಾತ್ರ ಬರ್ರಿ, ಹೊರಗಡೆ ಅವರು ಬರಬೇಡಿ ಎಂದು ಹೇಳಲು ಸಾಧ್ಯವಿಲ್ಲ ಹಾಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಮಾಡುವುದು ಬೇರೆ ವಿಚಾರವಾದರೆ ಮೆಗ್ಗಾನ್ ಆಸ್ಪತ್ರೆಯಲ್ಲಿಯೇ ಇರುವ ವ್ಯವಸ್ಥೆಯನ್ನು ಹೆಚ್ಚಿಸುವ ಅವಶ್ಯಕತೆ ಇದೆ ಎಂದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತುಂಬಾ ಅವಶ್ಯಕತೆ ಇದೆ ಮೂರು ತಿಂಗಳಲ್ಲಿ ಮೇಲ್ದರ್ಜೆಗೆ ಏರಿಸುವ ಅವಶ್ಯಕತೆ ಇದೆ. ಈ ಮಧ್ಯೆ ಆಸ್ಪತ್ರೆಯಲ್ಲಿ ಸೂಕ್ತವ್ಯವಸ್ಥೆಯಿಲ್ಲದೆ ಬಡವರಿಗೆ ಚಿಕಿತ್ಸೆ ಮರೆಯಾಗುತ್ತಿದೆ. ಸಾರ್ವಜನಿಕ ಆಸ್ಪತ್ರೆ ಮತ್ತೊಂದನ್ನು ಮಾಡುವುದು ಈಗ ಸದ್ಯಕ್ಕೆ ಪ್ರಮುಖವಾಗಿಲ್ಲ. ಮೆಗ್ಗಾನ್ ನ್ನ ಆಸ್ಪತ್ರೆಯನ್ನು ಅಪ್ ಗ್ರೇಡ್ ಮಾಡುವುದು ಅವಶ್ಯಕತೆ ಇದೆ. ಹಾಗಾಗಿ ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

Megan Hospital will be upgraded - Minister Madhu Bangarappa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close