ad

ನಾನು ಬಂಗಾರಪ್ಪನವರ ಮಗ ಎಂದು ಸಚಿವರು ಹೇಳಿದ್ದೇಕೆ

SUDDILIVE || SHIVAMOGGA

ನಾನು ಬಂಗಾರಪ್ಪನವರ ಮಗ ಎಂದು ಸಚಿವರು ಹೇಳಿದ್ದೇಕೆ-Why did the minister say that he was Bangarappa's son?


ಹಲವು ಸಮಸ್ಯೆಯಲ್ಲಿರುವ ಮೆಗ್ಗಾನ್ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿದರು. ಭೇಟಿ ನೀಡಿ ಹಲವು ರೋಗಿಗಳನ್ನ ಮತ್ತು ಸಮಸ್ಯೆಗಳನ್ನ ಆಲಿಸಿದರು. ಭೇಟಿ ನೀಡಿದ ವೇಳೆ ಮೆಗ್ಗಾನ್ ವ್ಯವಸ್ಥೆ ಸರಿಯಿದ್ದಿದ್ದು ವಿಶೇಷವಾಗಿತ್ತು. 

ಮೊದಲಿಗೆ ಒಪಿಡಿ ಚೀಟಿ ವಿಭಾಗ, ಆರ್ಥೋ ಓಪಿಡಿ, ಚರ್ಮದ ವಿಭಾಗ, ಜನರಲ್ ವಾರ್ಡ್ ಗೆ ಭೇಟಿ ನೀಡಿ ಜನರ ಆರೋಗ್ಯ ವಿಚಾರಿಸಿದರು. ಜನರಲ್ ವಾರ್ಡ್ ಗೆ ಭೇಟಿ ನೀಡಿದ ವೇಳೆಯಲ್ಲಿ ದಾವಣಗೆರೆಯ ವ್ಯಕ್ತಿ ದಾಖಲಾಗಿದ್ದನ್ನ ಗಮನಿಸಿದ ಸಚಿವರು ಅಲ್ಲಿಂದ ಯಾಕೆ ಇಲ್ಲಿಗೆ ಬಂದಿದ್ದೀರಿ ಎಂದು ಕೇಳಿದರು.

ಗಡ್ಡೆಯಾಗಿದೆ ಬಂದಿದ್ದೇವೆ. ಇಲ್ಲಿ ಚೆನ್ನಾಗಿ ಚಿಕಿತ್ಸೆ ಸಿಗುತ್ತಿದೆ ಎಂದು ಹೇಳಿದಾಗ ನಾನು ಯಾರು ಗೊತ್ತಾಯ್ತಾ ಎಂದು ಮಿನಿಸ್ಟರ್ ಕೇಳಿದಾಗ ರೋಗಿಗಳು ಗೊತ್ತಿಲ್ಲ ಎಂದಿದ್ದಾರೆ. ನಾನು ಬಂಗಾರಪ್ಪನವರ ಮಗ ಮಧು ಬಂಗಾರಪ್ಪ ಎಂದು ಹೇಳಿದಾಗ ರೋಗಿ ಅಚ್ಚರಿ ಪಡಿಸಿದ್ದೂ ವಿಶೇಷವಾಗಿತ್ತು. 

ಹೀಗೆ ಜನರಲ್ ವಾರ್ಡ್ ನಲ್ಲಿ ಬೆಳಗಾವಿ ಜಿಲ್ಲೆ ಚಿಂಚೊಳ್ಳಿಯಿಂದ, ಹೊಸನಗರ, ಸಾಗರ ತಾಲೂಕಿನಿಂದ ಬಂದ ರೋಗಿಗಳು ಚಿಕಿತ್ಸೆ ಬಗ್ಗೆ ಸಮಾಧಾನ ವ್ಯಕ್ತಪಡಿಸಿದರು. 

ಮೊದಲಿಗೆ ಒಪಿಡಿಯಲ್ಲಿ ಜನರ ಸಾಗರವೇ ನಿಂತಿದ್ದು ಸಚಿವರು ಇವರಿಗೆ ಕೂರಲು ಜಾಗವಿಲ್ಲಯಾಕೆ ಎಂದು ಪ್ರಶ್ನಿಸಿದರು. ಒಪಿಡಿಯನ್ನೇ ಬೇರೆಡೆ ಸ್ಥಳಾಂತರಿಸಿ ಅಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗುತ್ತಿರುವ ಬಗ್ಗೆ ಡೀನ್ ತಿಳಿಸಿದರು. ನಂತರ ಕಟ್ಟಡ ಸೋರಿಕೆ ಬಗ್ಗೆ ಪ್ರಶ್ನೆ ಕೇಳಿದರು. ನಂತರ ಮೆಗ್ಗಾನ್ ಗೆ ಒಪಿಡಿಗೆ ಹೊಸ ಕಟ್ಟಡ, ಸೋಲಾರ್ ಅಳವಡಿಕೆಗೆ ಮತ್ತು ಕ್ರೋಮಾ ಗೆ ಹೊಸ ಪ್ರಪೋಸಲ್ ಕೊಡುವಂತೆ ಕೋರಿದರು. 

Why did the minister say that he was Bangarappa's son?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close