ಹೆಂಡತಿಯರನ್ನ ಎತ್ತಲು ಆಗದೆ ಬಿದ್ದ ಗಂಡಂದಿರು, ಕೆಸರುಗದ್ದೆಯಲ್ಲಿ ಮಿಂದೆದ್ದ ಜನ-Husbands who fell, unable to lift their wives, people who were swallowed by the mud

SUDDILIVE || SHIVAMOGGA

ಹೆಂಡತಿಯರನ್ನ ಎತ್ತಲು ಆಗದೆ ಬಿದ್ದ ಗಂಡಂದಿರು, ಕೆಸರುಗದ್ದೆಯಲ್ಲಿ ಮಿಂದೆದ್ದ ಜನ-Husbands who fell, unable to lift their wives, people who were swallowed by the mud

Husband, unable


ಕೆಸರು ಗದ್ದೆಯಲ್ಲಿ ಓಡಿದ್ರು, ಹಗ್ಗ ಜಗ್ಗಾಡಿದ್ರು, ಹೆಂಡತಿಯನ್ನು ಹೊತ್ತುಕೊಂಡು ಹೋಗಲು ಆಗದೇ ಬಿದ್ರು, ಹೀಗೆ ವಿಭಿನ್ನ ರೀತಿಯಲ್ಲಿ ಆಟವನ್ನ ಆಡಲಾಯಿತು. ಶಿವಮೊಗ್ಗದಲ್ಲೊಂದು ವಿಭಿನ್ನ ಕೆಸರುಗದ್ದೆ ಆಟ ನಡೆಸಲಾಗಿದೆ. ಯೂತ್ ಹಾಸ್ಟೆಲ್ ಅಸೋಸಿಯೇಷನ್ ಶಿವಮೊಗ್ಗ ಜಿಲ್ಲಾ  ಘಟಕದ ವತಿಯಿಂದ ನಡೆದ ವಿಭಿನ್ನ ಆಟೋಟ ಸ್ಪರ್ಧೆ ನಡೆಸಲಾಗಿದೆ. 

ಶಿವಮೊಗ್ಗ ಜಿಲ್ಲೆಯ ಆಯನೂರು ಬಳಿಯ ಇಟ್ಟಿಗೆಹಳ್ಳಿಯಲ್ಲಿ ಕೆಸರು ಗದ್ದೆ ಆಟೋಟಾ ಸ್ಪರ್ಧೆಗಳನ್ನ ಆಡಿಸಲಾಗಿದೆ.  ಬದುಕಿನ ಜಂಜಾಟ ಬಿಟ್ಟು, ಕೆಸರು ಗದ್ದೆಯಲ್ಲಿ  ದಂಪತಿ ಹಾಗೂ ಮಕ್ಕಳು ಬಿದ್ದು ಎದ್ದಿದ್ದಾರೆ. ಮಕ್ಕಳಿಗೆ ಓಟದ ಸ್ಪರ್ಧೆ, ವಾಲಿಬಾಲ್ ನಡೆದರೆ, ಗಂಡ ಹೆಂಡತಿಯನ್ನು ಹೊತ್ತಕೊಂಡು ಹೋಗುವ ಟಾಸ್ಕ್ ನೀಡಲಾಗಿತ್ತು. 

೭೦ ಕ್ಕೂ ಹೆಚ್ಚಿನ ಮಕ್ಕಳು ಹಾಗೂ ಹಿರಿಯರು ಕೆಸರುಭರಿತ ಗದ್ದೆಯಲ್ಲಿ ವಿವಿಧ ಆಟೋಟ, ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗಿಯಾಗಿದ್ದರು‌. ಕೆಸರುಗದ್ದೆಯಲ್ಲಿ ಬಿದ್ದು,ಕೆಸರಿನಲ್ಲಿ  ಜನರು ಮಿಂದೆದ್ದಿದ್ದಾರೆ. 

Husbands who fell, unable to lift their wives, people who were swallowed by the mud

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close