SUDDILIVE || SHIVAMIGGA
ಜಿಲ್ಲಾ ಕಾರ್ಮಿಕ ಕಚೇರಿ ಎದುರು ಹೈಡ್ರಾಮಾ, ದಿಡೀರ್ ಪ್ರತಿಭಟನೆ-Hydrarama, sudden protest in front of the District Labor Office
ಹಳೇ ಸೂಡ ಕಟ್ಟಡದ ಪಕ್ಕದ ಬಿಲ್ಡಿಂಗ್ ನಲ್ಲಿರುವ ಜಿಲ್ಲಾ ಕಾರ್ಮಿಕರ ಕಚೇರಿ ಎದುರು ದೀಡೀರ್ ಎಂದು ಪ್ರತಿಭಟನೆ ನಡೆಸಿದ್ದಾರೆ. ಅಧಿಕಾರಿಗಳನ್ನ ಘೇರಾವ್ ಮಾಡುವ ಯತ್ನ ನಡೆಸಿ ಹೈಡ್ರಾಮ ನಡೆಸಿದ್ದಾರೆ.
ಜಿಲ್ಲಾ ಕಾರ್ಮಿಕರ ಕಚೇರಿಯಲ್ಲಿ ಭಾನುವಾರ ರಜೆಯ ದಿನ ಕೆಲಸ ಮಾಡುತ್ತಿದ್ದ ಅಧಿಕಾರಿಗಳನ್ನ ಸುತ್ತುವರೆದು ಪ್ರತಿಭಟಿಸಲಾಗಿದೆ. ದಾಖಲಾತಿಗಳನ್ನ ಅಧಿಕಾರಿಗಳು ಸುಡಲು ಬಂದಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗಿದೆ.
ಇಬ್ಬರು ಮಹಿಳ ಅಧಿಕಾರಿ ಮತ್ತೋರ್ವ ಗಂಡಸು ಅಧಿಕಾರಿಗಳು ವಾಹನದಲ್ಲಿ ಸಂಜೆಯ ಮೇಲೆ ಬಂದು ಕೆಲಸ ನಿರ್ವಹಿಸುತ್ತಿದ್ದ ಆರೋಪ ಮಾಡಲಾಗಿದೆ. ವಿನೋಬ ನಗರ ಪೊಲೀಸರು ಸ್ಥಳಕ್ಕೆ ಬಂದು ಪ್ರತಿಭಟನಾಕಾರರನ್ನ ಚದುರಿಸಿದ್ದಾರೆ. ಪೊಲೀಸರ ಮಧ್ಯ ಪ್ರವೇಶದಿಂದ ಕಳೆದ ಎರಡು ಗಂಟೆಗಳಿಂದ ಹೈಡ್ರಾಮಾ ಮುಕ್ತಾಯಗೊಂಡಿದೆ.
ಅಧಿಕಾರಿ ವೇಣುಗೋಪಾಲ್ ಮಾಧ್ಯಮಗಳಿಗೆ ಮಾತನಾಡಿ, ಕಚೇರಿಯಲ್ಲಿ ಇಲಿಗಳ ಕಾಟ ಹೆಚ್ಚಿದೆ. ಹಳೆಯ ಫೈಲುಗಳನ್ನ ಹಾಳು ಮಾಡದಂತೆ ಹಾಗೆ ಸುಡಲು ಕಚೇರಿಯ ಆದೇಶ ಮಾಡಿಕೊಳ್ಳಲಾಗಿದೆ. ಹಾಗಾಗಿ ರಜಾ ದಿನಗಳಲ್ಲಿ ಸುಡಲು ಬಂದಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
Hydrarama, sudden protest in front of the District Labor Office