ad

ನನಗೂ ಸೇತುವೆ ಉದ್ಘಾಟನೆಗೆ ಆಹ್ವಾನ ಬಂದಿಲ್ಲ ಆದರೂ ಹೋಗುವೆ-ಗೋಪಾಲಕೃಷ್ಣ ಬೇಳೂರು- I haven't received an invitation to the bridge inauguration

 SUDDILIVE || SHIVAMOGGA

ನನಗೂ ಸೇತುವೆ ಉದ್ಘಾಟನೆಗೆ ಆಹ್ವಾನ ಬಂದಿಲ್ಲ ಆದರೂ ಹೋಗುವೆ-ಗೋಪಾಲಕೃಷ್ಣ ಬೇಳೂರು-I haven't received an invitation to the bridge inauguration, but I will go - Gopalakrishna Belur

Gopalkrishna, Beluru


ನನಗೂ ಸೇತುವೆ ಉದ್ಘಟನೆಗೆ ಆಹ್ವಾನ ಬಂದಿಲ್ಲ. ಸಿಗಂದೂರು ದೇವಸ್ಥಾನದ ಧರ್ಮದರ್ಶಿ ರಾಮಪ್ಪನವರಿಗೆ ಕರೆ ಬಂದಿಲ್ಲ. ಆದರೂ ನಾನು ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗಲಿದ್ದೇನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು 

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸೇತುವೆಯ ಬಗ್ಗೆ ಕಳಸವಳ್ಳಿಯಲ್ಲಿ ಘರ್ ಘರ್ ಸೇತುವೆ ಎಂದು ಮನೆ ಮನೆಗೆ ಹೋಗಿ ಬಿಜೆಪಿಯವರು ಹೇಳುತ್ತಿರುವುದಾಗಿ ಸುದ್ದಿಯಿದೆ. ನನಗೆ ಅಭ್ಯಂತರವಿಲ್ಲ. ಯಡಿಯೂರಪ್ಪನವರು ಅಕೇಕ್ಷೆಯಂತೆ ನಿರ್ಮಾಣ ಮಾಡಲಾಗಿದೆ. ಸರಿಯಿದೆ.  ನಮಗೆ ರಾಜಕೀಯ ಬೇಡ ಅವರಿಗೆ ಬೇಕಾದರೆ ಮಾಡಿಕೊಳ್ಳಲಿ. ಹಸಿರುಮಕ್ಕಿ ನಾವುಮಾಡುತ್ತೇವೆ. ಮುಂದಿನ ಪ್ರಧಾನಿ ಗಡ್ಕರಿ ಬರ್ತಾಯಿದ್ದಾರೆ. ಸಚಿವ ಸತೀಶ್ ಜಾರಕಿಹೊಳೆ ಬರ್ತಾಯಿದ್ದಾರೆ. ನಾನು ಉದ್ಘಾಟನೆಗೆ ಹೋಗುವೆ ಎಂದರು. 

ಹೆಸರು ನಾಮಕರಣದಲ್ಲೂ ರಾಜಕಾರಣ ನಡೆಯುತ್ತಿದೆ. ಸಿಗಂದೂರು ಚೌಡೇಶ್ವರಿ ಹೆಸರು ಇರಬೇಕು. ಬೇಕಾದನ್ನ ಮೇಲಿನಿಂದ ಅವರು ಮಾಡಿಕೊಂಡ ಬಂದರೂ ನಾವು ಸಿಗಂದೂರು ಹೆಸರು ಬಿಟ್ಟು ಬೇರೆ ಹೆಸರು ಇಡಲು  ಬಿಡಲ್ಲ. ಸಿಗಂದೂರು ತಾಯಿಯ ಎದುರು ಬಿಎಸ್ ವೈ ಹೇಳಿದ್ದರು. ಸೇತುವೆ ಮಾಡುವುದಾಗಿ ಮತ್ತು ಅದಕ್ಕೆ ಸಿಗಂದೂರು ಸೇತುವೆ ಹೆಸರು ಇಡುವುದಾಗಿ ದೇವರ ಬಳಿ ಹೇಳಿದ್ದರು. ಈಗ ಧರ್ಮದರ್ಶಿ ರಾಮಪ್ಪ ಬೇಡವಾಗಿದೆ. ರಾಮಪ್ಪನವರಿಗೂ  ಹೇಳಿರುವೆ ಆಹ್ವಾನಿಸದಿದ್ದರೆ ತಲೆಕೆಡೆಸಿಕೊಳ್ಳಬೇಡಿ ಎಂದಿರುವೆ ಎಂದರು.

ಶರಾವತಿ ಹಿನ್ನೀರಿನಲ್ಲಿ ಮುಳುಗಡೆಯಾಗಿ ಸಾವನ್ನಪ್ಪಿದ್ದ ವನಗದ್ದೆ ಕುಟುಂಬದ ಬಗ್ಗೆ ಮಾಜಿ ಸಚಿವ ಹಾಲಪ್ಪನವರು ಉಲ್ಲೇಖಿಸಿರುವುದನ್ನ‌ ನಾನು ಗಮನಿಸಿರುವೆ. ಅದು ಅವರ ಕುಟುಂಬ ಅಲ್ಲ. ನಾನು ಸಿಎಂ ಬಿಎಸ್ ವೈ ಆಗಿದ್ದಾಗ 100 ಕೋಟಿ ಬಿಡುಗಡೆ ಮಾಡಿದ್ದರು. ಅವರು ಮಾಡಿದ್ದಾರೆ. ನಮಗೆ ಬೇಸರವಿಲ್ಲ. ಬೇಕಾದರೆ ಅವರ ಮೂರ್ತಿಯನೇ ಸಿಗಂದೂರು ಸೇತುವೆ ಬಳಿ ನಿರ್ಮಿಸಿಕೊಳ್ಳಲಿ.  ಸೇತುವೆ ನಿರ್ಮಾಣಕ್ಕೆ ಅವರ ಅಪ್ಪನ ಮನೆಯಿಂದ ಹಣ ತಂದಿದ್ದರೆ ರಾಜಕಾರಣ ಮಾಡಿಕೊಳ್ಳಲಿ. ನಾನು ಸೇತುವೆ ಆಗಲಿ ಎಂದು ಕೆಲಸ ಮಾಡಿದ್ದೆ. ನಾನು ಅಡ್ಡಹಾಕಲು ಸಾಧ್ಯವಿತ್ತು. ಮಾಡಲಿಲ್ಲ. ಹಾಲಪ್ಪ ಹಸಿರುಮಕ್ಕಿ ಅಡ್ಡಹಾಕಿಸಿದ್ದರು.  ಅದರ ನಿರ್ಮಾಣಕ್ಕೆ ನಾನು ಅನುದಾನ ಮಾಡಿಸಿರುವೆ ಎಂದರು. 

ಸಿಗಂದೂರು ಸೇತುವೆ ನಿರ್ಮಾಣ ಒಳ್ಳೆಯದಾಗಿದೆ. ಆ ಭಾಗದ ಜನರಿಗೆ ಸೇತುವೆ ಅನುಕೂಲವಾಗಲಿದೆ. ಹಸಿರು ಮಕ್ಕಿ ಜನರು ಏನು ಪಾಪ ಮಾಡಿದ್ದರು ಎಂದು ಪ್ರಶ್ನಿಸಿದ ಅವರು ಸಿಗಂದೂರಿಗೆ ಬರುವ ಭಕ್ತರು ಸೇತುವೆ ನಿರ್ಮಾಣವಾದ ನಂತರ ಲಾಂಜ್ ಗೆ ಕಾಯಬೇಕಿಲ್ಲ. ಸಂಜೆ 6 ಗಂಟೆಯ ಮೇಲೆ ಸ್ಥಳೀಯರಿಗೆ ಶಾಪದಂತಾಗಿತ್ತು. ಅದು ನಿವಾರಣೆಯಾಗಿದೆ ಎಂದರು. 

ಹಣೆ ಬರಹದಲ್ಲಿ ಬರೆದಿರಬೇಕು. ಡಿಕೆಶಿ ಸಿಎಂ ಆಗಲಿ ಎಂದರೆ ತಪ್ಪಿಲ್ಲ.‌ನಾನು ಸಚಿವ ನಾಗಬೇಕು ಎಂದರೆ ತಪ್ಪಿಲ್ಲ. ಸಿದ್ದರಾಮಯ್ಯ ಐದು ವರ್ಷ ನಾನೆ ಸಿಎಂ ಎಂದಿದ್ದಾರೆ. ಯಾರೆ ಆದರೂ ಕಾಂಗ್ರೆಸ್  ಮುಂದಿನ ಅವಧಿಗೆ ಅಧಿಕಾರಕ್ಕೆ ಬರಬೇಕಿದ್ದರೆ ಸಮರ್ಪಕ ಆಡಳಿತ ನೀಡಬೇಕು ಎಂದರು. 

ದೇಶದ ಸಂಪನ್ಮೂಲ ಕೆಲವರಲ್ಲಿದೆ  ಎಂಬ ಕಾಳಜಿ ಇರುವ ಸಚಿವ ನಿತಿನ್ ಗಡ್ಕರಿ ಅವರು ಮುಂದಿನ ಪ್ರಧಾನಿ ಆಗಬೇಕು. ಆರ್ ಎಸ್ ಎಸ್ ನ ಸರಸಂಚಾಲಕ ಮೋಹನ್ ಭಾಗವತ್ ಅವರು 75 ವರ್ಷ ಆದ ಶಾಸಕರು, ಸಚಿವರಿಗೆ ಸ್ಥಾನಬಿಟ್ಟುಕೊಡಿ ಎಂದಿದ್ದಾರೆ. ಮೋದಿ ಅವರಿಗೂ 75 ವರ್ಷ ಆಗಿದೆ ಅವರ ಬಗ್ಗೆ ಚಕಾರ ಎತ್ತುತ್ತಿಲ್ಲ ಯಾಕೆ?  ಬಿಎಸ್ ವೈಗೆ ಕಣ್ಣೀರು ಹಾಕಿಸಿದ್ರಲ್ಲ ಎಂದು ಪ್ರಶ್ನಿಸಿದ ಅವರು ಹಾಗಾಗಿ ಮೋದಿ ಅವರನ್ನ ಅವರು ಇಳಿಸುತ್ತಾರೋ ಬಿಡುತ್ತಾರೋ ಅವರಿಗೆ ಬಿಟ್ಟಿದ್ದು. ಅವರ ನಂತರ ಪ್ರಧಾನಿ ರೇಸ್ ನಲ್ಲಿ ಗಡ್ಕರಿ ಇದ್ದಾರೆ ಎಂದರು.

I haven't received an invitation to the bridge inauguration

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close