ad

ಎಲ್ಲದಕ್ಕೂ ಜುಲೈ 14 ರ ನಂತರ ಉತ್ತರ ಕೊಡುವೆ-ಸಚಿವ ಮಧು ಬಂಗಾರಪ್ಪ-I will reply to everything after July 14th - Minister Madhu Bangarappa

 SUDDILIVE || SHIVAMOGGA

ಎಲ್ಲದಕ್ಕೂ ಜುಲೈ 14 ರ ನಂತರ ಉತ್ತರ ಕೊಡುವೆ-ಸಚಿವ ಮಧು ಬಂಗಾರಪ್ಪ-I will reply to everything after July 14th - Minister Madhu 

Reply, Madhu Bagarappa

ಎಲ್ಲದಕ್ಕೂ ಉತ್ತರವನ್ನ ಜುಲೈ.14 ರ ನಂತರ ಅಂದರೆ ಸೇತುವೆಯ ಉದ್ಘಾಟನೆಯ ನಂತರ ಉತ್ತರಿಸುವೆ ಎಂದು ಸಚಿವ ಮಧು ಬಂಗಾರಪ್ಪ ಗುಡುಗಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸೇತುವೆ ಉದ್ಘಾಟನೆಗೆ ನನಗೆ ಅಧಿಕೃತವಾಗಿ ಇನ್ನೂ ಬಂದಿಲ್ಲ. ದುರಂಹಕಾತದಿಂದ ಮಾಡಲು ಹೊರಟರೆ ಏನೂ ಮಾಡಲು ಆಗೊಲ್ಲ. ಸಿಗಂದೂರು ದೇವಸ್ಥಾನವನ್ನ ಮುಳುಗಿಸಲು ಹೋದವರಿಗೆ ಏನು ಹೇಳೋಣ,  ಕೇಂದ್ರ ಮತ್ತು ರಾಜ್ಯ ಸರಿಸಮಾನವಾಗಿರಬೇಕು. ಸೇತುವೆ ಕಾಮಗಾರಿ ಇನ್ನೂ ಬಾಕಿ ಇದೆ. ಆಗಲಿ, ಉದ್ಘಾಟನೆ ನಂತರ ಮಾತನಾಡುವೆ ಎಂದರು. 

ಸೇತುವೆಗೆ ಕಾಗೋಡು ತಿಮ್ಮಪ್ಪ, ಗೋಪಾಲಕೃಷ್ಣ ಬೇಳೂರು ಅವರು ಹೋರಾಡಿದ್ದಾರೆ. ಬೆವರು ಸುರಿಸಿದ್ದಾರೆ. ಇವರು ಸೇತುವೆ ಉದ್ಘಾಟನೆ ಮುಗಿಸಿಕೊಳ್ಳಲಿ, ಅದರ ಡಿಜಿಟಲ್ ಸ್ಕ್ರೀನ್ ನಲ್ಲಿ ಹಾಕಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. ಟ್ಯಾಕ್ಸ್ ಹೇಗೆ ಬಂದಿದೆ ಎಂದು ಡಿಜಿಟಲ್ ನಾವು ಹಾಕಿಸುತ್ತೇವೆ ಎಂದರು.

ಪುಕ್ಕಟೆ ಪ್ರಚಾರ ಪಡೆಯುವ ನೀವು ತೆರಿಗೆ ಬಗ್ಗೆ ಎಷ್ಟು ಮಾತನಾಡಿದ್ರಿ, ಹೇಸಿಗೆ ಇದು. ಮೆಗ್ಗಾನ್ ನ್ನ ಸಿಮ್ಸ್ ಗೆ ಅಡಯಿಟ್ಟಿದ್ದು,  ಅರಣ್ಯ ಒತ್ತುವರಿ ಮಾಡಿ ನಂತರ ಬಿಟ್ಟುಕೊಡುವುದು. ಇದು ಇಲ್ಲಿನ ಬಿಜೆಪಿಯ ಗುಣವಾಗಿದೆ. ಜಿಲ್ಲಾ ಆಸ್ಪತ್ರೆಯನ್ನ ಮಾಡಲು ಆಗದಿದ್ದರೆ ಮೆಗ್ಗಾನ್ ಬಿಟ್ಟುಕೊಡಲಿ, ಸಿಮ್ಸ್ ಆರಂಭಗೊಂಡಾಗ  ಕಾಲನಂತರ ಆಸ್ಪತ್ರೆಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬುದು ಬೈಲಾ ಇದೆ. ನೋಡೋಣ ಏನಾಗಲಿದೆ ಎಂದು ಹೇಳಿದರು.

ಮೋಹನ್ ಭಾಗವತ್ ಅವರ ಹೇಳಿಕೆ ಪಕ್ಷಕ್ಕೆ ಬಿಟ್ಟಿದ್ದು, ಇದು ಮೋದಿಗೆ ಸೂಚನೆಗೆ ಎಂದು ಹೇಳಲು ಸಾಧ್ಯವಿಲ್ಲ. ಅವರ ಚಿಂತನೆಗಳು ಅವರವರಿಗೆ ಎಂದು ಸಚಿವ ತಿಳಿಸಿದ ಅವರು, ಕಷ್ಟಕಾಲದಲ್ಲಿ ಲಾಂಜ್ ಸೇವೆ ನೀಡಿದೆ. ಲಾಂಜ್ ಹೇಗೆ ಪ್ರವಾಸೋದ್ಯಕ್ಕೆ ಕೊಡಬಹುದು ಯೋಜಚಿಸಬೇಕಿದೆ. ಪ್ರವಾಸೋದ್ಯಮ ಬೆಳವಣಿಗೆಗೆ ಅದನ್ನ ಉಳಿಸಿಕೊಳ್ಳಲಾಗುವುದು. ಅಲ್ಲಿ ಗುತ್ತಿಗೆ ಕೆಲಸದವರು ಕೆಲಸ ಕಳೆದುಕೊಳ್ಳದಂತೆ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ. ಉದ್ಘಾಟನೆ ನಂತರ ಯೋಚಿಸುವ ಎಂದರು. 

ಸಿಎಂ ಬದಲಾವಣೆ ಕುರಿತು ಮಾತನಾಡಿದ, ಮಾಧ್ಯಮಗಳಲ್ಲಿ ರೆಕ್ಕೆ ಪುಕ್ಕನೂ ಇರಲ್ಲ. ಕಂಟ್ರೋಲ್ ಇರೋದು ಹೈಕಮಾಂಡ್ ಇದ್ದಾರೆ ಹೈಕಮಾಂಡ್ ಕೆಲಸ ಮಾಡಲು ಹೇಳಿದ್ದಾರೆ ಕೆಲಸ ಮಾಡುತ್ತೇವೆ ಎಂದ ಅವರು ಸಿಗಂದೂರು ಸೇತುವೆ ಉದ್ಘಾಟನೆ ತುರಾತುರಿಯಲ್ಲಿ ನಡೆಯುತ್ತಿದೆಯಾ ನೋಡಬೇಕು ಆಹ್ವಾನ ಪತ್ರಿಕೆ ಸರಿಯಾಗಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಸೇತುವೆ ಉದ್ಘಾಟನೆಯ ಕುರಿತು, ಸಿಎಂ ಸಿದ್ದರಾಮಯ್ಯನವರಿಗೆ ಅವರಿಗೆ ಖುದ್ದು ಗಡ್ಕರಿಯವರೆ ಮಾತನಾಡಿದ್ದಾರೆ ಎಂಪಿ ಪ್ರಚಾರಕ್ಕೆ ಇಳಿದಂತೆ ಕಾಣುತ್ತದೆ. ಎಲ್ಲದಕ್ಕೂ ಜುಲೈ 14 ರನಂತರ ಮಾತನಾಡುವೆ ಎಂದರು. 

I will reply to everything after July 14th - Minister Madhu Bangarappa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close