ad

ಸಂಬಳಕೊಡಲು ಆಗದೆ ಇದ್ದ ಸಮಯದಲ್ಲಿ ಶರಾವತಿ ಡೆಂಡಲ್ ಕಾಲೇಜನ್ನ ಉಳಿಸಿಕೊಂಡು ಬಂದಿದ್ದೇವೆ-ಮಧು ಬಂಗಾರಪ್ಪ- We have maintained Sharavathi Dental College

 SUDDILIVE || SHIVAMOGGA

ಸಂಬಳಕೊಡಲು ಆಗದೆ ಇದ್ದ ಸಮಯದಲ್ಲಿ ಶರಾವತಿ ಡೆಂಡಲ್ ಕಾಲೇಜನ್ನ ಉಳಿಸಿಕೊಂಡು ಬಂದಿದ್ದೇವೆ-ಮಧು ಬಂಗಾರಪ್ಪ-We have maintained Sharavathi Dental College during times when salaries could not be paid - Madhu Bangarappa

Sharavathi, maintained

ಬಹಳಕಷ್ಟದಿಂದ ಈ ಶರಾವತಿ ಎಜುಕೇಷನ್ ಟ್ರಸ್ಟ್ ನ್ನ ಉಳಿಕೊಳ್ಳಲಾಗಿದ್ದು, ಬಂಗಾರಪ್ಪನವರ ಕೆಲಸವನ್ನ ಉಳಿಸಿಕೊಳ್ಳುವ ಕೆಲಸವಂತೂ ಮಾಡುವೆ ಎಂದು ಸಚಿವ ಮಧುಬಂಗಾರಪ್ಪ ತಿಳಿಸಿದರು. 

ಶರಾವತಿ ದಂತ ವೈದ್ಯಕೀಯ ಕಾಲೇಜಿನ 25 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಅವರು, ಸಂಬಳಕೊಡಲು ಸಾಧ್ಯವಾಗದ ಸಮಯದಲ್ಲಿ ಆಕಾಶ್ ಆಡಿಯೋದಿಂದ ಹಣಕೊಡಲಾಗುತ್ತಿತ್ತು. ಅಂತಹ ಕಷ್ಟ ಕಾಲದಿಂದ ಬೆಳೆದುಕೊಂಡು ಬಂದಿದ್ದೇವೆ. ಇದನ್ನ ವ್ಯವಸ್ಥೆಯಾಗಿ ತಂದಿದ್ದಾರೆ ಎಂದರೆ ಶಾಸಕ ಭೀಮಣ್ಣನವರ ಶ್ರಮವಿದೆ. ಈ ಟ್ರಸ್ಟ್ ಕೈತಪ್ಪಿಹೋಗುವ ಅಪಾಯವಿತ್ತು. ಇದಕ್ಕೆ ಅವರ ಶ್ರಮವಿದೆ ಎಂದರು.

ವಿದ್ಯಾರ್ಥಿಗಳೇ ನಮ್ಮ ಕಾಲೇಜಿನ ರಾಯಬಾರಿಗಳಾಗಿದ್ದಾರೆ. ಇವರು ಆಗದಿದ್ದರೆ ಸಂಸ್ಥೆಗೆ ಕೆಟ್ಟುಹೆಸರು ಆಗುತ್ತಿತ್ತು. ಚಂದ್ರಣ್ಣ, ಚಾಮು ಅವರು ಬಹಳ ಶ್ರಮವಿದೆ. ನಾವು ಕಾಲೇಜಿಗೆ ಬರ್ತಾಯಿದ್ದಿದ್ದು ಬಹಳ ಕಡಿಮೆ. ಬೆಳೆಸಿದ್ದಾರೆ ಎಂದರು. 

ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ ಶಿಕ್ಷಣ‌ಸಂಸ್ಥೆ ನಡೆಸುವುದು ಸುಲಭವಲ್ಲ. ಅಂತಹದ್ದರಲ್ಲಿ ಶರಾವತಿ ಎಜುಕೆಷನ್ ಟ್ರಸ್ಟ್ ಅನೇಕ ವಿದ್ಯಾರ್ಥಿಗಳ ಬದುಕು ಕಟ್ಟಿಕೊಟ್ಟಿದೆ ಎಂದರು. ಶಾಸಕ ಚೆನ್ನಬಸಪ್ಪ, ಎಂಎ್ ಸಿ ಬಲ್ಕಿಸ್ ಭಾನು, ಡಿ.ಎಸ್.ಅರುಣ್, ಡಿಸಿ ಗುರುದತ್ತ ಹೆಗಡೆ, ಎಸ್ಪಿ ಮಿಥುನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. 

We have maintained Sharavathi Dental College

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close