SUDDILIVE || SHIVAMOGGA
ಕುವೆಂಪು ಅವರ ಹೆಸರು ಅಪಥ್ಯವೆನಿಸಿದರೆ, ಸಾವರ್ಕರ್, ಮೋಹನ್ ಭಾಗವತ ಅಥವಾ ದತ್ತಾತ್ರಿ ಹೊಸಬಾಳೆ ಹೆಸರಿಡಲಿ-ಕಲ್ಲೂರು ಮೇಘರಾಜ್-If Kuvempu's name is inappropriate, then let it be named after Savarkar, Mohan Bhagwat or Dattatri Hosabale - Kallur Megharaj
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಅವರ ಹೆಸರನ್ನ ಘೋಷಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಅಪೇಥ್ಯವೆಸಿದರೆ ಸಾವರ್ಕರ್, ಮೋಹನ್ ಭಾಗವತ್ ಅಥವಾ ದತ್ತಾತ್ರಿ ಹೊಸಬಾಳೆ ಅವರ ಹೆಸರನ್ನಿಡಲಿ ಎಂದು ಹೋರಾಟಗಾರ ಕಲ್ಲೂರು ಮೇಘರಾಜ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯ ವಿಮಾನನಿಲ್ದಾಣಕ್ಕೆ ರಾಣಿ ಚೆನ್ನಮ್ಮ, ಬಿಜಾಪುರದ ವಿಮಾನ ಜಿಕ್ದಾಣಕ್ಕೆ ಜಗಜ್ಯೋತಿ ಬಸಣ್ಣ ಅವರ ಹೆಸರು ಶಿವಮೊಗ್ಗದ ವಿಮಾನನಿಲ್ದಾಣಕ್ಜೆ ಕುವೆಂಪು ಅವರ ಹೆಸರಿಟ್ಟು ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಆದರೆ ಪ್ರಸ್ತಾವನೆ ಕೇಂದ್ರ ಇನ್ನೂ ಅಂಗೀಕಾರ ಮಾಡಿಲ್ಲ. ಕುವೆಂಪು ಹೆಸರು ಕೇಂದ್ರಕ್ಕೆ ಅಪಥ್ಯವೆನಿಸಿದರೆ ಸಾವರ್ಕರ್, ಮೋಹನ್ ಭಾಗವತ್ ಅಥವಾ ದತ್ತಾತ್ರಯಾ ಹೊಸಬಾಳೆ ಹೆಸರಿಡಲಿ. ಕುವೆಂಪು ಕನ್ನಡ ನಾಡಿನ ಆಸ್ಮಿಥೆ ಆಗಿದ್ದಾರೆ. ಅವರ ಹೆಸರನ್ನ ಅಂಗೀಕರಿಸಬೇಕೆಂದರು.
ಸಿದ್ದರಾಮಯ್ಯನವರು 7 ವರ್ಷ ಸಿಎಂ ಆಗಿದ್ದಾರೆ ಕುವೆಂಪು ಹೆಸರಿನ ವಿಷಯದಲ್ಲಿ ಯಾಕೆ ಚಕಾರತೆಗೆಯುತ್ತಿಲ್ಲ. ಸಙಸದ ರಾಘವೇಂದ್ರ ಮತ್ತು ಬಿಎಸ್ ವೈ ಅವರು ಪ್ರಚಾರ ಪ್ರಿಯರು. ಯಡಿಯೂರಪ್ಪನವರ ಹೆಸರಿಡಲು ಹೋದಾಗ ನನ್ನ ಹೆಸರು ಬೇಡ ಎಂದಿದ್ದರು. ನಂತರ ಯಾಕೆ ಮೌನವಾದರು? ಇವರಿಗೆ ಕೇಂದ್ರದ ವಿಮಾನ ಯಾನ ಸಚಿವರನ್ನ ಭೇಟಿ ಮಾಡಿ ಅಂಗೀಕಾರ ಪಡೆಯಲಿಲ್ಲ. ಕೇಂದ್ರ ಮತ್ತುರಾಜ್ಯ ಸರ್ಕಾರ ಒಮ್ಮತದಿಂದ ಕುವೆಂಪು ಅವರ ಘೋಷಿಸಬೇಕೆಂದರು. ಒಮ್ಮತದ ಘೋಷಣೆ ಮಾಡದಿದ್ದರೆ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
If Kuvempu's name is inappropriate