SUDDILIVE || SHIVAMOGGA
ಶಿವಮೊಗ್ಗದಲ್ಲಿ ಕಟ್ಟಡಗಳ ನಿರ್ಮಾಣದಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳು-Problems being faced by the public due to construction of buildings in Shivamogga
ಬೆಳೆಯುತ್ತಿರುವ ಶಿವಮೊಗ್ಗದಲ್ಲಿ ಇತ್ತಿಚಿನ ದಿನಗಳಲ್ಲಿ ವಾಣಿಜ್ಯ ಸಂಕೀರ್ಣಗಳ ನಿರ್ಮಾಣಗಳು ತುಸು ಹೆಚ್ಚಾಗಿಯೆ ನಡಿತಿದೆ. ನಗರ ಬೆಳೆದಷ್ಟು ಸ್ಥಳಿಯರಿಗೆ ಉತ್ತಮ ವ್ಯವಹಾರ ವ್ಯಾಪಾರ ನಡೆಯುವುದು ಸಂತಸವೇ ಸರಿಯಾದರು ಕಟ್ಟಡ ನಿರ್ಮಾಣದ ಸಮಯದಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಮಾತ್ರ ಇನ್ನು ಕೂಡ ನಿಂತಿಲ್ಲ. ಶಿವಮೊಗ್ಗದ ಇಕ್ಕೆಲಗಳ ರಸದತೆಗಳು ಮೈಸೂರಿನ ರಸ್ತೆಗಳಷ್ಟು ವಿಶಾಲವಾಗಿಲ್ಲದಿದ್ದರು ತಕ್ಕ ಮಟ್ಟಿಗೆ ಇದೇ.
ಒಂದೆ ಭಾರಿಗೆ ಎರಡು ಕಾರುಗಳು ಸರಾಗವಾಗಿ ಸಾಗಬಹುದಾಗಿದೆ, ಅಷ್ಟಾಗಿದ್ದರೆ ನಮ್ಮ ಶಿವಮೊಗ್ಗ ಸುಂದರ ಸಂಚಾರದ ತಾಣ. ಕಟ್ಟಡ ನಿರ್ಮಾಣದ ಹೆಸರಿನಲ್ಲಿಇತ್ತಿಚಿನ ದಿನಗಳಲ್ಲಿ ರಸ್ತೆಗಳ ಮೇಲೆ ಮರಳು, ಜಲ್ಲಿಗಳನ್ನು ಸುರಿಯುತ್ತಿರುವುದು ಸಾರ್ವಜನಿಕರಲ್ಲಿ ಕಿರಿ ಕಿರಿಯನ್ನುಂಟು ಮಾಡಿದೆ.
ಇಂದು ನಗರದ ಅಚ್ಯುತ್ ರಾವ್ ಬಡಾವಣೆಯ ಮುಖ್ಯ ರಸ್ತೆಯಲ್ಲಿ ನಿರ್ಮಾಣ ವಾಗುತ್ತಿರುವ ಕಟ್ಟಡಕ್ಕೆ ಜಲ್ಲಿ ಕಲ್ಲನ್ನು ತಂದು ಹಾಕಲಾಗಿದೆ. ಸಾಮಾನ್ಯವಾಗಿ ನಗರ ಭಾಗಗಳಲ್ಲಿ ಟ್ರಾಕ್ಟರ್ ಅಥವ ಟಿಲ್ಲರ್ ಗಳಲ್ಲಿ ಕಚ್ಚ ವಸ್ತುಗಳನ್ನು ತಂದು ಹಾಕಿದರೆ ಅದು ಸಾರ್ವಜನಿಕರಿಗೆ ತೊಂದರೆ ಆಗಲ್ಲ, ಆದ್ರೆ ಇಲ್ಲಿ 10 ವಿಲ್ ಟಿಪ್ಪರ್ ನಲ್ಲಿ ಮರಳು ಜಲ್ಲಿಗಳನ್ನು ತಂದು ಹಾಕುತಿದ್ದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟುಮಾಡಿದೆ.
ನಗರದ ಮಧ್ಯಭಾಗದಲ್ಲೆ ಈ ರೀತಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವ ಇದನ್ನು ಜಿಲ್ಲಾಡಳಿತವಾಗಲಿ ಮಹಾನಗರ ಪಾಲಿಕೆಯಾಗಲಿ ಗಮನಿಸುವುದೆ...
construction of buildings in Shivamogga