SUDDILIVE || SHIVAMOGGA
ಈಶ್ವರ್ ಖಂಡ್ರೆ ದನ ಕಾಯಕ್ಕೂ ಯೋಗ್ಯರಲ್ಲ-ತೀನಾಶ್ರೀ-Ishwar Khandre is not even fit for cattle-Teenasree
35 ಸಾವಿರ ರೈತರಿಗೆ ಅರಣ್ಯ ಇಲಾಖೆ ಶಿವಮೊಗ್ಗ ಜಿಲ್ಲೆಯಲ್ಲಿ ನೋಟೀಸ್ ನೀಡಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಅವರು ರೈತರ ಗೊಬ್ಬರ ಹೋರಾಟಕ್ಕೆ ಕರೆ ನೀಡಿರುವುದು ಸರಿಯಿದೆ. ಅವರ ವಿಧಾನ ಸಭಾ ಕ್ಷೇತ್ರವಾದ ಶಿಕಾರಿಪುರದಲ್ಲಿ 1000 ಜನ ರೈತರಿಗೆ ಹಕ್ಕಪತ್ರ ಪಡೆದವರಿಗೆ ನೋಟೀಸ್ ನೀಡಿರುವ ಬಗ್ಗೆ ದಿವ್ಯ ಮೌನವಾಗಿರುವುದೇಕೆ ಎಂದು ಮಲೆನಾಡು ರೈತರ ಹೋರಾಟ ವೇದಿಕೆ ಆಕ್ಷೇಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಬಗುರ್ ಹುಕುಂದಾರರಿಗೆ ಹಕ್ಕುಪತ್ರ ಕೊಡಿಸಿ ಎಂದು ಸೈಕಲ್ ತುಳಿದಿರುವುದು ಮಾಧ್ಯಮದ ಸಂದರ್ಶನದಲ್ಲಿ ಹೇಳಿದ್ದಾರೆ. ರೈತರು ದೇಶದ ಬೆನ್ನಲುಬು, ರೈತರು ಜೀವಾಳ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಬಂಗಾರಪ್ಪನವರ ಕುಟುಂಬಕ್ಕೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಸಚಿವ ಹುಚ್ಚರಾಗಿದ್ದಾರೆ. ಸಚಿವ ಈಶ್ವರ್ ಖಂಡ್ರೆ ದನಗಳು ಕಾಡಿಗೆ ಹೋಗಬಾರದು ಎಂದು ಹೇಳಿಕೆ ಕೊಡುತ್ತಾರೆ. ಈತ ದನಕಾಯಕ್ಕೂ ಯೋಗ್ಯರಲ್ಲ. ಮೊದಲು ಸಚಿವ ಸ್ಥಾನದಿಂದ ಒದ್ದು ಓಡಿಸಬೇಕು. ಸಿದ್ದರಾಮಯ್ಯ ಬಿದ್ದರಾಮಯ್ಯ ರಾಗಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಸಂಸದರಿಗೆ, ಶಾಸಕರಿಗೆ ಸಚಿವರು ರೈತರ ನೆರವಿಗೆ ಬರಬೇಕು. 45 ವಿಧಾನ ಸಭೆ ಕ್ಷೇತ್ರದಲ್ಲಿ ರೈತರ ಭೂಮಿ ಸಮಸದಯೆಯಿದೆ. ಬ್ರಿಟೀಶರು ಪ್ರಾಣ ತಿಂದ ಹಾಗೆ ನಮ್ಮ ಜನಪ್ರತಿನಿಧಿಗಳು
ಆ.9 ರಂದು ವಿಧಾನ ಸಭೆ ಅಧಿವೇಶನ ನಡೆಯಲಿದೆ. ಈ ಹಿಂದೆ ಶಾಸಕಿ ಶಾರದಾ ಪೂರ್ಯನಾಯ್ಕ್ ಮಾತನಾಡಿದ್ದರು. ಸಚಿವ ಪ್ರಿಯಾಂಕ್ ಖರ್ಗೆ ಮುಂದಿನ ಅಧಿವೇಶನದ ಒಳಗೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಭರವಸೆ ಭರವಸೆಯಾಗಿಯೇ ಉಳಿದಿದೆ. ರೈತರನ್ನ ಜೀವಂತವಾಗಿ ಕೊಲ್ಲಲಿಕ್ಕೆ ಹೊರಟಿದ್ದಾರೆ. ಸಿಎಂ ಸೀಟಿಗೆ ಹೋರಾಟ ನಡೆಯುತ್ತಿದೆ. 15 ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಜನಪ್ರತಿನಿಧಿಗಳ ವಿರುದ್ಧವೇ ಹೋರಾಡುವುದಾಗಿ ಎಚ್ಚರಿಸಿದರು.
ಕಲ್ಮನೆ ಗ್ರಾಮದಲ್ಲಿ 63 ರೈತರಿಗೆ ನೋಟಿಸ್ ನೀಡಲಾಗಿದೆ. ಶೆಟ್ಟಿಹಳ್ಳಿ ಅಭಯಾರಣ್ಯವನ್ನ ಕೈಬಿಟ್ಟ ಸರ್ಕಾರ, ದೊಡ್ಡವರ ಆಸ್ತಿಯ ರಕ್ಷಣೆಗೆ ನಿಲ್ಲುತ್ತಾರೆ. ಕಲ್ಮನೆ ಗ್ರಾಮದ ಕೃಷಿ ಹೋರಾಟಗಾರರಿಗೆ ನೋಟೀಸ್ ಕೊಡಲಾಗಿದೆ ಎಂದು ದೂರಿದರು.
Ishwar Khandre is not even fit for cattle-Teenasree