ad

ಶಿಕ್ಷಣ ಸಚಿವರಿಗೆ ಮನರಂಜನೆ ಖಾತೆ ಇದ್ದಿದ್ದರೆ ಚೆನ್ನಾಗಿರ್ತಿತ್ತು-ಹಾಲಪ್ಪ- It would have been better if the Education Minister had a Ministry of Entertainment - Halappa

 SUDDILIVE || SHIVAMOGGA

ಶಿಕ್ಷಣ ಸಚಿವರಿಗೆ ಮನರಂಜನೆ ಖಾತೆ ಇದ್ದಿದ್ದರೆ ಚೆನ್ನಾಗಿರ್ತಿತ್ತು-ಹಾಲಪ್ಪ-It would have been better if the Education Minister had a Ministry of Entertainment - Halappa

Education, Entertainment

ಬಿಜೆಪಿಯ ಪ್ರಬುದ್ಧರ ಸಭೆಯಲ್ಲಿ ಮಾಜಿ ಶಾಸಕ ಹಾಲಪ್ಪನವರ ಭಾಷಣ ಗಮನ ಸೆಳೆದಿದೆ. ರೈತರ ಪರ, ಕಾನೂನು ಬಾಹಿರ ಚಟುವಟಕೆಗಳ ವಿರುದ್ಧ ಮಾತನಾಡುವ ಸಚಿವ ಮಧು ಬಂಗಾರಪ್ಪನವರು ಹೇಗೆ ರೈತ ವಿರೋಧಿ ಮತ್ತು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಹೇಳುವ ಮೂಲಕ ಸಭೆಯಲ್ಲಿ ಕಿಚ್ಚುಹಚ್ಚಿಸಿದ್ದಾರೆ.

ನಗರದ ಬಾಲರಾಜ ಅರಸ್ ರಸ್ತೆಯಲ್ಲಿರುವ ಬಂಜಾರ ಹಾಲ್ ನಲ್ಲಿ ಬಿಜೆಪಿಯ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡದ ಪ್ರಬುದ್ಧರ ಸಭೆ ನಡೆದಿದೆ. ಪ್ರಭುದ್ಧರ ಸಭೆಯಲ್ಲಿ ಮಾಜಿ ಸಚಿವರು ಹಾಲಿ ಸಚಿವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 


ಬಿಜೆಪಿ ಸರ್ಕಾರದಲ್ಲೂ ರೈತರ ಮೇಲಿನ ದೌರ್ಜನ್ಯ ನಡೆದಿಲ್ಲ.ಆದರೆ ಇದೇ ಕಾಂಗ್ರೆಸ್ ಸರ್ಕಾರ ರೈತರ ಪರ ಇದೆ ಎಂದು ಹೇಳಿ ಬಡ ರೈತರ ವಿರುದ್ಧ ದೌರ್ಜನ್ಯ ನಡೆಸಿದ್ದಾರೆ.  ಸಚಿವ ಮಧು ಬಂಗಾರಪ್ಪ ಸಾಗರ ತಾಲೂಕಿನ 7 ಜನ ರೈತರನ್ನ 13 ದಿನ‌ ಜೈಲಿನಲ್ಲಿಟ್ಟಿದ್ದರು. ಇದನ್ನ ನಾವು ಜನರಿಗೆ ಹೇಳಬೇಕು ಎಂದು ಹೇಳಿದರು. 

ಸೊರಬ ತಾಲೂಕು ಹಳ್ಳಿಗಳ ನಾಡು, ಬಂಗಾರಪ್ಪನವರನ್ನ ಕೊಟ್ಟ ತಾಲೂಕು. ಕುಮಾರ ಬಂಗಾರಪ್ಪನವರು ಸಚಿವರಾಗಿದ್ದಾರೆ. ನಾನು ಶಾಸಕನಾಗಿದ್ದೆ. ಆದರೆ ಅದೇ ಊರಿನಲ್ಲಿ ನಾಲ್ಕು ಇಸ್ಪೀಟ್ ಆಡುವ ಕ್ಲಬ್ ನ್ನ ಸಚಿವ ಮಧು ಬಂಗಾರಪ್ಪ ನಡೆಸುತ್ತಿದ್ದಾರೆ.  ಇಲ್ಲಿ ಸಂಗ್ರಹವಾಗುವ ಹಣ ಮೊದಲಿಗೆ ಶಿರಸಿಗೆ ಹೋಗುತ್ತದೆ. ನಂತರ ಬೆಂಗಳೂರಿನ ಸದಾಶಿವ ನಗರಕ್ಕೆ ಹೋಗುತ್ತದೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 

ಜಿಲ್ಲಾ ಉಸ್ತುವಾರಿ ಸಚಿವರನ್ನ  ಶಿಕ್ಷಣ ಸಚಿವರನ್ನಾಗಿ ಮಾಡುವ ಬದಲು ಯಾವುದಾದರೂ ಮನೋರಂಜನೆಯ ಸಚಿವರನ್ನಾಗಿ ಮಾಡಬಹುದಿತ್ತು ಎಂದು ವ್ಯಂಗ್ಯವಾಡಿದ ಹರತಾಳು ಹಾಲಪ್ಪ, ಸೇತುವೆ ಕಟ್ಟಲು ಬಿಎಸ್ ವೈ ಅವರ ಮನೆಯಿಂದ ಹಣ ತರಲಾಗಿದೆಯಾ ಎಂದು ಕೇಳುವ ಉಸ್ತುವಾರಿ ಸಚಿವರಿಗೆ ತಿರುಗೇಟು ನೀಡಿದ ಹಾಲಪ್ಪ ಯಾರು ಯಾವ ಮನೆಯಿಂದ ಹಣ ತರೋದಿಲ್ಲ. ತೆರಿಗೆ ಹಣವನ್ನೇ ತಂದು ಸೇತುವೆ ಮಾಡೋದು. 

ನೀವೂ ಮಾಡಿ, 57 ಸಾವಿರ ಕೋಟಿ ಹಣ ಜನರಿಗೆ ನೀಡುತ್ತಿದ್ದೇವೆ ಎಂದು ಹೇಳುವ ಕಾಂಗ್ರೆಸ್ ಇದು ಯಾರ ದುಡ್ಡು ಇದು ಜನರ ದುಡ್ಡೇ ಅಲ್ವಾ? ನಿಮ್ಮವರು ನಾವು ಗೃಹಲಕ್ಷ್ಮೀಯಲ್ಲಿ 2000 ಸಾವಿರ ಜನರಿಗೆ ಕೊಡುತ್ತೇವೆ ಎನ್ನುತ್ತಾರೆ. ಇದು ಯಾರ ದುಡ್ಡು ಸರ್ಕಾರದ್ದೇ ದುಡ್ಡು  ಅಲ್ವಾ ಎಂದರು. 

ಜಿಲ್ಲಾ ಉಸ್ತೂವಾರಿ ಸಚಿವರಿಗೆ ಇದೆಲ್ಲಾ ಗೊತ್ತೂ ಆಗೊಲ್ಲ. ಅವರ ಜೊತೆ ಎರಡು ಎಂಎಲ್ ಎಗಳಿದ್ದಾರೆ. ಯಾವುದೋ ಸಮಯದಲ್ಲಿ ಯಾವುದೋ ಮಾತನಾಡಿ ಹೋಗುತ್ತಾರೆ. ಈ ದೌರ್ಬಲ್ಯಗಳನ್ನ ನಾವು ಹೇಳಬೇಕಾಗುತ್ತದೆ. ರೈತರ ವಿರುದ್ಧದ ದೌರ್ಜನ್ಯಗಳು ನಡೆದಾಗ ನೀವು ಮಾಡಿದ್ದೀರಿ ಎಂದು ಹೇಳಬೇಕಾಗುತ್ತದೆ ಎಂದರು. 

It would have been better if the Education Minister had a Ministry of Entertainment - Halappa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close