ad

ಘಾಟಿ ಮಧ್ಯೆಯೇ ಡಿಸೇಲ್ ಖಾಲಿಯಾಗಿ ನಿಂತ KSRTC ಬಸ್-ಶಕ್ತಿ ಯೋಜನೆ ಎಫೆಕ್ಟ್?KSRTC bus running out of diesel in the middle of the ghat - effect of Shakti Yojana?

SUDDILIVE || SHIVAMOGGA

ಘಾಟಿ ಮಧ್ಯೆಯೇ ಡಿಸೇಲ್ ಖಾಲಿಯಾಗಿ ನಿಂತ KSRTC  ಬಸ್-ಶಕ್ತಿ ಯೋಜನೆ ಎಫೆಕ್ಟ್?KSRTC bus running out of diesel in the middle of the ghat - effect of Shakti Yojana?

Diesel, KSRTC


ಘಾಟಿಯಲ್ಲಿ ಡಿಸೇಲ್ ಖಾಲಿಯಾಗಿ  ಕೆ.ಎಸ್.ಆರ್.ಟಿ.ಸಿ ಬಸ್ ನಿಂತ ಪರಿಣಾಮ ಘಾಟಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಯಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್‌ ಘಾಟ್‌ನಲ್ಲಿ ಘಟನೆ ನಡೆದಿದೆ. 

ಹುಲಿಕಲ್ ಘಾಟ್ ನ ತಿರುವಿನಲ್ಲಿ ಡಿಸೇಲ್‌ ಖಾಲಿಯಾಗಿ ಘಾಟಿಯ ಮಧ್ಯೆಯೇ ಬಸ್ ನಿಂತ ಹಿನ್ನೆಲೆಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಶಿವಮೊಗ್ಗ–ಹೊಸನಗರ ಮಾರ್ಗವಾಗಿ ಉಡುಪಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಘಾಟಿಯ ಮುಖ್ಯ ತಿರುವಿನಲ್ಲಿ ಡಿಸೇಲ್‌ ಖಾಲಿಯಾಗಿ ಬಸ್ ನಿಂತಿದೆ. 

ರಸ್ತೆಯ ತಿರುವು ಮತ್ತು ಕಿರಿದಾದ್ದರಿಂದ, ಬಸ್‌ ನಿಂತ ಕಡೆ ಇತರೆ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿದೆ. ಕಾರುಗಳು ಮತ್ತು ಸಣ್ಣ ಗೂಡ್ಸ್‌ ವಾಹನಗಳು ಮಾತ್ರ ಬಸ್‌ನ ಪಕ್ಕದಿಂದ ಸಾಗಲು ಸಾಧ್ಯವಾಗಿದೆ. ದೊಡ್ಡ ವಾಹನಗಳಿಗೆ ತೀವ್ರ ತೊಂದರೆ ಉಂಟಾಗಿದೆ. 

ಸಮೀಪದ ಮಾಸ್ತಿಕಟ್ಟೆಯಿಂದ ತುರ್ತು ಡಿಸೇಲ್‌ ಪೂರೈಕೆ ಮಾಡಿ ಬಸ್ ನಿಂತಿದ್ದ ಸಮಯದಲ್ಲಿ ವಾಹನ ಸವಾರರು ಹಾಗೂ ಪ್ರಯಾಣಿಕರ ಪರದಾಡುವಂತಾಗಿದೆ. ಡಿಸೇಲ್ ಪೂರೈಕೆ ನಂತರ ಬಸ್ ಚಲಿಸಿದ್ದು   ಪ್ರಯಾಣಿಕರು ಹಾಗೂ ವಾಹನ ಸವಾರರು ನಿಟ್ಟುಸಿರುಬಿಟ್ಟಿದ್ದಾರೆ. ಇದು ಶಕ್ತಿಯೋಜನೆಯ ಪರಿಣಾಮ ಎಂಬುದು ಪ್ರಯಾಣಿಕರ ಹೇಳಿಕೆಯಾಗಿದೆ. 

ಈ ಹಿಂದೆ ಇದೇ ಘಾಟಿಯಲ್ಲಿ ಕೆಎಸ್ಆರ್ ಟಿ ಸಿ ಬಸ್ ಡೀಸೆಲ್ ಖಾಲಿ ಮಾಡಿಕೊಂಡು ನಿಂತಿದ್ದಾಗ ಈ ಭಾಗದ ಬಿಜೆಪಿಯ ನಗರದ ನಿತಿನ್ ಸಹಾಯಕ್ಕೆ ಧಾವಿಸಿದ್ದನ್ನ ಸ್ಮರಿಸಬಹುದಾಗಿದೆ. ಹಾಗಾಗಿ ಡಿಸೇಲ್ ಖಾಲಿಯಾಗಿ ನಿಂತಿರುವುದು ಇದು ಮೊದಲ ಬಾರಿಯಲ್ಲ

KSRTC bus running out of diesel in the middle of the ghat - effect of Shakti Yojana

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close