ad

ಶಿವನ ತುರುಬಿಗೆ ಪಂಜರದ ಗಿಳಿ ಹಾರಿತ್ತಲ್ಲೇ ಪರಾಕ್-Parrot is flying like a caged to Shiva's trumpet, Parak

SUDDILIVE || BHADRAVATHI

ಶಿವನ ತುರುಬಿಗೆ ಪಂಜರದ ಗಿಳಿ ಹಾರಿತ್ತಲ್ಲೇ ಪರಾಕ್-Parrot is flying like a caged to Shiva's trumpet, Parak

Parak, flying

ಶಿವನ ತುರುಬಿಗೆ ಪಂಜರದ ಗಿಳಿ ಹಾರಿತ್ತು ಎಚ್ಚರ ಮೈದೊಳಲಿನಲ್ಲಿ ಜರುಗಿದ ಹನುಮಂತ ದೇವರ ಕಾರ್ಣಿಕದ (ಕಾರಣಿಕಾ) ವಾಕ್ಯ. ದೇವರ ಕಾರ್ಣಿಕವನ್ನು ಆದಾರಿಸಿ ಗ್ರಾಮೀಣ ಭಾಗದ ರೈತಾಪಿ ವರ್ಗ ಇಡಿ ವರ್ಷದ ಮಳೆ ಬೆಳೆ ಸೇರಿದಂತೆ ಕೃಷಿ ಚಟುವಟಿಕೆಗಳು, ರಾಜಕೀಯ ವಿದ್ಯಾಮಾನಗಳು. ಪ್ರಕೃತಿ ವೈಪ್ಯರಿತ್ಯ ಸೇರಿದಂತೆ ರೈತಾಪಿ ಬದುಕಿನ ಭವಿಷ್ಯದ ಆಗು ಹೋಗುಗಳನ್ನು ಲೆಕ್ಕಚ್ಚಾರ ಹಾಕುತ್ತಾರೆ. 

ಭದ್ರಾವತಿ ತಾಲೂಕಿನ ಮೈದೊಳಲಿನಲ್ಲಿ ವಾಡಿಕೆಯಂತೆ ಪ್ರತಿ ವರ್ಷ ಶ್ರಾವಣ ಮಾಸದ ನಾಗರ ಪಂಚಮಿಯಂದು ಹನುಮಂತ ದೇವರ ಕಾರ್ಣಿಕೋತ್ಸವ ಜರುಗುತ್ತದೆ. ಮಂಗಳವಾರ ಸಂಜೆ ಗೋದೂಳಿ ಲಗ್ನದಲ್ಲಿ ಗಂಗೆ ಪೂಜೆ ನೆರವೇರಿಸಿದ ನಂತರ ಹನುಮಂತ ದೇವರನ್ನು ಮೈ ಮೇಲೆ ಆಹ್ವಾನೆ ಮಾಡಿಕೊಂಡ ಗಣಮಗ ಪಿಳ್ಳೆಮಟ್ಟಿ ಗುಡ್ಡದಲ್ಲಿ ಎತ್ತರ ಕಂಬವೇರಿ ಕಾರ್ಣಿಕ ನುಡಿಯುತ್ತಾರೆ. ಈ ಬಾರಿ ಶಿವನ ತುರುಬಿಗೆ ಪಂಜರದ ಗಿಳಿ ಹಾರಿತ್ತು ಎಚ್ಚರ ಎಂದು ವುಕ್ತಿಯನ್ನು ಹೇಳಿದರು.


ಕೊನೆಯಲ್ಲಿ ಎಚ್ಚರ ಎಂದಿರುವುದರಿಂದ ಈ ಬಾರಿ ರೈತಾಪಿಗಳಿಗೆ ಸ್ವಲ್ಪ ಹಿನ್ನಡೆಯಾಗುತ್ತದೆ ಎನ್ನಬಹುದು. ದೇಶದೆಲ್ಲೆಡೆ ಅತಿವೃಷ್ಠಿಯಾಗುತ್ತಿರುವುರಿಂದ ಕೃಷಿ ಚಟುವಟಿಕೆಗಳಿಗೆ ಅಡೆಚಣೆಗಳುಂಟಾಗಬಹುದು. ಶಿವನ ತುರುಬಿನಲ್ಲಿರುವ ಗಂಗೆಗೆ ಭೂ ಲೋಕದ ಗಿಳಿ ಹಾರುವುದು ಎಂದರೆ ಈ ಬಾರಿಯ ಮುಂಗಾರಿಗಿಂತ ಇಂಗಾರು ಮಳೆ ತುಸು ಜೋರಾಗಿರಲಿದೆ. ರಾಜ್ಯ ರಾಜಕೀಯ ವಿದ್ಯಾಮಾನದಲ್ಲಿ ತಲ್ಲಣ ಉಂಟಾಗುವುದು ನಿಶ್ಚಿತ ಕುರ್ಚಿಗಾಗಿ ಕಿತ್ತಾಟಗಳು ಜೋರಾಗಲಿವೆ ಎನ್ನಲಾಗುತ್ತಿದೆ.

Parrot is flying like a caged to Shiva's trumpet, Parak

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close