SUDDILIVE || SHIVAMOGGA
ಚೆಡ್ಡಿ ಗ್ಯಾಂಗ್ ತಿರುಗಿದ ರಸ್ತೆಯಲ್ಲಿಯೇ ಪೊಲೀಸರ ಬಿಗಿ ಬೀಟ್ಸ್-ನಿಟ್ಟುಸಿರು ಬಿಟ್ಟ ಸ್ಥಳೀಯರು-Locals were left stunned by the police beating, on the road where the Cheddi gang turned.
ವಡ್ಡಿನ ಕೊಪ್ಪ ಮತ್ತು ಪುಟ್ಟಪ್ಪ ಕ್ಯಾಂಪ್ ನಲ್ಲಿ ನೆನ್ನೆ ಬೆಳಗಿನ ಜಾವ ಒಂದು ಗಂಟೆಯ ಸಮಯದಲ್ಲಿ ಮಾಸ್ಕ ಧರಿಸಿಕೊಂಡು ಲಾಂಗು ಹಿಡಿದು ಹಾವಳಿಯಿಟ್ಟಿದ್ದ ಚಡ್ಡಿಗ್ಯಾಂಗ್ ಗೆ ಬೆಚ್ಚಿಬಿದ್ದಿದ ಜನ ಇಂದು ಕೊಂಚ ನೆಮ್ಮದಿಯಿಂದ ರಾತ್ರಿ ಕಳೆದಿದ್ದಾರೆ.
ನಿನ್ನೆ ಪುಟ್ಟಪ್ಪನ ಕ್ಯಾಂಪ್ ನಲ್ಲಿ ಐದಾರು ಜನ ಬನಿಯನ್ ನಲ್ಲಿಯೇ ಮುಸುಕು ಧರಿಸಿ ಒಂದೇ ರಸ್ತೆಯಲ್ಲಿ ಎರಡು ಮೂರು ಬಾರಿ ಲಾಂಗು ಹಿಡಿದು ಓಡಾಡಿದ್ದರು. ಈ ಪ್ರಕರಣ ಸಿಸಿ ಟಿವಿಯಲ್ಲಿ ಸೆರೆಯಾಗಿ ಸಾರ್ವಜನಿಕರು ನೆಮ್ಮದಿಯನ್ನೇ ಕಸಿದುಕೊಂಡಿತ್ತು.
ನಿನ್ನೆ ರಾತ್ರಿ ತುಂಗ ನಗರ ಪೊಲೀಸ್ ಠಾಣೆ ಪಿಐ ಗುರುರಾಜ್ ಕೆ.ಟಿ ನೇತೃತ್ವದಲ್ಲಿ ವಿಶೇಷ ದಳದವರೊಂದಿಗೆ ಬಿಗಿ ಬೀಟ್ ಹಾಕಿದ್ದಾರೆ. 8 ಜನ ಪೊಲೀಸರು ಮತ್ತು ವಿಶೇಷ ದಳದ ಕಾರ್ಯಪಡೆ ಸಿಬ್ಬಂದಿಗಳು, ಎರಡು ಬೊಲೆರೋ ಮತ್ತು 112 ಪೊಲೀಸರ ಗಸ್ತು ಈ ಭಾಗದ ಜನರಿಗೆ ನೆಮ್ಮದಿಯನ್ನ ತಂದುಕೊಟ್ಟಿದೆ. ಈ ಗಸ್ತು ಸದಾ ಇರಲಿ ಎಂಬುದು ಸಾರ್ವಜನಿಕರ ಮನವಿಯಾಗಿದೆ.
Locals were left stunned by the police beating