SUDDILIVE || SHIVAMOGGA
ಸೇತುವೆ ನಡುವೆಯೇ ಪ್ರಸನ್ನ ಕೆರೆಕೈಯನ್ನ ತಬ್ಬಿಕೊಂಡ ಶಾಸಕ ಚೆನ್ನಬಸಪ್ಪ-MLA Chennabasappa hugged Prasanna Kerekai in the middle of the bridge
ಸಿಗಂದೂರು ಸೇತುವೆ ಉದ್ಘಾಟನೆಗೆ ಕೆಲವೆ ನಿಮಿಷಗಳು ಬಾಕಿ ಉಳಿದಿದೆ. ನಿಮಿಷಗಳು ಬಾಕಿ ಉಳಿದಿರುವ ಹಿನ್ನಲೆಯಲ್ಲಿ ಸಚಿವರು ಆಗಮಿಸಬೇಕಿದೆ. ಆದರೆ ಸೇತುವೆ ಕಾಮಗಾರಿ ಇನ್ನೂ ಬಾಕಿ ಇರುವುದು ಕಂಡು ಬರುತ್ತಿದೆ.
ಗಣಪತಿ ಹೋಮ ದೇವಿ ಪಾರಾಯಣವನ್ನ ಸೇತುವೆಯಲ್ಲೇ ನೆರವೇರಿಸಲಾಗುತ್ತಿದೆ. ಸೇತುವೆಯ ನಿಜಾವಾದ ಹೋರಾಟಗಾರ ಪ್ರಸನ್ನ ಕುಮಾರ್ ಕೆರೆಕೈ ದಂಪತಿಗಳು ಹೋಮ ಮತ್ತು ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಶಾಸಕ ಚೆನ್ನಬಸಪ್ಪ ಮತ್ತು ಡಿಎಸ್ ಅರುಣ್ ಭಾಗಿಯಾಗಿದ್ದಾರೆ. ಆಗಮನದ ವೇಳೆ ಶಾಸಕ ಚೆನ್ನಬಸಪ್ಪ ಪ್ರಸನ್ನ ಕೆರೆಕೈಯರನ್ನ ತಬ್ಬಿಕೊಂಡು ಅಭಿನಂದಿಸಿದ್ದಾರೆ.
ಶಿಲಾನ್ಯಾಸ ಮತ್ತು ಉದ್ಘಾಟನೆಯ ಕಲ್ಲನ್ನ ಸೇರುವೆ ಮಧ್ಯಭಾಗಕ್ಕೆ ತಂದು ಉದ್ಘಾಟನೆಗೆ ಸಜ್ಜುಗೊಳಿಸಲಾಗಿದೆ. ಮಳೆಯ ಮಧ್ಯದಲ್ಲಿಯೇ ಶಿಲಾನ್ಯಾಸ ಕಾರ್ಯಕ್ರಮ ಜರುಗಲಿದೆ. ಬ್ರಾಹ್ಮಣ ಸಮುದಾಯದವರಿಂದ ಮಂತ್ರೋಪನಿತ್ ಪಾರಾಯಣ ಆದರೆ ಅತ್ತ ವೀರಗಾಸೆಯ ಕಲಾವಿದರಿಂದ ವೀರಗಾಸೆ ನಡೆಯುತ್ತಿದೆ.
ಒಟ್ಟಿನಲ್ಲಿ ಸೇತುವೆ ಉದ್ಘಾಟನೆ ಹಬ್ಬದ ವಾತಾವರಣ ತಂದಿದೆ. ಗಣ್ಯ ವ್ಯಕ್ತಿಗಳ ಆಗಮನಕ್ಕೆ ಸಚಿವ ಜಾರಕಿಹೊಳಿ, ಕೇಂದ್ರ ಸಚಿವ ಗಡ್ಕರಿ ಆಗಮನವನ್ನ ಜನ ಮಳೆಯಲ್ಲೇ ನಿರೀಕ್ಷಸುತ್ತಿದ್ದಾರೆ. ಪೊಲೀಸ್ ವ್ಯವಸ್ಥೆ ಹದಗೆಟ್ಟಿದೆ. ರಸ್ತೆಯ ಕೊನೆಯ ಭಾಗಗಳಲ್ಲಿ ರೈಲಿಂಗ್ ಫಿಕ್ಸ್ ಮಾಡಬೇಕಿದೆ. ಅದನ್ನ ಉದ್ಘಾಟನೆಯ ದಿನಗಳಂದು ನಡೆಸುತ್ತಿರುವುದು ಸೇತುವೆ ಉದ್ಘಾಟನೆಯನ್ನ ತರಾತುರಿಯಲ್ಲಿ ನೆರೆವೇರಿಸದಂತೆ ಭಾಸವಾಗುತ್ತಿದೆ. ಇವೆಲ್ಲದಕ್ಕೂ ಸಿಎಂ ಸಿದ್ದರಾಮಯ್ಯ ಪತ್ರ ಮತ್ತು ಇಂದು ಬೆಳಿಗ್ಗೆ ಅವರ ಟ್ವೀಟ್ ಸೇತುವೆ ಉದ್ಘಾಟನೆಯನ್ನ ತರಾತುರಿಯಲ್ಲಿ ನೆರವೇರಿಸುತ್ತಿರುವುದು ಸ್ಪಷ್ಟವಾಗುತ್ತಿದೆ.
MLA Chennabasappa hugged Prasanna Kerekai in the middle of the bridge