SUDDILIVE || SIGANDURU
ಉದ್ಘಾಟನೆ ಕಾರ್ಯಕ್ರಮಕ್ಕೆ ಸಚಿವ ಜಾರಕಿಹೊಳಿ ಗೈರು-ಹಿನ್ನೀರಿಗೆ ಬಾಗಿನ ಅರ್ಪಿಸಿ ಸೇತುವೆ ಉದ್ಘಾಟನೆ-Minister Jarkiholi absent from the inauguration program - bridge inauguration by giving way to backwaters
ಶರಾವತಿ ನದಿಗೆ ಬಾಗಿನ ಅರ್ಪಿಸುವ ಮೂಲಕ ಸಿಗಂದೂರು ಸೇತುವೆಯನ್ನ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಹಾಗೂ ಪ್ರಹ್ಲಾದ ಜೋಶಿ ಅವರು ನೂತನ ಸೇತುವೆಯನ್ನು ಉದ್ಘಾಟಿಸಿದರು.
ಸುಮಾರು 12 ಗಂಟೆ 20 ನಿಮಿಷಕ್ಕೆ ಸೇತುವೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದ ಕೇಂದ್ರ ಸಚಿವರು ಮೊದಲು ಉದ್ಘಾಟನಾ ಕಲ್ಲುಗಳನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು ನಂತರ ಗಣಪತಿ ಹೋಮ ಹಾಗೂ ದೇವಿ ಪೂಜೆ ಪೂಜೆಯಲ್ಲಿ ತೊಡಗಿ ಆರತಿ ಬೆಳಗಿದರು. ನಂತರ ಶರಾವತಿ ಹಿನ್ನೆರಿಗೆ ಬಾಗಿನ ಅರ್ಪಿಸುವ ಮೂಲಕ ಸೇತುವೆ ಉದ್ಘಾಟನೆಯನ್ನು ಅಧಿಕೃತಗೊಳಿಸಿದರು
ಮಾಜಿ ಸಿಎಂ ಬಿಎಸ್ ವೈ ಸಹ ಶರಾವತಿ ಹಿನ್ನೆರಿಗೆ ಬಾಗಿನ ಅರ್ಪಿಸಿ ಉದ್ಘಾಟನಾ ಕಾರ್ಯಕ್ರಮಕ್ಕೆ ಸಾಕ್ಷಿಯಾದರು ಈ ಸಂದರ್ಭದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜೇಂದ್ರ ಸಂಸದರು ಎಂಎಲ್ ಸಿ ಡಾ.ಧನಂಜಯ್ ಸರ್ಜಿ ಮೊದಲಾದವರು ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಗೈರ್ ಆಗಿರೋದು ವಿಶೇಷವಾಗಿತ್ತು ಜಿಲ್ಲೆಯಲ್ಲಿದ್ದರೂ ಸಚಿವರ ಗೈರು ಹಾಜರಿ ಅನೇಕ ಅನುಮಾನಗಳನ್ನು ಹುಟ್ಟಿಸಿವೆ ಸೇತುವೆ ಉದ್ಘಾಟನಾ ಕಾರ್ಯಕ್ರಮವು ಹಲವು ಗೊಂದಲ ರಾಜಕೀಯ ಕೆಸರೆರ ಚಾಟದಲ್ಲಿ ತೊಡಗಿದ್ದರಿಂದ ಸತೀಶ್ ಜಾರಕಿಹೊಳಿ ಅವರ ಗೈರು ಹಾಜರಿ ಎದ್ದು ಕಾಣುತ್ತಿತ್ತು , ಶಾಸಕ ಗೋಪಾಲ ಕೃಷ್ಣ ಬೇಳೂರು, ಸಚಿವ ಮಧು ಬಂಗಾರಪ್ಪನವರು ಸಹ ಗೈರು ಆಗಿದ್ದು ವಿಶೇಷವಾಗಿತ್ತು.
Minister Jarkiholi absent from the inauguration program