ad

ಪಾದಯಾತ್ರೆಯ ಎಚ್ಚರಿಕೆ ಕೊಟ್ಟರು MLC ಡಾ.ಸರ್ಜಿ-MLC Dr.Sarji warned

 SUDDILIVE || SHIVAMOGGA

ಪಾದಯಾತ್ರೆಯ ಎಚ್ಚರಿಕೆ ಕೊಟ್ಟರು MLC ಡಾ.ಸರ್ಜಿ-MLC Dr.Sarji warned 

MLC, Dr.sarji

ಇದೊಂದು ಶೋಚನೀಯ ಸಂಗತಿ ಎಂದು ಎಂಎಲ್ ಸಿ ಡಾ.ಧನಂಜಯ ಸರ್ಜಿ ತಿಳಿಸಿದರು. ಶಿವಮೊಗ್ಗದ ರಾಗಿಗುಡ್ಡದಲ್ಲಿರುವ ಬಂಗಾರಪ್ಪನವರ ಬಡಾವಣೆಯಲ್ಲಿ ಗಣಪತಿ ಮತ್ತು ನಾಗ ದೇವತೆಗಳ ವಿಗ್ರಹವನ್ನ ಹಾನಿ ಮಾಡಿದ ಸ್ಥಳಲ್ಕೆ ಭೇಟಿ ನಿಡಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. 

ದೇವರ ಮೂರ್ತಿಯನ್ನು ಕಾಲಿನಿಂದ ಒದಿಯುತ್ತಾನೆ ಎಂದರೆ ಹೇಗೆ? ಇಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಅನೈತಿಕ ಚಟುವಟಿಕೆ ಮಾಡ್ತಾರೆ.ಕೂಡಲೇ ಸಿಸಿ‌ಕ್ಯಾಮಾರಗಳನ್ನು‌ ಪರಿಶೀಲನೆ ಮಾಡಿ ಅರೋಪಿಗಳನ್ನು ಬಂಧನ ಮಾಡಬೇಕು ಎಂದು ಆಗ್ರಹಿಸಿದರು. 


ಅಕ್ರಮವಾಗಿ ನಿರ್ಮಾಣ ಮಾಡಿದ ಕಟ್ಟಡವನ್ನು ನೆಲಸಮ ಮಾಡಬೇಕು. ಇದಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡುತ್ತೇವೆ. ಈ ದೇವಸ್ಥಾನದ ಶುದ್ಧೀಕರಣ ಆಗಬೇಕು ದೇವಸ್ಥಾನ ನಿರ್ಮಾಣವಾಗಬೇಕು ಅ ಕೆಲಸ ನಾವು ಮಾಡುತ್ತೇವೆ. ಕೂಡಲೇ ಕಿಡಿಗೇಡಿಗಳನ್ನು ಬಂಧನ ಮಾಡಬೇಕು ಇಲ್ಲವಾದ್ರೆ ಶಿವಮೊಗ್ಗದ ಜನತೆ ಪಾದಯಾತ್ರೆ ಮೂಲಕ ಇದೇ ಸ್ಥಳದಲ್ಲಿ ಧರಣಿ ಕೂರುತ್ತೇವೆ ಎಂದು ಎಚ್ಚರಿಸಿದರು. 

ಕಿಡಿಗೇಡಿಗಳ ವಿರುದ್ದ ಅಕ್ರೋಶ ಹೊರ ಹಾಕಿದ ಎಂಎಲ್ಸ್ಸಿ ಧನಂಜಯ ಸರ್ಜಿ ಯಾವುದೇ ಕಾರಣಕ್ಕೂ ಈ ಭಾಗದ ಜನರಿಗೆ ಅನ್ಯಾಯವಾಗಲು ಬಿಡೋದಿಲ್ಲ. ತಪ್ಪಿತಸ್ಥರನ್ನ ತಕ್ಷಣವೇ ಬಂಧಿಸುವಂತೆ ಆಗ್ರಹಿಸಿದರು. 

ಘಟನಾಸ್ಥಳಕ್ಕೆ ಡಾ.ಸರ್ಜಿ ಅವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಮಾಜಿ ಕಾರ್ಪರೇಟರ್ ಆದ  ರಾಹುಲ್ ಬಿದರಿ, ಸುರೇಖಾ ಮುರುಳೀಧರ್, ಸುನೀತಾ ಅಣ್ಣಪ್ಪ ಶ್ರೀನಾಗ್ ಬೊಮ್ಮ್ ಕಟ್ಟೆ, ಮೊದಲಾದವರು ಸಾಥ್ ನೀಡಿದ್ದರು. 

MLC Dr.Sarji warned Padayathra

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close