ad

ನಿಗ್ರಹದಳ ರಚಿಸಿ ಏನು ಬಂತು? ಈಶ್ವರಪ್ಪ-What did the SAF team do? Eshwarappa

SUDDILIVE||SHIVAMOGGA

ನಿಗ್ರಹದಳ ಮಾಡಿ ಏನು ಬಂತು? ಈಶ್ವರಪ್ಪ-What did the SAF team do? Eshwarappa

Eshwarappa, saf


ನಾವು ಪೂಜೆ ಸಲ್ಲಿಸುತ್ತಿರುವ ದೇವರನ್ನು ಮುಸ್ಲಿಂ ಗೂಂಡ ಕಾಲಲ್ಲಿ ಒದ್ದಿದ್ದಾರೆ. ನಮ್ಮ ಧಾರ್ಮಿಕ ಭಾವನೆಗಳಿಗೆ ಅಪಮಾನ ಮಾಡಿದ್ದಾರೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಆಗ್ರಹಿಸಿದ್ದಾರೆ. 

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಬೆಂಗಳೂರಿನಲ್ಲಿ ಇದ್ದಾಗ ಮಾಹಿತಿ ಪಡೆದೆ. ಈಗ ಭೇಟಿ ನೀಡಿ ಪ್ರತ್ಯೇಕ್ಷದರ್ಶಿ ಬಳಿ ಮಾಹಿತಿ ಪಡೆದೆ. ಸಚಿವ ಸಂಪುಟದಲ್ಲಿ ಮೂರು ಕೇಂದ್ರಗಳನ್ನು ಕೋನು ನಿಗ್ರಹದಳಕ್ಕೆ ಕೊಟ್ಟಿದ್ದಾರೆ. ಈಗ ಈ ದಳ ಸುಮ್ಮನಿರುವುದು ಯಾಕೆ ಎಂದು ಪ್ರಶ್ನಿಸಿದರು. 

ಯಾಕೇ ಹಿಂದೂ ಮುಸ್ಲಿಂ ಗಲಾಟೆಯಾಗುತ್ತದೆ ಎನ್ನುವದಕ್ಕೆ ಇದೇ ಸಾಕ್ಷೀ, ಶಾಂತಿಯನ್ನು ಕದಡುವ ಕೆಲಸ ಮುಸ್ಲಿಂ ಗೂಂಡಗಳು ಮಾಡುತ್ತಿದ್ದಾರೆ. ನಾಲ್ಕು ತಿಂಗಳ ಹಿಂದೆ ಇಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ್ರು. ಅನಾಧಿಕೃತವಾಗಿ ಮನೆ ನಿರ್ಮಾಣ ಮಾಡುತ್ತಿರುವ ಗೂಂಡಾ ದೇವರ ಮೂರ್ತಿಯನ್ನು ಭಗ್ನಗೊಳಿಸಿ ಚರಂಡಿಗೆ ಹಾಕಿದ್ದಾರೆ ಎಂದು ದೂರಿದರು. 

ಸಿಎಂ ಸಿದ್ದರಾಮಯ್ಯ ನವರೇ ಇದೇನಾ ನೀವು ಕೋಮು ಸೌಹಾರ್ದ ರೂಪಿಸೋದು? ಸಂಜೆಯೋಳಗೆ ಮೂರು ಜನರನ್ನು ಬಂಧನ ಮಾಡುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ. ಇದುವರೆಗೆ ಕೇವಲ ಎಫ್ ಐ ಆರ್ ದಾಖಲು ಮಾಡಿದ್ದಾರೆ, ಕೂಡಲೇ ಅವರನ್ನು ಬಂಧನ ಮಾಡಬೇಕು ಎಂದರು. 

ಪರಿಶಿಷ್ಟರು ಕಷ್ಟಪಟ್ಟು ಕಟ್ಟಿದ ದೇವಸ್ಥಾನ ಇದು. ಇದಕ್ಕೆ ಇಷ್ಟು ಅಪಮಾನ ಮಾಡಿದರೆ ಯಾಕೇ ಕ್ರಮ ಇಲ್ಲ?ಪ್ರಶ್ನೆ ಮಾಡಿದರೆ ಮಹಿಳೆಯ ಮೇಲೆ ಏಕವಚನ ದಲ್ಲಿ ಆರೋಪಿ ಮಾತನಾಡಿದ್ದಾನೆ. ನಾವು ಶಾಂತಿಯಾಗಿ ಇದ್ದೇವೆ ಇಷ್ಟು ಆದಮೇಲೂ ಕ್ರಮ ಕೈಗೊಳ್ಳಲಿಲ್ಲ ಎಂದರೆ ಇನ್ನು ನಾವು ಶಾಂತಿಯುತವಾಗಿ ಕೂರಲು ಸಾಧ್ಯವಿಲ್ಲ. 

ವಿಶೇಷ ಕಾರ್ಯಪಡೆಗಳನ್ನು ಮೂರು ಜಿಲ್ಲೆಗಳಿಗೆ ನಿಯೋಜನೆ ಮಾಡಿದ್ದಾರೆ. ಅ ನಿಗ್ರಹ ದಳ ಮಾಡಿದ್ದು ಏನು ಪ್ರಯೋಜನಕ್ಕೆ ಬಂತು? ಸಿದ್ದರಾಮಯ್ಯನವರು ಮತ್ತು ಗೃಹಸಚಿವರು ಏನು ಮಾಡ್ತಾರೆ ಎಂಬುದನ್ನ ನಾನು ಸಹ ಗಮನಿಸುತ್ತಿರುವೆ ಎಂದು ಎಚ್ಚರಿಸಿದರು. 

What did the SAF team do? Eshwarappa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close