ad

ಘಟನೆಯಲ್ಲಿ ಇಬ್ಬರು ಅರೆಸ್ಟ್-ಮೊಹರಂಗೆ ರಾಗಿಗುಡ್ಡದಲ್ಲಿ ಸಿದ್ದತೆ-Two person arrested in the incident

 SUDDILIVE || SHIVAMOGGA

ಘಟನೆಯಲ್ಲಿ ಇಬ್ಬರು ಅರೆಸ್ಟ್-ಮೊಹರಂಗೆ ರಾಗಿಗುಡ್ಡದಲ್ಲಿ ಸಿದ್ದತೆ-Two person arrested in the incident, Moharam preparation is going on Ragigudda 

Mohram, arrested


ರಾಗಿಗುಡ್ಡದ ಬಂಗಾರಪ್ಪನವರ ಬಡಾವಣೆಯಲ್ಲಿ ನಿನ್ನೆ ಸಂಜೆಯ ವೇಳೆಗೆ ಗಣಪತಿ ಮತ್ತು ನಾಗನ ವಿಗ್ರಹ ಹಾನಿಗೊಳಿಸಿದ ಆರೋಪದ ಅಡಿಯಲ್ಲಿ ಕೊಂಚ ಗೊಂದಲ ಉಂಟಾಗಿತ್ತು.  ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದ ಎಸ್ಪಿ ಮಿಥುನ್ ಕುಮಾರ್  ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನಿನ್ನೆ ಸಂಜೆಯ ವೇಳೆಗೆ ಬಡಾವಣೆಯಲ್ಲಿ ಅನ್ಯಕೋಮಿನವರು ವಿಗ್ರಹಗಳನ್ನ ಹಾನಿಗೊಳಿಸಿದ್ದಾರೆ ಎಂಬ ವಿಷಯ ಕೊಂಚ ಗೊಂದಲಗಳಿಗೆ ಕಾರಣ ಉಂಟು ಮಾಡಿತ್ತು. ನಂತರ ಎಸ್ಪಿ ಅವರ ಭೇಟಿ ಮತ್ತು ಖಡಕ್ ಬಂದೋಬಸ್ತ್ ಹಿನ್ನಲೆಯಲ್ಲಿ ಪರಿಸ್ಥಿತಿ ನಿಯಂತ್ರಣ ಗೊಂಡಿದೆ. 

ಈ ಬಗ್ಗೆ ಮಾಹಿತಿ ನೀಡಿರುವ ಎಸ್ಪಿ ಮಿಥುನ್ ಕುಮಾರ್ ವಿಗ್ರಹ ಹಾನಿ ಘಟನೆಯ ನಂತರ ಮತ್ತೆ ಯಾವುದೇ ಬೇರೆ ಘಟನೆಗಳು ನಡೆದಿಲ್ಲ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಘಟನೆಯಲ್ಲಿ ಇಬ್ಬರ ಬಂಧನವಾಗಿದೆ ಎಂದು ವಾಟ್ಸಪ್ ಸಂದೇಶ ರವಾನಿಸಿದ್ದಾರೆ. 

ಮೊಹರಂ ಆಚರಣೆ


ಇಸ್ಲಾಮಿಕ್ ಕ್ಯಾಲೆಂಡರ್ ನ ಮೊದಲ ತಿಂಗಳಾದ ಮೊಹರಂನ ಆಚರಣೆಗೆ ರಾಗಿಗುಡ್ಡದ ಜನ ಸಜ್ಜಾಗುತ್ತಿದ್ದಾರೆ. ಹಬ್ಬದ ಹಿಂದಿನ ದಿನ ಬಂಗಾರಪ್ಪನವರ ಬಡಾವಣೆಯಲ್ಲಿ ಈ ಘಟನೆ ನಡೆದಿತ್ತು. ಆದರೆ ಎಸ್ಪಿ ಅವರ ಖಡಕ್ ನಿರ್ದೇಶನದಲ್ಲಿ ಪರಿಸ್ಥಿತಿ ನಿಯಂತ್ರಗೊಂಡಿದೆ. ರಾಗಿಗುಡ್ಡದ ಮುಖ್ಯರಸ್ತೆಯಲ್ಲಿ ಎರಡು ಕಡೆ ಮೊಹರಂಗೆ ಸಜ್ಜಾಗುತ್ತಿವೆ. ಪಂಚಗಳು ಹೊರಡಲಿದೆ. 

Two person arrested in the incident

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close