SUDDILIVE || SHIVAMOGGA
ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ವಿರುದ್ಧದ ಪದ ಬಳಕೆ ಸರಿಯಲ್ಲ-Mallikarjun Kharge's use of language against the Prime Minister is not right
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾವಿಗೆ SIT ತನಿಖೆ ರಚನೆಯಾಗಿದೆ. ಇದನ್ನ ಅಲ್ಲಿನ ಧರ್ಮದರ್ಶಿಗಳು ಸ್ವಾಗತಿಸಿದ್ದಾರೆ. ತಪ್ಪಾಗಿದ್ದರೆ ಆರೋಪಿಗಳಿಗೆ ಶಿಕ್ಷೆಗಳಾಗಲಿ, ಆದರೆ ತಪ್ಪಾಗಿಲ್ಲವೆಂದರೆ ಅಪಪ್ರಚಾರವನ್ನ ತಡೆಯಬೇಕು ಎಂದು ಮಾಜಿ ಡಿಸಿಎಂ ಈಶ್ವರಪ್ಪ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಸಮಾಜದ ಎಲ್ಲಾ ಜಾತಿಗೆ ಗುರುಗಳಿದ್ದಾರೆ. ಕೆಲ ಗುರುಗಳಲ್ಲೇ ಹೊಂದಾಣಿಕೆಯಿರಲಿಲ್ಲ. ಪಂಚಪೀಠದಲ್ಲಿ ಉಜ್ಜೇನಿ, ಕಾಶಿ ಮಠ, ಬಾಳೇಹೊನ್ನೂರು, ಶ್ರೀಶೈಲ, ಕೇದಾರ ಮಠ ಸೇರಿದಂತೆ ಐದು ಮಠಗಳ ಐದು ಗುಂಪಿತ್ತು. 15 ವರ್ಷದಿಂದ ಇವರ ಮಠಗಳು ಹೊಂದಾಣಿಕೆಯಿರಲಿಲ್ಲ. ಎಲ್ಲಾ ಸ್ವಾಮಿಗಳು ಒಂದಾಗುವ ಮಾತು ಕೇಳಿ ಬಂದಿದೆ. ದಾವಣಗೆರೆಯಲ್ಲಿ ಒಂದಾಗಿದ್ದಾರೆ.
ಕೆಲ ಸಾಧು ಸಂತರಲ್ಲಿ ಹೊಂದಾಣಿಕೆಯಿಲ್ಲ. ಹಿಂದೂ ಸಮಾಜಕ್ಕೆ ಮಾರ್ಗದರ್ಶನವಾಗಲಿ ಎಂದ ಈಶ್ವರಪ್ಪ, ಪ್ರಧಾನಿ ಮೋದಿಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಬೊಗಳುತ್ತಾರೆ ಎಂಬ ಪದ ಬಳಕೆ ಮಾಡಿದ್ದಾರೆ. ದೇಶದ ಕ್ಷಮೆ ಕೇಳಬೇಕು ಮೋದಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ಅವರ ಮಗ ಪ್ರಿಯಾಂಕ್ ಖರ್ಗೆ ಮೋದಿಗೆ ಬಾಯಿಬಂದಂತೆ ಬಳಕೆ ಮಾಡುತ್ತಾರೆ. ಆದರೆ ಅವರ ತಂದೆಯವರು ಈ ರೀತಿ ಪದ ಬಳಕೆ ಸರಿಯಲ್ಲ ಎಂದರು.
Mallikarjun Kharge's use of language against the Prime Minister is not right