ಸಾರಿಗೆ ನೌಕರರ ಪ್ರತಿಭಟನೆಗೆ ಬೆಂಬಲವಿದೆ, ಎರಡು ಕ್ಷೇತ್ರವನ್ನ ಮೋದಿ ಬಿಟ್ಟುಕೊಡಬಾರದು- Support to Transport workers' protest

 SUDDILIVE || SHIVAMOGGA

ಸಾರಿಗೆ ನೌಕರರ ಪ್ರತಿಭಟನೆಗೆ ಬೆಂಬಲವಿದೆ, ಎರಡು ಕ್ಷೇತ್ರವನ್ನ ಮೋದಿ ಬಿಟ್ಟುಕೊಡಬಾರದು-Support to Transport workers' protest, Modi should not give up two constituencies

Protest, kodihalli chandrashekar


ಅಮೇರಿಕಾದ ತೆರಿಗೆ ನೀತಿಯಲ್ಲಿ ಪ್ರಧಾನಿ ಮೋದಿ ಬೆಂಡಾಗದಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಆಗ್ರಹಿಸಿದೆ.

ಸುದ್ದಿಗೋಷ್ಠಿ ನಡೆಸಿದ ಸಂಘಟನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್,  ಅಮೇರಿಕಾದ ಅಧ್ಯಕ್ಚ ಡೊನಾಲ್ಡ್ ಟ್ರಂಫ್ ನಾನೊಬ್ಬ ವ್ಯಾಪಾರಿ ಲಾಭವೇ ನನ್ನ ಕಾರ್ಯಕ್ರಮ ಎಂದಿದ್ದಾನೆ. ಇದನ್ನ ಅನೇಕ ದೇಶಗಳ ಮೇಲೆ ಹೇರಿಕೆ ಮಾಡಿದ್ದಾರೆ. ಭಾರತದ ಸರಕುಗಳ ಮೇಲೆ ತೆರಿಗೆ ಹೇರಿದ್ದಾರೆ. ಇದರ ಜೊತೆ ಅವರ ಸ್ಟ್ರಾಟಜಿ ಏನೆಂದರೆ ವಿಯಟ್ನಾಮ್ ನ ದೇಶದ ಜೊತೆ ಒಪ್ಪಂದ ಮಾಡಿಕೊಂಡು ತೆರಿಗೆ ಹೆಚ್ಚಳವನ್ನ ಬರೆಸಿಕೊಂಡಿದ್ದಾರೆ. 

ಅದನ್ನ ಎಲ್ಲಾ ದೇಶಕ್ಕೆ ತೋರಿಸುತ್ತಿದ್ದಾರೆ. ಇದೊಂತರ ಅತ್ಯಾಚಾರವೆಂದ ಕೋಡಿಹಳ್ಳಿ ಮೋದಿ ಮತ್ತು ನಾನು ಬಹಳ ಸ್ನೇಹಿತರು ಎಂದು ವಿಯಟ್ನಾಮ್ ಜೊತೆ ಒಪ್ಪಂದ ಮಾಡಿಕೊಂಡಂತೆ ಟ್ರಂಪ್ ಮೋದಿಯ ತಲೆ ಸವರಿ ಒಪ್ಪಂದ ಮಾಡಿಕೊಂಡು ನಮ್ಮನ್ನ ಆತಂಕಕ್ಕೆ ತಳ್ಳಬೇಡಿ ಎಂದರು. 

ನಮ್ಮ ದೇಶಕ್ಕೂ ಅಮೇರಿಕಾಕ್ಕೆ ಜನಸಂಖ್ಯೆಯಲ್ಲಿ ಬಹಳವ್ಯತ್ಯಾಸವಿದೆ. ಹೈನುಗಾರಿಕೆಯಲ್ಲಿ ಅಮೇರಿಕಾ ಪ್ರವೇಶಿಸಿದರೆ ರೈತರು ಕಂಗಾಲಾಗುತ್ತಾರೆ. ಹೈನುಗಾರಿಕೆಯಲ್ಲಿ ಪ್ರವೇಶಿಸಲು ಅಮೇರಿಕಾ ಹೊಂಚುಹಾಕಿದೆ. 11 ವರ್ಷಕ್ಕೆ ಸಾಕಾಗುವಷ್ಟು ಸ್ಟೋರೇಜ್ ಇಟ್ಟುಕೊಂಡಿದ್ದಾರೆ. ಇದನ್ನ ಭಾರತ ತಡೆಯಬೇಕು. ಅಮೇರಿಕಾದ ಕುಲಾಂತರಿ ಉತ್ಪಾದನೆಯ ಆಹಾರಗಳನ್ನ ಭಾರತ ಬಳಸಲ್ಲ, ಅದನ್ನ ಭಾರತವನ್ನ ಮಾರುಕಟ್ಟೆ ಮಾಡಿಕೊಳ್ಳಲು ಟ್ರಂಪ್ ಹೊಂಚುಹಾಕಿದ್ದಾರೆ. ಇದರಿಂದ ದೇಶದ ಆರೋಗ್ಯದ ಮೇಲೆ ಕಟ್ಟ ಪರಿಣಾಮ ಉಂಟಾಗುತ್ತದೆ. 

ಹಾಗಾಗಿ ಪ್ರಧಾನಿ ಮೋದಿಯವರು ಹಾಲನ್ನ ಮತ್ತು ಕುಲಾಂತರಿ ಆಹಾರಗಳಲ್ಲಿ ಅಮೇರಿಕಾ ಮದ್ಯಪ್ರವೇಶದಂತೆ ತಡೆಯಬೇಕು  ಆಹಾರ ಮತ್ತು ಹೈನುಗಾರಿಕೆಯ ಕ್ಷೇತ್ರವನ್ನ ಅಮೇರಿಕಾ ಪ್ರವೇಶದಂತೆ ಕಾಪಾಡಬೇಕಿದೆ ಎಂದರು. 

ಆ.19 ರಂದು ರೈತ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಹೆಚ್ ಎಸ್ ರುದ್ರಪ್ಪನವರ ನೆನಪಿನ ಕಾರ್ಯಕ್ರಮ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಕೋಡಿ ಹಳ್ಳಿ ಚಂದ್ರಶೇಖರ್ ತಿಳಿಸಿದರು. 

ಸಾರಿಗೆ ನೌಕರರ ಪ್ರತಿಭಟನೆಗೆ ಬೆಂಬಲವಿದೆ

ಸಾರಿಗೆ ನೌಕರರ ವಿರುದ್ಧ ಎಸ್ಮಾ ಜಾರಿ ಸರಿಯಲ್ಲ. ಅವರು ನಾಗರೀಕರಿಗೆ ತೊಂದರೆ ಕೊಡಬಾರದು ಎಂದು ಉದ್ದೇಶವಿಲ್ಲ. ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದ ಪ್ರನಾಳಿಕೆಯಲ್ಲಿ ಪೇ ಕಮಿಷನ್ ಅಡಿ ಸಾರಿಗೆ ನೌಕರರನ್ನ ತರುವುದಾಗಿ ಘೋಷಿಸಿಕೊಂಡಿದ್ದರು ಅದನ್ನ ಸಿಎಂಚಸಿದ್ದರಾಮಯ್ಯ ಮರೆತಿರಬೇಕು. ಹಾಗಾಗಿ ಸಾರಿಗೆ ನೌಕರರ ಮುಷ್ಕರವನ್ನ‌ಬೆಂಬಲಿಸುತ್ತೇವೆ ಎಂದರು. 

Support to Transport workers' protest

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close