ad

ಎಷ್ಟೆ ಶಂಖ ಹೊಡೆದುಕೊಂಡರು ಆಗುಂಬೆ ಟನಲ್ ಬಗ್ಗೆ ತುಟಿ ಬಿಚ್ಚದ ಸಚಿವ-ಕೆರೆಕೈಗೆ ಭರ್ಜರಿ ಮರ್ಯಾದೆ-minister who kept his mouth shut about the Agumbe tunnel - a huge tribute to Kerekai

 SUDDILIVE || SAGARA

ಎಷ್ಟೆ ಶಂಖ ಹೊಡೆದುಕೊಂಡರು ಆಗುಂಬೆ ಟನಲ್ ಬಗ್ಗೆ ತುಟಿ ಬಿಚ್ಚದ ಸಚಿವ-ಕೆರೆಕೈಗೆ ಭರ್ಜರಿ ಮರ್ಯಾದೆ-minister who kept his mouth shut about the Agumbe tunnel - a huge tribute to Kerekai

ಏನೇ ಶಂಖ ಹೊಡೆದುಕೊಂಡರೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಆಗುಂಬೆ ಟನಲ್ ಬಗ್ಗೆ ಮಾತೇ ಆಡಲಿಲ್ಲ. ಸಂಸದರು ಮತ್ತು ಬಿಎಸ್ ವೈ ವೇದಿಕೆ ಮೇಲೆ ಆಗುಂಬೆ ಟನಲ್ ಬಗ್ಗೆ ಇಂಗ್ಲಿಷ್ ನಲ್ಲಿ ಹೇಳಿದರೂ ಸಚಿವರು ಮಂಗೂರು ಹೈವೆಗೆ 500 ಕೋಟಿಯ ಡಿಪಿಆರ್ ಬಗ್ಗೆ  ಮಾತನಾಡಿದ್ರು ಬಿಟ್ಟರೆ ರಾಜ್ಯದ ಉದ್ದಗಲದ ಹೈವೆಯ ಬಗ್ಗೆ ವಿಸ್ತಾರವಾಗಿ ತಿಳಿಸಿದರು. 

ಮಂಗಳೂರು ಶಿವಮೊಗ್ಗ ಹೈವೆಗೆ ಡಿಪಿಆರ್ ಪೂರ್ಣ ಆದ ಮೇಲೆ ಮಾತನಾಡುವುದಾಗಿ ಹೇಳಿ ಆಗುಂಬೆ ಘಾಟಿಯ ಬಗ್ಗೆ ಹೆಚ್ಚು ಮಾತನಾಡದೆ ಕೇಂದ್ರ ಸಚಿವರು ರಾಜ್ಯದಲ್ಲಿ ಕೇಂದ್ರದ ಐದು ಲಕ್ಷ ಕೋಟಿ ಹಣದ ಯೋಜನೆ ಕಾಮಗಾರಿ ನಡೆಯುತ್ತಿರುವ ಬಗ್ಗೆ  ಮಾತನಾಡಿದರು. 

ಸಾಗರದ ನೆಹರೂ ಮೈದಾನದಲ್ಲಿ ವಿವಿಧ 2000 ಸಾವಿರ ಕೋಟಿ ಕಾಮಗಾರಿಗೆ ಭೂಮಿಪೂಜೆ ಮಾಡಿ ಮಾತನಾಡಿದರು ನೂತನ ಸಿಗಂದೂರು ಸೇತುವೆ ನಿರ್ಮಾಣಗೊಂಡಿದ್ದು ಅದಕ್ಕೆ ಸಿಗಂದೂರು ಸೇತುವೆ ಎಂದು ಹೆಸರಿಡಲು ಬೇಡಿಕೆಗಳು ಬಂದಿವೆ. ಅದೇ ಹೆಸರು ಇಡಲು ನಾನು ಸಹ ಸಮ್ಮತಿಸುವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಆಶ್ವಾಸನೆ ನೀಡಿದರು

ಕರ್ನಾಟಕಕ್ಕೆ ಐದು ಲಕ್ಷ ಕೋಟಿಯ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಬೆಳಗಾವಿ ರಾಯಚೂರು ಹೈವೆ, ದೆಹಲಿಯಿಂದ ಕರ್ನಾಟಕಕ್ಕೆ ಬರಲು ಮಹಾರಾಷ್ಟ್ರಬೇಕಾಗಿದೆ. ಅದನ್ನ ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ಬರಲು ಕರ್ನಾಟಕ ರಾಜ್ಯದಲ್ಲಿ ಹೈವೆ ಕಾಮಗಾರಿ ಭರದಿಂದ ಸಾಗುತ್ತಿದೆ ಎಂದರು. 

6 ರಾಜ್ಯಗಳಲ್ಲಿ ಈ ರಸ್ತೆ ಹರಿದಾಡುತ್ತದೆ. ರಾಯಚೂರು, ಹಂಪಿಗೆ ಮತ್ತು ಬಳ್ಳಾರಿಗೆ ಸಂಚರಿಸಲು ಅನುಕೂಲವಾಗಲಿದೆ. ದೆಹಲಿಯಿಂದ ಸಂಚರಿಸಿದರೆ ಬೆಂಗಳೂರಿಗೆ 20 ನಿಮಿಷ ಸಂಚಾರವನ್ನ ತಗ್ಗಿಸುತ್ತದೆ. ತುಮಕೂರಿನಿಂದ ಶಿವಮೊಗ್ಗದ ಹೈವೆ 2026 ರಲ್ಲಿ ಮುಗಿಯಲಿದೆ ಎಂದರು. 

ಬೆಳಗಾವಿಯಲ್ಲಿ ₹4 ಸಾವಿರ ಕೋಟಿಯಲ್ಲಿ ರಿಂಗ್ ರಸ್ತೆ ನಿರ್ಮಿಸಲಾಗುತ್ತದೆ. ಹುಬ್ಬಳಿಯಿಂದ ಧಾರವಾಡ 2026 ಫೆಬ್ರವರಿಗೆ ₹12000  ಕೋಟಿ ರಸ್ತೆ ಪೂರ್ಣಗೊಳ್ಳಲಿದೆ ಎಂದರು. ಚಿತ್ರದುರ್ಗದಿಂದ ಶಿವಮೊಗ್ಗದ ರಸ್ತೆ 2026 ಫೆಬ್ರವರಿಗೆ ಲೋಕಾಪರ್ಣೆಯಾಗಲಿದೆ ಎಂದ ಅವರು ಕೊಡಚಾದ್ರಿ ರೋಪ್ ವೇಗೆ ಅನುಮತಿ ನೀಡಿರುವುದಾಗಿ ಹೇಳಿದರು. 

ಸೇತುವೆ ನಿರ್ಮಾಣ ತಡವಾಗಿದೆ ಅದಕ್ಕೆ ನಾವು ಕಾರಣರಲ್ಲ. ದೇವಿ ಆಶೀರ್ವಾದದಿಂದ ಈ ಸೇತುವೆಯನ್ನ ಲೋಕಾರ್ಪಣೆ ಮಾಡಿರುವುದಾಗಿ ಹೇಳಿದರು. 

ಬಿಎಸ್ ವೈ ಮಾತು

ಮಾಜಿ ಸಿಎಂ ಬಿಎಸ್ ಯಡಿಯೂರಪ್ ಮಾತನಾಡಿ, ನಾನು ಸಂಸತ್ ಸದಸ್ಯನಾದಾಗ ಅನುಮೋದನೆಗೊಂಡ ಸೇತುವೆ ಉದ್ಘಾಟನೆಗೊಂಡಿದೆ. ಸೇತುವೆ ದೇಶಕ್ಕೆ ಐತಿಹಾಸಿಕ ಮೈಲುಗಲ್ಲಾಗಿದೆ. ಅಭಿವೃದ್ಧಿಯ ಪರಿಕಲ್ಪನೆಯ ಸಾಕಾರವಾಗಿದೆ. ಗಡ್ಕರಿ ಸಚಿವರಾದ ನಂತರ ದೇಶದಲ್ಲಿ ಅಭಿವೃದ್ಧಿ ಕಾರ್ಯ ವೇಗವಾಗಿ ನಡೆಯುತ್ತಿದೆ. ಆಗುಂಬೆ ಟನಲ್ ಸಾಕಾರಗೊಳ್ಳಬೇಕೆಂದು ಆಗ್ರಹಿಸಿದರು.

ಜೋಶಿ ಮಾತು

ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ ಮ್ಯಾನ್ ಆಫ್ ನ್ಯಾಷನಲ್ ಹೈವೆ ಎಂದೇ ಖ್ಯಾತಿಯಾಗಿವರುವ ಸಚಿವ ನಿತಿನ್ ಗಡ್ಕರಿ ಅವರಿ ರೋಡಕರಿ ಎಂದು ಖ್ಯಾತಿ ಪಡೆದಿದ್ದಾರೆ. ಯಾರು ಶಂಕುಸ್ಥಾಪನೆ ಮಾಡುತ್ತಾರೆ. ಅವರೇ ಉದ್ಘಾಟಿಸುವ ಪರಂಪರೆಗೆ ಸಚಿವ ಗಡ್ಕರಿ ಸಾಕ್ಷಿಯಾಗಿದ್ದಾರೆ ಎಂದರು. 

ಪರಮೇಶ್ವರ್ ಹೋರಾಟ ಆರಂಭಿಸಿ ಪ್ರಸನ್ನ ಅವರಿಂದ ಮುಂದುವರೆದ ಸೇತುವೆ ಹೋರಾಟವನ್ನ ಪ್ರಸ್ತಾಪಿಸಿದ ಜೋಶಿ ಗಡ್ಕರಿಯವರಿಂದ ಸಹಾಯವಾಗಿದೆ. ಭಾನುಪ್ರಕಾಶ್ ಅವರನ್ನೂ ನೆನಪಿಸಿಕೊಳ್ಳಲು ಮರೆಯಲಿಲ್ಲ. ಭಾರತ್ ಮಾಲ, ಎಕ್ಸ್ ಪ್ರೆಸ್ ಹೈವೆಯನ್ನ ರಾಜ್ಯಕ್ಕೆ ನೀಡುವ ಮೂಲಕ ಸಂಪರ್ಕ ಸಾದನೆಯಲ್ಲಿ ಕ್ರಾಂತಿ ಮಾಡಿದ್ದಾರೆ ಎಂದರು. 

ಕಾಗೋಡು ಮಾತು

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಸಾಗರದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆಯಲಾಗಿದೆ. ಸೇತುವೆಯಬಗ್ಗೆ ಕುತೂಹಲವಿತ್ತು. ಏನಾಗುತ್ತೆ ಎಂಬ ದಿಗಿಲಿತ್ತು. ಸಚಿವ ಗಡ್ಕರಿ ಅವರು ಬಂದು ನೆರವೇರಿಸಿಕೊಟ್ಟಿದ್ದಾರೆ. ಶಾಸ್ವತವಾದ ಪರಿಹಾರವನ್ನ ಅವರು ಕರೂರು ಬಾರಂಗಿ ಜನಕ್ಕೆ ಮಾಡಿಕೊಟ್ಟಿದ್ದಾರೆ. ನಮ್ಮ ಸಿಗಂದೂರು ದೇವಸ್ಥಾನಕ್ಕೆ ಬಂದು ಪೂಜೆನೂ ಮಾಡಿದ್ದಾರೆ. 

ಸೇತುವೆಗೆ ಸಚಿವರ ಹೆಸರು ಹಾಕಬೇಕು. ಇದೊಂದು ತಪ್ಪಾಗಿದೆ ಎಂಬ ಭಾವನೆ ಮೂಡುತ್ತಿದೆ ಎಂದರು. ಈ ವೇಳೆ ಕೇಂದ್ರ ಸಚಿವ ಗಡ್ಕರಿಯವರಿಗೆ ಬೆಳ್ಳಿ ಕಿರೀಟ ಮತ್ತು ಗದೆ ನೀಡಿ ಸನ್ಮಾನಿಸಿದರು. ಕಾಗೋಡು ತಿಮ್ಮಪ್ಪ, ಬಿಎಸ್ ವೈ ಅವರಿಗೂ ಗೌರವ ಅರ್ಪಿಸಿದರು. 

ಆಗುಂಬೆ ಟನಲ್ ಮತ್ತು ಬಾಳೆಹೊನ್ನೂರು ಟು ಹೊಸಪೇಟೆಗೆ ನೂತನ ಹೈವೆ ಘೋಷಿಸುವಂತೆ ಮತ್ತು ಸಿಗಂದೂರು ಸೇತುವೆಯನ್ನ ಸಿಗಂದೂರು ಚೌಡೇಶ್ವರಿ ಸೇತುವೆ ಎಂದು ಘೋಷಿಸಲು ಶಿವಮೊಗ್ಗದ ಸಂಸದರು ಆಗ್ರಹಿಸಿದರು.

minister who kept his mouth shut about the Agumbe tunnel - a huge tribute to Kerekai

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close