ad

ಉಷಾ ನರ್ಸಿಂಗ್ ಹೋಮ್ ನಲ್ಲಿ ಸಿಗ್ನಲ್ ಅಳವಡಿಕೆ-Signal installation at Usha Nursing Home

SUDDILIVE || SHIVAMOGGA

ಉಷಾ ನರ್ಸಿಂಗ್ ಹೋಮ್ ನಲ್ಲಿ ಸಿಗ್ನಲ್ ಅಳವಡಿಕೆ-Signal installation at Usha Nursing Home

Signal, usha


ಶಿವಮೊಗ್ಗ ನಗರದ ಉಷಾ ವೃತ್ತದಲ್ಲಿ, ಹೆಚ್ಚಿನ ವಾಹನಗಳು ಸಂಚರಿಸುತ್ತಿದ್ದು ಹಾಗೂ ಸದರಿ ಸ್ಥಳದಲ್ಲಿ  ಟ್ರಾಫಿಕ್ ಸಿಗ್ನಲ್ ಅಳವಡಿಸದೇ ಇದ್ದ ಕಾರಣ ವಾಹನ ದಟ್ಟಣೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ತಾತ್ಕಾಲಿಕ ಟ್ರಾಫಿಕ್ ಸಿಗ್ನಲ್  ಲೈಟ್ ಅನ್ನು ಅಳವಡಿಸಲಾಗಿದೆ.  

ಇಂದು ಎಸ್ಪಿ  ಮಿಥುನ್ ಕುಮಾರ್ ಜಿ. ಕೆ.  ಟ್ರಾಫಿಕ್ ಸಿಗ್ನಲ್ ಗೆ ಚಾಲನೆ ನೀಡಿದರು. ನಂತರ 8 ಅಂಶಗಳನ್ನ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. 

1) ಸಂಚಾರ ದಟ್ಟಣೆಯ ನಿಯಂತ್ರಣದ ಸಂಬಂಧ ಉಷಾ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಅನ್ನು ಅಳವಡಿಸಲಾಗಿರುತ್ತದೆ. 

2) ಈ ಸ್ಥಳದಲ್ಲಿ ಸಿಗ್ನಲ್ ಲೈಟ್ ನ ಅಳವಡಿಕೆಯ ಅವಶ್ಯಕತೆ ತುಂಬಾ ಇದ್ದು, ಸಾರ್ವಜನಿಕರು, ಜನಪ್ರತಿನಿಧಿಗಳು, ಮುಖಂಡರು ಗಳ ಸಹಾ ಸಿಗ್ನಲ್ ಲೈಟ್ ಅಳವಡಿಕೆ ಮಾಡುವಂತೆ ಕೋರಿಕೆ ಸಲ್ಲಿಸಿದ್ದು, ಈ ಸಂಬಂಧ ಟ್ರಾಫಿಕ್  ಲೈಟ್ ಅನ್ನು ಅಳವಡಿಕೆ ಮಾಡಲಾಗಿರುತ್ತದೆ. 

3) ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿದಾಗ ಒಳ್ಳೆಯ ಕೆಲಸವಾಗುತ್ತದೆ ಎಂಬುದಕ್ಕೆ, ಇದೇ ಒಂದು ಉತ್ತಮ ಉದಾಹರಣೆಯಾಗಿರುತ್ತದೆ. 

4) ಸಾರ್ವಜನಿಕರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲನೆ ಮಾಡಿ,  ಪೊಲೀಸ್ ಇಲಾಖೆಯ ಅಧಿಕಾರಿಗಳು ಇದ್ದಾರೆ, ಸಂಚಾರಿ ಟ್ರಾಫಿಕ್ ಸಿಗ್ನಲ್ ಇದೆ ಎಂದು ಮಾತ್ರ  ನಿಮ್ಮ ಸುರಕ್ಷತೆಯ ದೃಷ್ಠಿಯಿಂದ ಸಂಚಾರ ನಿಯಮಗಳನ್ನು ಪಾಲನೆ ಮಾಡಿರಿ. 

5) ನಿಮ್ಮ ಕುಟುಂಬ, ಸ್ನೇಹಿತರು, ಅವಲಂಬಿತರು ಮತ್ತು ನಿಮ್ಮ ಜೀವದ ಸುರಕ್ಷತೆಯ ಹಿನ್ನೆಲೆಯಲ್ಲಿ ಸಂಚಾರ ನಿಯಮ ಪಾಲನೆ ಅವಶ್ಯಕವಿರುತ್ತದೆ. 

6)ಕೇವಲ ಸೀಟ್ ಬೆಲ್ಟ್, ಹೆಲ್ಮೇಟ್ ಧರಿಸುವುದರಿಂದಲೇ ಎಷ್ಟೋ ಬಾರಿ ಮಾರಣಾಂತಿಕ ಅಪಘಾತ ತಡೆದು, ಪ್ರಾಣವನ್ನು ರಕ್ಷಿಸಲು ಸಾಧ್ಯವಿರುತ್ತದೆ. 

7) ಅಪಘಾತದಲ್ಲಿ ಹೆಚ್ಚಿನ ಸಂದರ್ಭ ಯುವಕರೇ ಪ್ರಾಣ ಕಳೆದುಕೊಳ್ಳುತ್ತಾರೆ, ಸಾಮಾನ್ಯ ಸಂಚಾರ ನಿಯಮಗಳನ್ನು ಪಾಲನೆ ಮಾಡದೇ ಇದ್ದ ಸಂದರ್ಭದಲ್ಲಿ ಈ ರೀತಿಯ ಸಣ್ಣ ಪುಟ್ಟ ಅಪಘಾತಗಳು ಸಹಾ ಮಾರಣಾಂತಿಕ ಅಪಘಾತಗಳಾಗಿ ಪರಿಣಮಿಸುತ್ತವೆ.

8) ಅಪಘಾತದಲ್ಲಿ ಕೇವಲ ಗಾಯಾಳುವಲ್ಲದೇ ಆತನ ಅವಲಂಬಿತರೂ ಸಹಾ ತೊಂದರೆಗೆ ಒಳಗಾಗುತ್ತಾರೆ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲನೆ ಮಾಡಿ. 

ದೇವರಾಜ್, ಸಿಪಿಐ ಶಿವಮೊಗ್ಗ ಸಂಚಾರ ವೃತ್ತ, ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ನವೀನ್ ಎಂ, ಹಾಗೂ ಮುಖಂಡರುಗಳಾದ ಯೋಗೇಶ್, ಸಂತೋಷ್ ಬೆಳ್ಳಿಕೆರೆ, ಉದಯ್ ದಾಸ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Signal installation at Usha Nursing Home


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close