ad

ಸಾಗರದಲ್ಲಿ ನೈತಿಕ ಪೊಲೀಸ್ ಗಿರಿ, ಮೂವರ ಬಂಧನ, ಡಿವೈಎಸ್ಪಿ ಖಡಕ್ ಎಚ್ಚರಿಕೆ- Moral police in Sagar, three arrested, DySP Khadak warns

 SUDDILIVE || SAGARA

ಸಾಗರದಲ್ಲಿ ನೈತಿಕ ಪೊಲೀಸ್ ಗಿರಿ, ಮೂವರ ಬಂಧನ, ಡಿವೈಎಸ್ಪಿ ಖಡಕ್ ಎಚ್ಚರಿಕೆ-Moral police in Sagar, three arrested, DySP Khadak warns

Moral police, sagar


ಸಾಗರದಲ್ಲಿ ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿ ಬೈಕಿನಲ್ಲಿ ಹೋಗುವಾಗ ಅಡ್ಡಹಾಕಿ ನೈತಿಕ ಪೊಲೀಸ್ ಗಿರಿ ಮೆರೆದ ಘಟನೆ ವರದಿಯಾಗಿದ್ದು ಈ ಘಟನೆಯಲ್ಲಿ ಮೂವರನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ

ಸೊರಬದ ಕಾನು ಕೇರಿ ನಿವಾಸಿ 19 ವರ್ಷದ ಯುವತಿ ಸಾಗರದ ಶಾಹಿ ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋಗಲು ಪರಿಚಯವಿರುವ ಸ್ಪಂದನ್ ಎಂಬ ಯುವಕನ ಜೊತೆ ಜುಲೈ 7ರಂದು ಮಧ್ಯಾಹ್ನ 12 ಗಂಟೆಯ ವೇಳೆಗೆ ಸಾಗರದ ಯಡವರಸೆ ರೈಲ್ವೆ ಗೇಟ್ ಬಳಿ ಇಬ್ಬರು ಬೈಕ್ ನಲ್ಲಿ ನಾಲ್ಕು ಜನರು ಹಾಗೂ ಓಮಿನಿಯಲ್ಲಿ ಇಬ್ಬರೂ ಬಂದು ಅಡ್ಡಹಾಕಿದ್ದಾರೆ.  

 ಇಬ್ಬರನ್ನು ನಿಲ್ಲಿಸಿದ್ದಾರೆ.  ಅಡ್ಡ ಹಾಕಿ ತಡೆದ ಕುರಿತು ಯುವಕ ಮತ್ತು ಯುವತಿ ಇಬ್ಬರೂ ಅಪರಿಚಿತರನ್ನು ಪ್ರಶ್ನಿಸಿದ್ದಾರೆ ನಾವುಗಳು ಯಾರಾದರೇನು ಹಿಂದು ಹುಡುಗನ ಜೊತೆ ನಿನ್ನದೇನು ಕೆಲಸ ಅವನ ಜೊತೆ ಬೈಕಿನಲ್ಲಿ ಹೋಗುತ್ತಿದ್ದೀಯಾ ಎಂದು ಅವ್ಯಕ್ತ ಶಬ್ದಗಳಿಂದ ನಿಂದಿಸಿ ಕೈ ಬೆರಳುಗಳನ್ನು ಹಿಡಿದು ತಿರುವಿ ಹಲ್ಲೆ ನಡೆಸಿರುವುದಾಗಿ ಯುವತಿ ಸಾಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೈಕಿನಲ್ಲಿ ಕೂರಿಸಿಕೊಂಡು ಇಬ್ಬರನ್ನು ಎಲಗಡಲೆ ದರ್ಗಾದ ಒಳಗೆ ಕರೆದುಕೊಂಡು ಹೋಗಿ ಸ್ಪಂದನ ನಡೆಸಲಾಗಿದೆ ನಂತರ ಮತ್ತೆ ಸಾಗರದ ರಾಮನಗರದ ಮಸೀದಿಗೆ ಕರೆದುಕೊಂಡು ಹೋಗಿ ಅಲ್ಲಿಯೂ ಕೂಡ ಯುವಕ ಯುವತಿಯರಿಗೆ ನಿಂದಿಸಿ ಯುವತಿಯ ತಾಯಿ ಫೋನ್ ನಂಬರ್ ಅನ್ನು ಕೊಡು ಎಂದು ಬೆದರಿಕೆ ಹಾಕಲಾಗಿದೆ ನಂತರ ಸಾಗರದ ಪೊಲೀಸರು ಸ್ಥಳಕ್ಕೆ ಧಾವಿಸಿದ ನಂತರ ಇಬ್ಬರನ್ನು ರಕ್ಷಣೆ ಮಾಡಲಾಗಿದೆ.

ಅಪಹರಣ ಹಲ್ಲೆ ಅವ್ಯಕ್ತಿ ಶಬ್ದಗಳಿಂದ ನಿಂದಿಸಿದ ಪ್ರಕರಣವನ್ನು ಅಪರಿಚಿತರ ವಿರುದ್ಧ ದೂರು ದಾಖಲಿಸಲಾಗಿದೆ. ಎಸ್ ಎನ್ ನಗರ ನಿವಾಸಿ ಶಬ್ಬೀರ್ 65 ವರ್ಷ ಅರ್ಬಾಸ್(24) ಹಾಗೂ ಆಫ್ರಾಜ್(25) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ ಹಾಗೂ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಡಿಎಸ್ಪಿ ಎಚ್ಚರಿಕೆ 

ಪ್ರಕರಣದಲ್ಲಿ ಇನ್ನೂ ನಾಲ್ಕೈದು ಜನ ಬಂಧನಕ್ಕೊಳಗಾಗಬೇಕಿದೆ.ಯಾವುದೇ ಧರ್ಮ ಯಾವುದೇ ಪಂಗಡಗಳು ಇದ್ದರೂ ಹಲ್ಲೇ ನೈತಿಕ ಪೊಲೀಸ್ ಗಿರಿ ಮೆರೆದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಾಗರದ ಡಿ ವೈ ಎಸ್ ಪಿ ಎಚ್ಚರಿಕೆ ನೀಡಿದ್ದಾರೆ

Moral police in Sagar, three arrested, DySP Khadak warns

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close