ad

ವಾಣಿಜ್ಯ ತೆರಿಗೆ ಕ್ವಾಟ್ರಸ್ ನಲ್ಲಿದ್ದ ಮರ ಧರೆಗೆ, ಮೆಗ್ಗಾನ್ ಬಳಿಯಿದ್ದ ಮರಗಳ ಬಗ್ಗೆ ಕಾಳಜಿ ತೋರಿದ್ದ ಅರಣ್ಯ ಇಲಾಖೆಗೆ ಬೇರೆಡೆ ಯಾಕಿಲ್ಲ?Why didn't the Forest Department, which was concerned about the trees near Meggan, go elsewhere?

 SUDDILIVE || SHIVAMOGGA

ವಾಣಿಜ್ಯ ತೆರಿಗೆ ಕ್ವಾಟ್ರಸ್ ನಲ್ಲಿದ್ದ ಮರ ಧರೆಗೆ, ಮೆಗ್ಗಾನ್ ಬಳಿಯಿದ್ದ ಮರಗಳ ಬಗ್ಗೆ ಕಾಳಜಿ ತೋರಿದ್ದ ಅರಣ್ಯ ಇಲಾಖೆಗೆ ಬೇರೆಡೆ ಯಾಕಿಲ್ಲ?Why didn't the Forest Department, which was concerned about the trees near Meggan, go elsewhere?

Tree, Meggan


ಬೃಹದಾಕಾರದ ಮರ ಒಂದು ಗೋಪಾಲಗೌಡ ಬಡಾವಣೆಯಲ್ಲಿ ಗಾಳಿಗೆ ಧರೆಗುರುಳಿದ್ದು,  ಟ್ರಾನ್ಸ್ ಫಾರ್ಮರ್ ಮೇಲೆ ಮರ ಬಿದ್ದ ಪರಿಣಾಮ ಬಡಾವಣೆಯ ಜನ ವಿದ್ಯುತ್ ಸಂಪರ್ಕವನ್ನ ಕಡಿದುಗೊಂಡಿದ್ದಾರೆ. ಈ ಟ್ರಾನ್ಸ್ ಫಾರ್ಮರ್ ಯಾವಾಗ ಸರಿಹೋಗಲಿದೆ ಎಂಬ ಗೊಂದಲಕ್ಕೆ ಬಿದ್ದ ಸ್ಥಳೀಯರು ಮೆಸ್ಕಾಂ ವಿರುದ್ಧ ಹಿಡಿಶಾಪ ಹಾಕಿದ್ದಾರೆ. 

ಗೋಪಾಳಗೌಡ ಬಿ ಬ್ಲಾಕ್ 1 ಮುಖ್ಯರಸ್ತೆಯಲ್ಲಿರುವ ವಾಣಿಜ್ಯ ತೆರಿಗೆ ಕ್ವಾಟ್ರಸ್ ನಲ್ಲಿರುವ ಮರವೊಂದು ಇಂದು ಬೀಸಿದ ಗಾಳಿಗೆ ಧರೆಗೆ ಉರಳಿದೆ. ಇದು ಟ್ರಾನ್ಸ್ ಫಾರ್ಮರ್ ಮೇಲೆ ಬಿದ್ದ ಪರಿಣಾಮ ಸ್ಥಳೀಯರೆಲ್ಲ ಮೆಸ್ಕಾಂನತ್ತ ಮುಖ ಮಾಡಿದ್ದಾರೆ. ಮೆಸ್ಕಾಂ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದರೂ ಈ ಭಾಗದ ಜನರಿಗೆ ಇವತ್ತೇ ವಿದ್ಯುತ್ ಸಂಪರ್ಕ ಸಿಗುವುದೇ ಅನುಮಾನವೆಂಬಂತಾಗಿದೆ. 

ಇನ್ನು ಅರಣ್ಯ ಇಲಾಖೆಯ ಬಗ್ಗೆ ಹೇಳುವುದಾದರೆ, ಇಲಾಖೆಗೆ ಮೆಗ್ಗಾನ್ ಸುತ್ತಮುತ್ತ ಬೆಳೆದಿರುವ ಮರಗಳ ಬಗ್ಗೆ ಇದ್ದ ಪ್ರೀತಿ ಇತರೆ ಇಲಾಖೆಯಲ್ಲಿರುವ ಮರಗಳ ಬಗ್ಗೆ ಇಲ್ಲದಿರುವುದು ಸ್ಪಷ್ಟವಾಗಿದೆ. ಪಾಪ! ಇನ್ನು ಈ ಇಲಾಖೆಗೆ ಸಿಟಿಯಲ್ಲಿ ಮರಗಳ ಸಂಖ್ಯೆ ಎಷ್ಟಿದೆ ಎಂಬದರ ಬಗ್ಗೆ ಮಾಹಿತಿ ಇದೆಯೋ ಇಲ್ಲವೋಗೊತ್ತಿಲ್ಲ. ಒಟ್ಟಿನಲ್ಲಿ ಮೆಗ್ಗಾನ್ ಬಳಿ ಸುತ್ತಮುತ್ತ ಇರುವ ಮರಗಳ ಬಗ್ಗೆ ಇರುವ ಪ್ರೀತಿ, ಪ್ರೇಮ ಬೇರೆಡೆ ಇಲ್ಲದಿರುವುದು ಸ್ಪಷ್ಟವಾಗಿದೆ. 


ನಿನ್ನೆ ಮೆಗ್ಗಾನ್ ಹಿಂಬದಿಯಲ್ಲಿ ಬೆಳೆದಿರುವ ಮರ ವಾಹನ ಸವಾರರ ಮೇಲೆ ಬಿದ್ದ ಕಾರಣ ಮರದ ಬುಡಕ್ಕೆ ಕೊಡಲಿ ಹಾಕಿದ ಅರಣ್ಯ ಇಲಾಖೆ ಕಾಳಜಿ ತೋರಿಸಿತ್ತು. ಆದರೆ ಈ ಕಾಳಜಿ ಬೇರೆಡೆ ಇಲ್ಲದಿರುವುದು ಸುದ್ದಿಯಾಗಿದೆ. ಹಾಗಾಗಿ ಇಲಾಖೆ ನಗರದಲ್ಲಿರುವ ಮರಗಳ ಸಂಖ್ಯೆ ಇಟ್ಟುಕೊಂಡಿದೆಯೋ ಇಲ್ಲವೋ ಗೊತ್ತಿಲ್ಲ.‌ ಇಟ್ಟುಕೊಂಡಿದ್ದರೆ ಎಲ್ಲದರ ಬಗ್ಗೆನೂ ಕಾಳಜಿ ತೋರಿಸಬಹುದಿತ್ತೇನೋ ಎಂಬುದು ನಮ್ಮ ಅಂಬೋಣ.

ಸಧ್ಯಕ್ಕೆ ಯಾವುದೇ ಪ್ರಾಣ ಹಾನಿ ಬಗ್ಗೆ ವರದಿಯಾಗಿಲ್ಲ. ಟ್ರಾನ್ಸ್ ಫಾರ್ಮರ್ ಸೇರಿದಂತೆ ಐದು ವಿದ್ಯುತ್ ಕಂಬ ಧರೆಗುರುಳಿದೆ. 

Why didn't the Forest Department, which was concerned about the trees near Meggan, go elsewhere?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close