SUDDILIVE || SHIVAMOGGA
ಡಾಂಬರೀಕರಣಕ್ಕೆ ನವುಲೆ ನಿವಾಸಿಗಳು ಮನವಿ-Navule residents appeal for asphalting
ಡಾಂಬರೀಕರಣದ ವಿಚಾರದಲ್ಲಿ ಸ್ಥಳೀಯರು ಶಿವಮೊಗ್ಗ ಸಂಸದ ಮತ್ತು ಶಾಸಕ ಚೆನ್ನಬಸಪ್ಪನವರಿಗೆ ಮನವಿ ಮಾಡಿದ್ದಾರೆ.
ನಗರದ ಹೊರವಲಯ ನವುಲೆಯಲ್ಲಿನ ಅರುಣೋದಯ ಶಾಲೆಯ ಎದುರಿನಿಂದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದವರೆಗಿನ ರಸ್ತೆಗೆ ಡಾಂಬರೀಕರಣ ಮಾಡಿಸಿಕೊಡುವಂತೆ ಇಲ್ಲಿನ ನವುಲೆಯಲ್ಲಿರುವ ಸರ್ಕಾರಿ ನೌಕರರ ನೀಲಮ್ಮ ಜ್ಞಾನೇಶ್ವರ ಬಡಾವಣೆ ಮತ್ತು ಮಲ್ನಾಡ್ ಕೌಂಟಿ ಬಡಾವಣೆ ನಿವಾಸಿಗಳು ಶಿವಮೊಗ್ಗದ ಸಂಸದರು ಮತ್ತು ಶಾಸಕ ಎಸ್.ಎನ್.ಚನ್ನಬಸಪ್ಪ ಅವರಿಗೆ ಭಾನುವಾರ ಮನವಿ ಸಲ್ಲಿಸಿದರು.
ಸುಮಾರು ಒಂದು ಕಿ.ಮೀ. ಉದ್ದದ ಈ ರಸ್ತೆ ಸಂಪೂರ್ಣ ಹಾಳಾಗಿದ್ದು, ಪ್ರಸ್ತುತ ಮಳೆಗಾಲದಲ್ಲಿ ಕಾಲ್ನಡಿಗೆ ಮಾಡಲೂ ಅಸಾಧ್ಯ ಪರಿಸ್ಥಿತಿ ತಲುಪಿದೆ. ಈ ರಸ್ತೆಗೆ ಹೊಂದಿಕೊಂಡಂತೆ ಅನೇಕ ಹೊಸ ಬಡಾವಣೆಗಳಿದ್ದು ಪ್ರತಿ ನಿತ್ಯ ಸರ್ಕಾರಿ ಹಾಸ್ಟೇಲಿನ ನೂರಾರು ವಿದ್ಯಾರ್ಥಿಗಳು, ನೂರಾರು ಬೈಕುಗಳು, ಕಾರು ಜೀಪುಗಳು, 40 ಟನ್ ಭಾರದ ಜಲ್ಲಿ ತುಂಬಿದ ಲಾರಿಗಳು, ಶಾಲಾ ವಾಹನಗಳು, ಸಾವಿರಾರು ಜನರು ಈ ರಸ್ತೆಯಲ್ಲಿ ಸಂಚರಿಸುತ್ತಾರೆ ಎಂದು ತಿಳಿಸಲಾಗಿದೆ.
ಕಳೆದ ಎರಡು ವರ್ಷಗಳಿಂದ ರಸ್ತೆ ಸಂಪೂರ್ಣ ಹಾಳಾಗಿ ನೂರಾರು ತಗ್ಗು ಗುಂಡಿಗಳಿಂದ ತುಂಬಿ ಹೋಗಿ ರಸ್ತೆ ಎಲ್ಲಿದೆ ಅಂತಾ ಹುಡುಕಬೇಕಾದ ಪರಿಸ್ಥಿತಿ ಇದೆ.ಈ ಕುರಿತು ಎರಡು ವರ್ಷದ ಹಿಂದೆಯೇ ಮಹಾನಗರ ಪಾಲಿಕೆ ಅಯುಕ್ತರಿಗೆ ಮನವಿ ಕೊಟ್ಟಿದ್ದೆವು. ಏನೂ ಪ್ರಯೋಜನವಾಗಲಿಲ್ಲ. ನಂತರ ಕಳೆದ ಫೆಬ್ರುವರಿ-ಮಾರ್ಚ್ನಲ್ಲಿ ಮತ್ತೆ ನೆನಪಿಗಾಗಿ ಮನವಿ ಕೊಟ್ಟಿದ್ದೆವು. ಆದರೂ ಪಾಲಿಕೆಯಿಂದ ಪೊಳ್ಳು ಭರವಸೆ ಸಿಕ್ಕಿತೇ ಹೊರತು ಬೇರೆ ಏನೂ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಲಾಗಿದೆ.
ಆದುದರಿಂದ ಈ ರಸ್ತೆಗೆ ತಕ್ಷಣ ಡಾಂಬರೀಕರಣ ಆಗುವಂತೆ ಸಹಕರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಈ ಸಂದರ್ಭದಲ್ಲಿ ಡಾ.ಬಾಲಕೃಷ್ಣ ಹೆಗಡೆ, ಬಾಲಾಜಿ ದೇಶಪಾಂಡೆ, ಈಶ್ವರ್, ಕೆ.ಬಿ.ಪ್ರಸನ್ನಕುಮಾರ, ಎನ್.ಜಿ.ಡಿ ಶಿವಕುಮಾರ ಮತ್ತಿತರರಿದ್ದರು.
Navule residents appeal for asphalting