ad

ಎಎ ವೃತ್ತದ ಬಳಿ ಮಿನಿ ಬಸ್ ಪಲ್ಟಿ- Mini bus overturns near AA Circle

SUDDILIVE || SHIVAMOGGA

ಎಎ ವೃತ್ತದ ಬಳಿ ಮಿನಿ ಬಸ್ ಪಲ್ಟಿ-Mini bus overturns near AA Circle

Mini Bus, overturn

ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್  ಪಲ್ಟಿಯಾಗಿದೆ. ಶಿವಮೊಗ್ಗದ ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ. ಅದೃಷ್ಟವಶಾತ್‌ ಯಾರಿಗೂ ಹಾನಿಯಾಗಿಲ್ಲ.

ಎಎ ವೃತ್ತದ ಬಳಿ ಬಸ್ ಬಂದಾಗ ಆಟೋವೊಂದು ಅಡ್ಡ ಬಂದಿದೆ. ಈ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್‌ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ಸಿನಲ್ಲಿ ಪ್ರಯಾಣಿಕರಾರೂ ಇರಲಿಲ್ಲ. ಚಾಲಕ ಒಬ್ಬರೆ ಇದ್ದರು. ಪಶ್ಚಿಮ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.


ಗೋಪಿ ವೃತ್ತದಿಂದ ಆಟೋವೊಂದು ವೇಗವಾಗಿ ಬಂದಿದೆ. ಬಿಹೆಚ್ ರಸ್ತೆಯಿಂದ ಬಸ್ ನಿಲ್ದಾಣದ ಕಡೆಗೆ ಹೊರಟ ಕೆಎ 51 ಡಿ 2597 ಕ್ರಮ ಸಂಖ್ಯೆಯ ಮಿನಿಬಸ್ ಆಟೋವನ್ನ ತಪ್ಪಿಸಲು ಹೋಗಿ ಬ್ರೇಕ್ ಹಾಕಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಚಾಲಕ ಶ್ರೀಧರನ ಕಡೆ ಬಿದ್ದರೂ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

Mini bus overturns near AA Circle

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close