SUDDILIVE || SHIVAMOGGA
ಮಾದಿಗ ಮತ್ತು ಇತರೆ ಜಾತಿಗಳಿಂದ ಆ.1 ರಂದು ಪ್ರತಿಭಟನೆ- Protest by Madiga and other castes on August 1st
ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೆ ವಿಳಂಬ ನೀತಿ ಖಂಡಿಸಿ ರಾಜ್ಯ ಮಾದಿಗ ಮತ್ತು ಸಂಬಂಧಿತ ಉಪಜಾತಿಗಳ ಬಲ ಮೀಸಲಾತಿ ಜಾರಿ ಒಕ್ಕೂಟ ಸಮಿತಿ ಜಿಲ್ಲಾ ಶಾಖೆ ಆಗಸ್ಟ್ ಒಂದರಂದು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಮಿತಿಯ ಅಧ್ಯಕ್ಷ ಅಣ್ಣಪ್ಪ ಒಳ ಮೀಸಲಾತಿ ವಿಷಯದಲ್ಲಿ ಮೀನ ಮೇಷ ತೋರಿದ ಕಾರಣ ಸಮಾಜದ ಮಹಾನ್ ನಾಯಕರುಗಳು ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದಲ್ಲಿ ಅಪೀಲು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಏಳು ಜನ ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠ ಆಯಾ ರಾಜ್ಯಗಳು ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಒಳ ಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರಗಳಿಗೆ ಪಾದ ಪರಮಾಧಿಕಾರ ನೀಡಲಾಗಿದೆ ಎಂದು ಐತಿಹಾಸಿಕ ತೀರ್ಪು ನೀಡಿತ್ತು ಎಂದು ತಿಳಿಸಿದರು.
ತೀರ್ಪು ಜಾರಿಗೊಂಡು ಆಗಸ್ಟ್ 1 ರಂದು ಒಂದು ವರ್ಷ ಕಳೆಯಲಿದೆ. ಆದರೆ ಒಂದು ವರ್ಷ ಕಳೆದರೂ ಒಳ ಮೀಸಲಾತಿ ಜಾರಿಗೊಳಿಸದೆ ರಾಜ್ಯ ಸರ್ಕಾರ ಮೀನಾ ಮೇಷ ಎಣಿಸುತ್ತಿದೆ ಐತಿಹಾಸ ತೀರ್ಪಿಗೂ ಸರ್ಕಾರ ಕ್ರಮ ಕೈಗೊಳ್ಳದಿರುವುದು ಖಂಡನೀಯ. ಈ ಹಿನ್ನಲೆಯಲ್ಲಿ ಆಗಸ್ಟ್ ಒಂದರಂದು ಅನೇಕ ಸಂಘಟನೆಗಳು ಸ್ವ ಇಚ್ಛೆಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
Protest by Madiga and other castes on August 1st